ತಾಲಿಬಾನಿಯರು ವಶಪಡಿಸಿಕೊಳ್ಳುವ ಮೊದಲ ಕಾಬೂಲ್ ನ ಇಂಡಿಯನ್ ಮಿಷನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ಪಾಸ್ ಪೋರ್ಟ್ ಹೊಂದಿಲ್ಲದೇ ಇರುವುದರಿಂದ ಅವರನ್ನು ಆಫ್ಘಾನಿಸ್ತಾನದಿಂದ ಹೊರಹಾಕಲಾಗುತ್ತಿದೆ. ಸುಮಾರು 200 ರಿಂದ 250 ಮಂದಿ ಆಫ್ಘನ್ನರು ಪಾಸ್ ಪೋರ್ಟ್ ಇಲ್ಲದ ಕಾರಣ ಅವರಿಗೆ ವೀಸಾ ನೀಡಲು ಭಾರತ ಒಪ್ಪಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ.
ಪಾಸ್ ಪೋರ್ಟ್ ಇಲ್ಲದ ಆಫ್ಘನ್ನರು ಬೇರೆ ದೇಶಗಳಿಗೆ ಹೋಗಲು ಆಗುತ್ತಿಲ್ಲ. ತಾಲಿಬಾನ್ ಆಗಸ್ಟ್ 31ರಂದು ಅಮೆರಿಕಾ ಪ್ರಜೆಗಳು ಮತ್ತು ಪಡೆಗಳ ಕಾಬೂಲ್ ತೊರೆಯಲು ಗಡುವು ನೀಡಿದ್ದು, ಇದು ಇಂಡಿಯನ್ ಮಿಷನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಈಗ ಸಂಕಷ್ಟ ಎದುರಾಗಿದೆ.
ಅಮೆರಿಕಾ ಕಾಬೂಲ್ ತೊರೆದ ಮೇಲೆ ಏನು ಮಾಡಬೇಕೆಂಬ ಚಿಂತೆ ಎದುರಾಗಿದೆ. ತಾಲಿಬಾನಿಯರು ನಮ್ಮನ್ನು ಗುರಿ ಮಾಡಿಕೊಂಡಿದ್ದಾರೆ. ಭಾರತವೂ ವೀಸ ನೀಡುತ್ತಿಲ್ಲ. ನಾವು ಮುಂದೇನು ಮಾಡಬೇಕೆಂಬುದು ತೋಚುತ್ತಿಲ್ಲ ಎಂದು ಇಂಡಿಯನ್ ಮಿಷನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರೊಬ್ಬರು ಹೇಳಿದ್ದಾರೆ.
ಈ ನಡುವೆ ಭಾರತ ವಿದೇಶಾಂಗ ಸಚಿವರು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ದೆಹಲಿಯಲ್ಲಿ ನೂತನವಾಗಿ ಆರಂಭಿಸಿರುವ ಆಫ್ಘಾನಿಸ್ತಾನ ಘಟಕ ಪ್ರಜೆಗಳ ಮನವೆಇಗಳನ್ನು ಪರಿಶೀಲಿಸಲಿದೆ. ವೀಸಾ ಅರ್ಜಿಗಳನ್ನು ಸದ್ಯಕ್ಕೆ ತಡೆಹಿಡಿದೆ ಎಂದು ತಿಳಿಸಿದ್ದಾರೆ.
ಆಫ್ಘಾನಿಸ್ತಾನ ವೀಸಾಗಳನ್ನು ರದ್ದುಪಡಿಸಿದೆ. ಹೀಗಾಗಿ ಆಫ್ಘನ್ ಪ್ರಜೆಗಳ ಇ-ವೀಸಾ ಮೂಲಕ ಪ್ರಯಾಣ ಮಾಡಬಹುದು. ಪಾಸ್ ಪೋರ್ಟ್ ಇಲ್ಲದೆ ವೀಸ ನೀಡುತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಇಂಡಿಯನ್ ಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದ ಆಫ್ಘನ್ ನೌಕರರು ಪಾಸ್ ಪೋರ್ಟ್ ಗಳನ್ನು ಕಳೆದುಕೊಂಡಿದ್ದಾರೆ. ನೌಕರರ ಕುಟುಂಬದ ಸದಸ್ಯರು ಪಾಸ್ ಪೋರ್ಟ್ ಹೊಂದಿಲ್ಲ. ಪಾಸ್ ಪೋರ್ಟ್ ಕಚೇರಿ ಬಾಗಿಲು ಮುಚ್ಚಿದೆ. ಮತ್ತೆ ಯಾವಾಗ ಆರಂಭವಾಗುವುದೋ ತಿಳಿಯುತ್ತಿಲ್ಲ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.