ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಲೇಖಕಿ ಗೀತಾ ವಸಂತ್ ಬರೆದಿರುವ ‘ಪ್ರಾಣಪಕ್ಷಿಯ ರೆಕ್ಕೆ’ ಪುಸ್ತಕ ಬಿಡುಗಡೆ ಕರ‍್ಯಕ್ರಮವನ್ನು ಜನವರಿ 11ರಂದು ಸಂಜೆ 4 ಗಂಟೆಗೆ ತುಮಕೂರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಲೇಖಕಿ ಪ್ರತಿಭಾ ನಂದಕುಮಾರ್ ಪುಸ್ತಕ ಬಿಡುಗಡೆಗೊಳಿಸುವರು. ಅನುಸಂಧಾನದಲ್ಲಿ ಸಾಹಿತಿ ಡಾ. ನಟರಾಜ ಬೂದಾಳು ಮತ್ತು ಗೋವಿಂದರಾಜು ಎಂ ಕಲ್ಲೂರು ಇರಲಿದ್ದು, ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಭಾಗವಹಿಸುವರು.


