Sunday, March 16, 2025
Google search engine
Homeಮುಖಪುಟಮೌಢ್ಯ ತೊರೆದರೆ ಲೋಕ ಕಲ್ಯಾಣ: ಡಾ. ಚಿದಾನಂದಗೌಡ

ಮೌಢ್ಯ ತೊರೆದರೆ ಲೋಕ ಕಲ್ಯಾಣ: ಡಾ. ಚಿದಾನಂದಗೌಡ

ಮತ, ಧರ್ಮ, ಮೌಢ್ಯಗಳ ಅಂಧಶ್ರದ್ಧೆಯನ್ನು ತೊರೆದು ವಿಜ್ಞಾನ ಮತ್ತು ಆಧ್ಯಾತ್ಮದ ಮೊರೆ ಹೋದಾಗ ‘ನಮಗೂ-ಲೋಕಕ್ಕೂ ಕಲ್ಯಾಣವಾಗಲಿದೆ’ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿದಾನಂದಗೌಡ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ ಕುವೆಂಪು ಅಧ್ಯಯನ ಪೀಠ ಆಯೋಜಿಸಿದ್ದ ಕುವೆಂಪು: ಮಾತು ಮಂಥನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆತ್ಮಶ್ರೀಗಾಗಿ ವಿಜ್ಞಾನ ಮತಿಗಳಾಗಿ’ ಕುರಿತು ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಆರೋಗ್ಯದ, ಭಾವನೆಗಳ, ಬುದ್ಧಿಯ ಬೆಸುಗೆಯಲ್ಲಿ ‘ತಾನು ಯಾರು?’ ಎಂಬುದನ್ನು ಅರಿತು ಆತ್ಮದ ಅರಿವು-ಆತ್ಮಶ್ರೀ ಸಾಧಿಸಬೇಕು. ಉತ್ತಮ ಆಲೋಚನೆಗಳನ್ನು, ಭಾವನೆಗಳನ್ನು ಅನುಭವಿಸಬೇಕು. ಅಧ್ಯಯನಶೀಲತೆ, ಏಕಾಗ್ರತೆ, ಸಂಯಮದ ಆತ್ಮಾನುಸಂಧಾನದಲ್ಲಿ ತಪಸ್ವಿಗಳಾಗಬೇಕು ಎಂದು ತಿಳಿಸಿದರು.

ಆತ್ಮದ ಸಾರ್ವಭೌಮತ್ವವನ್ನು ಸಾಧಿಸಿದರೆ ಬದುಕು ಗಟ್ಟಿಗೊಳ್ಳುತ್ತದೆ. ಇದರಿಂದ ಆತ್ಮಹತ್ಯೆಗಳ, ಮನಸ್ತಾಪಗಳ ಸಂಖ್ಯೆ ಕ್ಷೀಣಿಸಲಿದೆ. ‘ನಾನು ಯಾರು?’ ಎಂಬ ಆತ್ಮಾವಲೋಕನವಾದರೆ ಪ್ರತ್ಯೇಕತೆಯ ಭಾವ ಕಳಚಿ ಏಕತೆಯ ಬೆಸುಗೆ ಚಿಗುರಿ ಸಮಾನತೆ ಸ್ಪುಟಿಸಲಿದೆ ಎಂದರು.

ನಮ್ಮ ಶಕ್ತಿ ದೌರ್ಬಲ್ಯಗಳನ್ನು ತಿಳಿಯಲು, ತಿಳುವಳಿಕೆಯನ್ನು ಪರಿಷ್ಕರಿಸಲು ವಿಜ್ಞಾನದ ನಿರಂತರ ಕಲಿಕೆ ಅಗತ್ಯವಾಗಿದೆ. ಇದರಿಂದ ಆತ್ಮದ ಹೊಳಪು ಇನ್ನಷ್ಟು ಪ್ರಜ್ವಲಿಸಲಿದೆ. ಹೊಸ ದೃಷ್ಟಿಗೆ ಮುಕ್ತವಾಗಿಸಲು ವಿಜ್ಞಾನ ಮತಿಗಳಾಗಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಹಿಸಿದ್ದರು.

ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಸ್ಮರಣಾರ್ಥ ಮೌನ ಆಚರಣೆ ಮಾಡಲಾಯಿತು. ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಡಾ.ಮನಮೋಹನ ಸಿಂಗ್ ಕುರಿತು ಮಾತನಾಡಿದರು.

ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ.ಗೀತಾ ವಸಂತ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕುಲಸಚಿವೆ ನಾಹಿದಾ ಜûಮ್‌ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular