ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಆಗಿ ಎಂ.ಎ.ಬೇಬಿ ಆಯ್ಜೆಯಾಗಿದ್ದಾರೆ. ತಮಿಳುನಾಡಿನ ಮದುರೈನಲ್ಲಿ ನಡೆದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಬೇಬಿ ಅವರನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಕಮ್ಯುನಿಸ್ಟ್ ಚಳವಳಿಯ ಹಿರಿಯ ನಾಯಕರಾದ ಇ.ಎಂ.ಎಸ್, ಹರಿಕಿಶನ್ ಸುರ್ಜಿತ್, ಜ್ಯೋತಿಬಸು, ಪ್ರಕಾಶಕಾರಟ್, ಸೀತಾರಾಂ ಜೊತೆಗೂಡಿ ಅಪಾರ ಅನುಭವ ಪಡೆದಿದ್ದಾರೆ.
ಎಸ್.ಎಫ್.ಐ ಹಾಗೂ ಡಿವೈಎಫ್ ಐ, ಅಖಿಲ ಭಾರತ ಅಧ್ಯಕ್ಚರಾಗಿ ದೇಶಾದ್ಯಂತ ಸಂಚರಿಸಿ ವಿದ್ಯಾರ್ಥಿ ಯುವಜನರನ್ನು ಸಂಘಟಿಸಲು ಶ್ರಮಿಸಿದ ನಾಯಕ.
ಕೇರಳದಲ್ಲಿ ಸಿಪಿಎಂ ಸತತವಾಗಿ ಈಗಲೂ ವಿದ್ಯಾರ್ಥಿ ಯುವಜನರ ಒಂದು ಬಲಿಷ್ಠವಾದ ರಾಜಕೀಯ ಶಕ್ತಿಯಾಗಿರಲು ಪ್ರಮುಖವಾದ ಕಾರಣ ಅಲ್ಲಿನ ಯುವಜನ ಚಳವಳಿ. ಅದಕ್ಕೆ ಪ್ರಮುಖವಾದ ಪ್ರೇರಣಾ ಶಕ್ತಿಯಾಗಿ ಶ್ರಮಿಸಿದವರು ಕಾಮ್ರೇಡ್ ಬೇಬಿ ಹಾಗೂ ಕೋಡಿಯೇರಿ ಬಾಲಕೃಷ್ಣನ್ ಅಂತಹ ಹಲವು ನಾಯಕರು ಮತ್ತು ಅವರ ನೇತೃತ್ವದಲ್ಲಿ ಸಂಘಟಿದಿ ಸಮರಧೀರ ತ್ಯಾಗ ಬಲಿದಾನ ಗಳ ಅದ್ವೀಯ ಹೋರಾಟಗಳು ನಡೆಸಿದ್ದಾರೆ ಎಂದು ಸಿಪಿಐಎಂ ಮುಖಂಡ ಕೆ.ಮಹಾಂತೇಶ್ ತಿಳಿಸಿದ್ದಾರೆ.
ರಾಜ್ಯ ಸಭಾ ಸದಸ್ಯರಾಗಿ, ಶಾಸಕರಾಗಿ ಹಾಗೂ ಕೇರಳದ ಶಿಕ್ಷಣ ಹಾಗೂ ಸಂಸ್ಕೃತಿ ಸಚಿವರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಕೆಲಸಮಾಡಿದ ಮತ್ತು ನಮ್ಮದೇಶದ ಹೆಸರಾಂತ ಸಿನಿಮಾ, ಸಾಂಸ್ಕೃತಿಕ, ರಂಗಭೂಮಿ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳು ಹಾಗೂ ಇತರೆ ಎಲ್ಲ ಜಾತ್ಯಾತೀತ ಶಕ್ತಿಗಳು ಹಾಗೂ ಪಕ್ಷಗಳ ನಾಯಕರೊಂದಿಗೆ ಅತ್ಯುತ್ತಮ ಹಾಗೂ ಸೌಹಾರ್ದ ಸಂಬಂಧಗಳನ್ನು ಬೆಳೆಸಿ ಹಾಗೂ ಸೌಹಾರ್ದತೆ ಕಾಪಾಡಿಕೊಂಡಿರುವ ನಾಯಕ ಎಂದಿದ್ದಾರೆ.