Sunday, March 2, 2025
Google search engine
Homeಮುಖಪುಟಸೌಹಾರ್ದತೆ ಕಾಪಾಡಲು ಮನವಿ

ಸೌಹಾರ್ದತೆ ಕಾಪಾಡಲು ಮನವಿ

ಸೌಹಾರ್ದ ತುಮಕೂರು ವತಿಯಿಂದ ಮಹಾತ್ಮ-ಹುತಾತ್ಮ ಸೌಹಾರ್ದ ಸಪ್ತಾಹದ ಅಂಗವಾಗಿ ನಗರದ ಟೌನ್‌ಹಾಲ್ ನಲ್ಲಿ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸೌಹಾರ್ದ ಸಂಕಲ್ಪ ದಿನ, ಸಭೆ-ಪ್ರತಿಭೆ-ಸ್ವೀಕಾರ, ಸೌಹಾರ್ದ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಧರ್ಮ, ಜಾತಿ, ಭಾಷೆ ಇವೆಲ್ಲವೂ ಜನರ ನಡುವೆ ಸೌಹಾರ್ದ ಬೆಸೆಯುವ ಅಂಶಗಳು, ಆದರೆ ಇಂದು ಇವುಗಳೇ ಜನರ ನಡುವೆ ದ್ವೇಷ ಬಿತ್ತುವ ವಿಷಯಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ.ಇಂತಹ ಅಂಶಗಳ ಬಗ್ಗೆ ಜನರು ಯಾವಾಗಲು ಎಚ್ಚರಿಕೆಯಿಂದ ಹೆಜ್ಜೆಗಳ ನಿಡಬೇಕಿದೆ.ಮೊದಲು ನಮ್ಮ ನಡುವೆಯೇ ಸೌಹಾರ್ದವನ್ನು ಮೈಗೂಡಿಸಿಕೊಂಡು,ನಮ್ಮ ನೆರೆಹೊರೆಯವರನ್ನು ಸಹ ಸೌಹಾರ್ದದೆಡೆಗೆ ತೆಗೆದುಕೊಂಡು ಹೋಗಬೇಕಾಗಿದೆ.ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಕರ್ನಾಟಕ, ಹಾಗೆಯೇ ತುಮಕೂರು ಜಿಲ್ಲೆ ರಾಷ್ಟ್ರಕವಿ ಕುವೆಂಪು ಮಾತಿನಂತೆ ಶಾಂತಿಯ ತೋಟವಾಗಿದೆ. ನಾವು ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ತಾಳ್ಮೆ, ಸಹನೆಯಿಂದ ವರ್ತಿಸಬೇಕಿದೆ. ಎಲ್ಲ ಧರ್ಮ, ಜಾತಿ, ವರ್ಗದ ಜನರೊಂದಿಗೆ ಸ್ನೇಹದಿಂದ ಬೇರತ ಬಾಳುವುದನ್ನು ಕಲಿಯಬೇಕಾಗಿದೆ. ನಮ್ಮ ನಡುವೆ ಇರುವ ಗೋಡೆಯನ್ನು ಕೆಡವಿ, ಬಾಂಧವ್ಯ ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಾಹಿತಿ ಡಾ.ಶೈಲಾನಾಗರಾಜು ಮಾತನಾಡಿ, ಗಾಂಧಿಜೀ ಸಾವು ಬರಿ ಸಾವಲ್ಲ. ಅದೊಂದು ರಾಕ್ಷಸಿಯ ಗುಣ. ಇಂದಿಗೂ ತೀರ ನಿಕೃಷ್ಟವಾಗಿ ನಡೆದುಕೊಂಡು ವ್ಯಕ್ತಿಯನ್ನು ನಾಥೂರಾಮ್ ಗೊಡ್ಸೆಗೆ ಹೊಲಿಕೆ ಮಾಡುತ್ತೇವೆ. ನಮ್ಮಲ್ಲಿಯೂ ಅಂತಹ ಗುಣಗಳಿವೆ. ಇವುಗಳನ್ನೆಲ್ಲಾ ತೊಡೆದು ಹಾಕುವಂತಹ ಮಾನವೀಯ, ಜಾತ್ಯತೀತ, ಧರ್ಮಾತೀತ ಗುಣಗಳನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ. ಸೌಹಾರ್ಧತೆಯನ್ನು ಪ್ರತಿದಿನ ಆಚರಿಸಬೇಕಿದೆ. ಸಂಘರ್ಷಗಳ ಹೊರತಾಗಿ,ಸೌಹಾರ್ದ,ಶಾಂತಿಯಿAದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ಸೌಹಾರ್ದ ತುಮಕೂರಿನ ಸಿ.ಯತಿರಾಜು ಮಾತನಾಡಿ, ಇಂದು ಗೋಡ್ಸೆ ಸಂತಾನ ಹೆಚ್ಚಾಗಿ, ಗಾಂಧಿ ಸಂತಾನ ಕಡಿಮೆಯಾಗಿದೆ. ಇಂದಿಗೂ ವಿದೇಶಗಳು ಭಾರತವನ್ನು ನೋಡುವುದು ಗಾಂಧಿ ನಾಡು ಎಂದು. ತಂತ್ರಜ್ಞಾನದ ಬಲದಿಂದ ಸುಳ್ಳು ಮತ್ತು ದ್ವೇಷವನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಇದನ್ನು ತಡೆಯುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಸೌಹಾರ್ಧವನ್ನು ವ್ಯಾಪಕವಾಗಿ ಹರಡಬೇಕಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ತಪ್ಪು ಮಾಹಿತಿ, ಅಜ್ಞಾನವನ್ನು ಹರಡಲಾಗುತ್ತಿದೆ. ನಾನು ತಂತ್ರಜ್ಞಾನವನ್ನು ವಿರೋಧಿಸುತ್ತಿಲ್ಲ. ಆದರೆ ಅದರ ದುರ್ಬಳಕೆಯನ್ನು ತಡೆಯಬೇಕಾಗಿದೆ. ಅಮೇರಿಕಾದ ಅಧ್ಯಕ್ಷನಾಗಿ ಡೋನಾಲ್ಡ್ ಟ್ರಂಪ್ ಬಂದ ಮೇಲೆ ಹಲವಾರು ಅವಘಡಗಳ ಮುನ್ಸೂಚನೆ ಬರುತ್ತಿದೆ. ಉದ್ಯಮಿಗಳೇ ಸಚಿವ ಸಂಪುಟದಲ್ಲಿದ್ದಾರೆ. ಇದು ಯೂರೋಪ್‌ಗೂ ಹರಡುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಬಂದರೆ ರಾಜ್‌ಘಾಟ್‌ಗೆ ಕರೆದುಕೊಂಡು ಹೋಗುವ ಪ್ರಧಾನಿ ಮತ್ತು ಸಂಸದರು ನಾಥೂರಾಮ್ ಗೂಡ್ಸೆಯನ್ನು ಆಧಾರಿಸುತ್ತಾರೆ. ಈ ರೀತಿಯ ನಾಟಕೀಯ ಭಕ್ತಿಯ ಮುಖವಾಡವನ್ನು ಕಳಚಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಾಟಕಕಾರ ಎಸ್.ಎ.ಖಾನ್, ದಲಿತ ಮುಖಂಡ ಪಿ.ಎನ್.ರಾಮಯ್ಯ, ಕಾರ್ಮಿಕ ಮುಖಂಡ ಕಂಬೇಗೌಡ, ರಂಗನಿರ್ದೇಶಕ ಹೊನ್ನವಳ್ಳಿ ನಟರಾಜು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular