ಅಲ್ಪಸಂಖ್ಯಾತರ ಸಮುದಾಯದ ಪರವಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಸಂತೋಷ ತಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಶರೀಫ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ ಎಂಬ ಬೇಡಿಕೆಯನ್ನು ಸಲ್ಲಿಸಿದ್ದೆವು. ಕೌಶಲ್ಯ ಅಭಿವೃದ್ಧಿ, ವಿದೇಶಿ ಶಿಕ್ಷಣ ಸಾಲ ಸೌಲಭ್ಯದ ಹೆಚ್ಚಳ, ಉಲಮಾಗಳ ಗೌರವಧನ ಹೆಚ್ಚಳ , ಮೌಲಾನಾ ಆಜಾದ್ ಸಂಸ್ಥೆಗಳ ಅಭಿವೃದ್ಧಿ, ಮಹಿಳಾ ಕಾಲೇಜ್ ಗಳು. ಈ ರೀತಿ ಒಟ್ಟಾರೆ ಈ ಸಮುದಾಯದ ಅರ್ಹತೆಗನುಸಾರ 5ಸಾವಿರ ಕೋಟಿಯ ಬೇಡಿಕೆ ಇಟ್ಟಿದ್ದೆವು. ಅದರಲ್ಲಿ ಸುಮಾರು 4ಸಾವಿರ ಕೋಟಿ + ವಿವಿಧ ಯೋಜನೆಗಳಲ್ಲಿ ಘೋಷಣೆಯಾಗಿದೆ. ಮುಸ್ಲಿಂ ಕಾಲೋನಿ ಗಳ ಅಭಿವೃದ್ಧಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಲು ಸೂಕ್ತ ಯೋಜನೆ ಎಂದು ಹೇಳಿದ್ದಾರೆ.
ಈ ಎಲ್ಲಾ ಯೋಜನೆಗಳು ಸಮುದಾಯದ ತಲಮಟ್ಟಕ್ಕೆ ತಲುಪಿದಾಗ ಮಾತ್ರ ಸಮುದಾಯಕ್ಕೆ ಶಕ್ತಿ ನೀಡಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಿಕೊಳ್ಳಬೇಕು. ನಮ್ಮ ಸಮುದಾಯವೂ ಈ ಎಲ್ಲಾ ಯೋಜನೆಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಅದು ಕಾರ್ಯಗತ ವಾಗಲು, ಜನರಲ್ಲಿ ಜಾಗೃತಿ ಮೂಡಿಸಲು ಯೋಚಿಸಬೇಕು. ಈ ಎಲ್ಲಾ ಅಭಿವೃದ್ಧಿ ಜೊತೆಗೆ ಸಮುದಾಯಕ್ಕೆ ಧೈರ್ಯ ತುಂಬುವ ಕೆಲಸವೂ ಸರ್ಕಾರ ಮಾಡಬೇಕಿದೆ. 16ನೇ ಬಾರಿ ಯಶಸ್ವಿ ಬಜೆಟ್ ಘೋಷಿಸಿದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರಿಗೂ ಕೃತಙತೆಗಳು ಸಲ್ಲಿಸುತ್ತೇನೆ ಎಂದಿದ್ದಾರೆ.
ಇನ್ನು ಕೆಲವೊಂದು ಮಾಧ್ಯಮಗಳು ಬಜೆಟ್ ಬಗ್ಗೆ ವಾಸ್ತವ ವಿರುದ್ದ ಅಲ್ಪಸಂಖ್ಯಾತ ಪರ ಬಜೆಟ್ ಎಂಬ ಸುಳ್ಳು ಆಪಾದನೆ ಮಾಡುತ್ತಿರುವುದು ಕಾಣುತ್ತಿದೆ. 4ಲಕ್ಷ ಕೋಟಿ ಗಾತ್ರದ ಬಜೆಟ್ ನಲ್ಲಿ ನಮ್ಮ ಪರ್ಸೆಂಟೇಜ್ ಮತ್ತು ಅಗತ್ಯಕ್ಕನುಸಾರ , ನ್ಯಾಯಬದ್ಧವಾಗಿ ಬಜೆಟ್ ಗಾತ್ರದ ಒಂದು ಪರ್ಸೆಂಟ್ ಕೂಡ ಈ ಸಮುದಾಯಕ್ಕೆ ನೀಡಿದ ಗಾತ್ರದಲ್ಲಿ ಸರಿದೂಗುದಿಲ್ಲ ಎಂಬುದು ಪ್ರಾಥಮಿಕ ಮಾಹಿತಿ ಇರುವ ಎಲ್ಲರಿಗೂ ಸ್ಪಷ್ಟವಾದ ವಿಷಯ ಎಂದು ತಿಳಿಸಿದ್ದಾರೆ.