ಎಚ್.ಎಂ.ಪಿ.ವಿ ವೈರಸ್ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಿಗೆ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಜನತೆ ಎಚ್.ಎಂ.ಪಿ.ವಿ ವೈರಸ್ ಕುರಿತು ಆತಂಕ ಬೇಡ, ವೈರಸ್ ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ.
ಎಚ್.ಎಂ.ಪಿ.ವಿ ವೈರಸ್ ಸೋಂಕಿರು ಸಾರ್ವಜನಿಕ ಸ್ಥಳಗಳಿಗೆ ಹೋಗಬಾರದು. ಮನೆಯಲ್ಲೇ ಐಸೋಲೇಷನ್ ಆಗಿರಬೇಕು. ಕೆಮ್ಮು, ನೆಗಡಿ ಮತ್ತು ಸೀನು ಇದ್ದರೆ ಬಾಯಿಗೆ ಕೈ ಅಡ್ಡವಾಗಿ ಕೈ ಹಿಡಿದು ಕೆಮ್ಮಬೇಕು. ಜನರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಹಾಗೆಯೇ ಹೆದರಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಎಚ್.ಎಂ.ಪಿ.ವಿ. ವೈರಸ್ 2001ರಲ್ಲೇ ಪತ್ತೆ ಹಚ್ಚಲಾಗಿದೆ. ಚೀನಾದ ಎಚ್.ಎಂ.ಪಿ.ವಿ ವೈರಸ್ ಗೂ ನಮ್ಮ ದೇಶದಲ್ಲಿ ಕಂಡು ಬಂದಿರುವ ವೈರಸ್ ಗೂ ಯಾವುದೇ ಹೋಲಿಕೆ ಇಲ್ಲ. ಜೀವಕ್ಕೆ ಹಾನಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ 3 ತಿಂಗಳ ಮಗು ಮತ್ತು 8 ತಿಂಗಳ ಮಗು ಇಬ್ಬರಲ್ಲಿ ಎಚ್.ಎಂ.ಪಿ.ವಿ. ವೈರಸ್ ದೃಢಪಟ್ಟಿದೆ. ಇಬ್ಬರು 3 ತಿಂಗಳ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. 8 ತಿಂಗಳ ಮಗು ಇನ್ನೊಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಇಬ್ಬರು ಮಕ್ಕಳೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.


