ಬಹುಮುಖಿ ಬಳಗ, ಗೋಪಿಕಾ ಪ್ರಕಾಶನ ಬೆಂಗಳೂರು ವತಿಯಿಂದ ಹಡವನಹಳ್ಳಿ ವೀರಣ್ಣಗೌಡ ಅವರು ಬರೆದಿರುವ ‘ಉರಿವ ದೀಪದ ಕೆಳಗೆ’ ಕಥಾ ಸಂಕಲನ ಬಿಡುಗಡೆ ಸಮಾರಂಭವನ್ನು ತುಮಕೂರು ನಗರದ ವಿದ್ಯೋದಯ ಲಾ ಕಾಲೇಜು ಪಕ್ಕದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ಫೆಬ್ರವರಿ 23ರಂದು ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಹಿರಿಯ ಲೇಖಕ ಡಾ.ಜಿ.ವಿ.ಆನಂದಮೂರ್ತಿ ಅವರು ಉರಿವ ದೀಪದ ಕೆಳಗೆ ಕಥಾ ಸಂಕಲನವನ್ನು ಬಿಡುಗಡೆಗೊಳಿಸುವರು. ಲೇಖಕಿ ಬಾ.ಹ.ರಮಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ವಿಮರ್ಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀ.ಹ. ಕೃತಿಯ ಪರಿಚಯ ಮಾಡುವರು. ಕಾರ್ಯಕ್ರಮದಲ್ಲಿ ಎಸ್.ಆರ್.ಗೋವಿಂದರಾಜು, ಎನ್.ಕೆ.ಸುಬ್ರಮಣ್ಯ, ಹಡವನಹಳ್ಳಿ ವೀರಣ್ಣಗೌಡ ಭಾಗವಹಿಸಲಿದ್ದು, ಪುಸ್ತಕದ ಕುರಿತು ಹಿರಿಯ ಪತ್ರಕರ್ತ ಸಾ.ಚಿ.ರಾಜಕುಮಾರ ಮಾತನಾಡುವರು. ಮಂಜುನಾಥ ದಂಡಿನಶಿವರ ಪಾಲ್ಗೊಳ್ಳುವರು.
ಕಲಾ ಕ್ಷೇತ್ರದ ಡಿ.ಎನ್.ದಿವಾಕರ, ಶಿಕ್ಷಣ ಕ್ಷೇತ್ರದ ರಾಮಯ್ಯ, ಪುಸ್ತಕೋದ್ಯಮದಲ್ಲಿ ಸಿದ್ದೇಶ್, ಅಗ್ನಿಶಾಮಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಧರಣೇಶ್ ಅವರನ್ನು ಸನ್ಮಾನಿಸಲಾಗುವುದು. ಎಚ್.ಎಂ. ವಸಂತಕುಮಾರ್, ಕೆ.ಶಿವಮ್ಮ, ರಾಯಲ್ ರವಿ ಭಾಗವಹಿಸಲಿದ್ದು, ಎಂ.ವೈ.ಗಂಗಣ್ಣ ಅವರಿಂದ ಭಾವಗೀತೆಗಳ ಗಾಯನ ಕಾರ್ಯಕ್ರಮವಿದ.