ನಿಮ್ಮ ಪ್ರೀತಿಯ ಮತ ವಿಶ್ವಾಸಪೂರ್ವಕ ಬೆಂಬಲ ಮತ್ತು ಅಮೂಲ್ಯ ಸಮಯದ ಫಲವಾಗಿ ನಾನು ನಿಮ್ಮ ಎಲ್ಲರ ಆಶೀರ್ವಾದದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ನೂತನ ಅಧ್ಯಕ್ಷ ಕೆಂಪರಾಜಯ್ಯ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಈ ಐತಿಹಾಸಿಕ ಗೆಲುವು ನನ್ನದೆಂದು ನಾನು ಎನಿಸಿಕೊಳ್ಳುವುದಿಲ್ಲ. ಇದು ನಮ್ಮೆಲ್ಲರ ಒಗ್ಗಟ್ಟು, ದಿಟ್ಟ ನಿರ್ಧಾರ ಮತ್ತು ವಕೀಲ ಸಮಾಜದ ಬಲದ ಸಂಕೇತವಾಗಿದೆ. ನೀವು ತೋರಿದ ಪ್ರೀತಿ, ವಿಶ್ವಾಸ ಮತ್ತು ಶ್ರಮ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಮತವು ನನ್ನ ಮೇಲೆ ಇರುವ ನಿಮ್ಮ ನಂಬಿಕೆಯನ್ನು ಪ್ರತಿಬಿಂಬಿಸಿದೆ. ಈ ನಂಬಿಕೆಗೆ ತಕ್ಕಂತೆ ಸತ್ಯನಿಷ್ಟೆಯಿಂದ, ಬದ್ದತೆಯಿಂದ ಹಾಗೂ ಜನಪರ ದೃಷ್ಟಿಕೋನದಿಂದ ಕಾರ್ಯನಿರ್ವಹಿಸುವೆನೆಂಬ ಭರವಸೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಗೆಲುವು ಆರಂಭ ಮಾತ್ರ, ಇನ್ನು ಮುಂದೆ ವಕೀಲ ಸಮಾಜದ ಹಿತಕ್ಕಾಗಿ ಉತ್ತಮ ಆಡಳಿತಕ್ಕಾಗಿ ಮತ್ತು ಸಂಘದ ಶ್ರೇಯಸ್ಸಿಗಾಗಿ ನಾವು ತಂಡವಾಗಿ ಮುನ್ನಡೆಯಬೇಕು. ನಿಮ್ಮ ಸಲಹೆಗಳು, ತಿದ್ದುವಿಕೆಗಳು ಹಾಗೂ ಸಕಾಲಿಕ ಸಹಕಾರ ಸದಾ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ನನ್ನ ಹೃತ್ಪೂರ್ವಕ ಧನ್ಯವಾದಗಳು ಪ್ರತಿ ವಕೀಲ ಗೆಳೆಯರಿಗೂ, ನೀವು ಇಲ್ಲದಿದ್ದರೆ ಈ ವಿಜಯ ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ.