ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನದ ಕುರಿತು ಕೆಲಸದ ಒತ್ತಡದಿಂದ ದೂರು ನೀಡಲು ಆಗಿರಲಿಲ್ಲ. ಹೀಗಾಗಿ ಮಾ.25ರಂದು ನಾನೇ ಕುರಿತು ದೂರು ಬರೆದಿದ್ದೇನೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಲ್ಲಿದ್ದಾರೋ ಅಲ್ಲಿಗೆ ಹೋಗಿ ದೂರ ನೀಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾದಾಗ ನಾನು ಉದಾಸೀನ ಮಾಡಿದ್ದೆ. ಆದರೆ ವಿಧಾನಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ನಾನು ಮಾತಾಡಿದ್ದೆ. ಈಗ ದೂರು ನೀಡುವ ತೀರ್ಮಾನಕ್ಕೆ ಬಂದಿದ್ದು, ಸೆಷನ್ ನಲ್ಲಿ ಮಾತಾಡಿರೋ ವಿಡಿಯೋಸಹಿತ ದೂರು ನೀಡುತ್ತೇನೆ. ಅಪರಿಚಿತರು ಹನಿಟ್ರ್ಯಾಪ್ ಮಾಡಲು ಬಂದಿದ್ದರು ಎಂದು ದೂರು ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ವಿರುದ್ಧ ಹನಿಟ್ರ್ಯಾಪ್ ಮಾಡಲು ಎರಡು ಬಾರಿ ಯುವಕರೇ ಬಂದಿದ್ದರು. ಆಮೇಲೆ ಲೇಡಿ ಲಾಯರ್ ಎಂದು ಹೇಳಿಕೊಂಡು ಬಂದಿದ್ದರು. ಅವರ ಫೋಟೋ ತೋರಿಸಿದರೆ ನಾನು ಪರಿಚಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಹಿತಿಯನ್ನು ನೀಡಿದ್ದೇನೆ. ಅವರು ದೂರು ನೀಡುವಂತೆ ಹೇಳಿದ್ದಾರೆ. ಹಾಗಾಗಿ ಇವತ್ತು ದೂರು ನೀಡುತ್ತೇನೆ. ಮಾ.30ರಂದು ದೆಹಲಿಗೆ ಹೋಗುತ್ತೇನೆ. ಹೈಕಮಾಂಡ್ ನಾಯಕರಿಗೂ ಈ ವಿಷಯವನ್ನು ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.


