ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಎಂದಿನಂತೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,68,439 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.73.45ರಷ್ಟು ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ಮೊದಲ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ 600 ಅಂಕಗಳಿಗೆ 597 ಅಂಕ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಆರ್.ದೀಕ್ಷಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು 600 ಅಂಕಗಳಿಗೆ 599 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬಿಂದು ನವಲೆಗೆ ತೃತೀಯ ಸ್ಥಾನ ಲಭಿಸಿದ್ದು 600ಕ್ಕೆ 598 ಅಂಗಳನ್ನು ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 2,31,461 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.82.54ರಷ್ಟು ಫಲಿತಾಂಶ ದಾಖಲಾಗಿದೆ., ವಾಣಿಜ್ಯ ವಿಭಾಗದಲ್ಲಿ 1,55,425 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ .76.07ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 81ಮ553 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ.53.29ರಷ್ಟು ಫಲಿತಾಂಶ ದಾಖಲಾಗಿದೆ.
- 1.ಉಡುಪಿ-93.90,
2.ದಕ್ಷಿಣ ಕನ್ನಡ-93.57,
3.ಬೆಂಗಳೂರು ದಕ್ಷಿಣ-85.36,
4.ಕೊಡಗು-83.84,
5.ಬೆಂಗಳೂರು ಉತ್ತರ- 83.31,
6.ಉತ್ತರ ಕನ್ನಡ 82.93,
7.ಶಿವಮೊಗ್ಗ 79.91%,
8.ಬೆಂಗಳೂರು ಗ್ರಾಮಾಂತರ-79.70%,
9.ಚಿಕ್ಕಮಗಳೂರು-79.56%,
10.ಹಾಸನ-77.56%,
11.ಚಿಕ್ಕಬಳ್ಳಾಪುರ-75.80%,
12.ಮೈಸೂರು-74.30%,
13.ಚಾಮರಾಜ ನಗರ ಜಿಲ್ಲೆ-73.97%,
14.ಮಂಡ್ಯ ಜಿಲ್ಲೆ-73.27%,
15.ಬಾಗಲಕೋಟೆ-72.83%,
16.ಕೋಲಾರ ಜಿಲ್ಲೆ-72.45%
17.ಧಾರವಾಡ-72.32%,
18.ತುಮಕೂರು ಜಿಲ್ಲೆ-72.02,
19.ರಾಮನಗರ ಜಿಲ್ಲೆ-69.71,
20.ದಾವಣಗೆರೆ ಜಿಲ್ಲೆ-69.45,
21.ಬೀದರ್ ಜಿಲ್ಲೆ-67.31,
22.ಕೊಪ್ಪಳ ಜಿಲ್ಲೆ-67.20,
23.ಚಿಕ್ಕೋಡಿ-66.76%,
24.ಗದಗ ಜಿಲ್ಲೆ-66.64%,
25.ಬೆಳಗಾವಿ65.37%
26.ಬಳ್ಳಾರಿ-64.41%
27.ಚಿತ್ರದುರ್ಗ-59.87%
28.ವಿಜಯಪುರ-58.81%
29.ರಾಯಚೂರು-58.75%
30.ಕಲಬುರಗಿ-55.70%
31.ಯಾದಗಿರಿ-48.45%