Friday, March 14, 2025
Google search engine
Homeಮುಖಪುಟಕುವೆಂಪು ಜನ್ಮದಿನ

ಕುವೆಂಪು ಜನ್ಮದಿನ

ಇವತ್ತು ಕುವೆಂಪು ಅವರ ಜನ್ಮ ದಿನ ..   ಕರ್ನಾಟಕ ರಾಜ್ಯಸರ್ಕಾರ  ಈ ದಿನವನ್ನು ವಿಶ್ವ ಮಾನವ ದಿನ ಎಂದು ಘೋಷಿಸಿದೆ .‌

ಘೋಷಣೆ ಬೇರೆ ಆಚರಣೆ ಬೇರೆ ..‌ ಸಂವಿದಾನದ ಪೀಟಿಕೆಯಲ್ಲಿ  ನಾವು   “ವೀ ದ ಪೀಪಲ್ ಆಫ್ ಇಂಡಿಯಾ , ಹಂಗೆ ಬಾಳ್ವೆ ಮಾಡುತ್ತೇವೆ ಹಿಂಗೆ  ಬಾಳ್ವೆ ಮಾಡುತ್ತೇವೆ   ”  ಅಂತೆಲ್ಲ ಘೋಷಿಸಿಕೊಂಡಿದ್ದೇವೆ  ಆದರೆ ನಿತ್ಯದ ಬದುಕಿನ ರೂಡಿ ಜಡವಾದ ಜಾತೀಮತೀಯತೆಯ ಬಂದಿ ಯಾದ ಉತ್ಸಾಹ ಹೀನ  ಧ್ಯೇಯಹೀನ  , ಶಾಪ ಗ್ರಸ್ತ ಬದುಕನ್ನು ಬದುಕುತ್ತ ಕಂತೆ ಎಸೆಯುತ್ತೇವೆ …

ಕುವೆಂಪು ಅವರ ಜನ್ಮ ದಿನವನ್ನು  ವಿಶ್ವ ಮಾನವ ದಿನ ಎಂದು ಘೋಷಿಸಿದ ನಂತರ ಅದನ್ನು   ವ್ಯಕ್ತಿಯ ಮಟ್ಟದಲ್ಲಿ  , ಸಮಷ್ಟಿಯ ಮಟ್ಟದಲ್ಲಿ ಆಚರಣೆಗೆ ಇಳಿಸದಿದ್ದರೆ  ಕುವೆಂಪು ಕುರಿತ ನಮ್ಮ ಉತ್ಸಾಹವೆಲ್ಲ. ನಿರರ್ತಕ ..

ಉದಾಹರಣೆಗೆ ಮೊನ್ನೆ  ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್  ನೇತ್ರತ್ವದ ನಮ್ಮ ಕಾಂಗ್ರೆಸ್  ಪಕ್ಷದವರು  ಹಿಂದಿ ಬ್ಯಾನರು ಕಟ್ಟಿ  ಮಹಾತ್ಮಾ ಗಾಂಧಿಯವರು  ಅದ್ಯಕ್ಷರಾಗಿದ್ದ ೧೯೨೪ ರ ಕಾಂಗ್ರೆಸ್ ಅದಿವೇಶನದ ಶತಮಾನೋತ್ಸವ ಆಚರಿಸಿದರು .. ಇದು   ಗಾಂಧಿ ಮತ್ತು ಕುವೆಂಪು ಇಬ್ಬರಿಗೂ ಮಾಡಿದ ಅಪಮಾನ .. 

ಭಾರತೀಯ ಭಾಷೆಗಳ  ಉದ್ದಾರತತ್ವದ ಮೂಲಕ ದೇಶದ ಏಕತೆ ಸಮಗ್ರತೆಯ  ಲೌಕಿಕ  ಮತ್ತು ಅಧ್ಯಾತ್ಮಿಕ ಉನ್ನತಿಯ ಜೀವ ತತ್ವವನ್ನು ಕಟ್ಟಿದ ಗಾಂಧೀಜಿ ಮತ್ತು ಅದೇ ತತ್ವದ ಕನ್ನಡ ಅವತರಿಣಿಕೆಯನ್ನು ರೂಪಿಸಿದ ಕುವೆಂಪು ಅವರಿಗೆ  ಕಾಂಗ್ರೆಸ್  ಪಕ್ಷ ಬಗೆದ ದ್ರೋಹ ಇದು .

ಇದನ್ನು ಪ್ರಶ್ನಿಸದ ಕನ್ನಡ ಜನತೆಯೂ ‌ಈ ಕುವೆಂಪು ದ್ರೋಹದಲ್ಲಿ ಪಾಲುದಾರರಾಗಿದ್ದೇವೆ…. 

 ನಿತ್ಯವೂ  ತನ್ನ ಕನ್ನಡ ಘಾತುಕ ನೀತಿ ಮತ್ತು ಕಾರ್ಯಕ್ರಮ ನಡೆಗಳ ಮೂಲಕ  ಕನ್ನಡ ಶಿಕ್ಷಣ ಮಾಧ್ಯಮವನ್ನು

ಹೊಡೆದುರುಳಿಸುತ್ತ   ( ಕೆಪಿಎಸ್ ಶಾಲೆಗಳು , ಗಾಂದಿ , ಅಂಬೇಡ್ಕರ್ ,ಮೊರಾರ್ಜಿ ,ಕಿತ್ತೂರು ಚೆನ್ನಮ್ಮ  ಇತ್ಯಾದಿ ಇಂಗ್ಲಿಷ್ ಮೀಡಿಯಂ ಶಾಲೆಗಳ ಮೂಲಕ. )  ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಕುವೆಂಪು ವಿರೋಧಿ ಯಾಗಿದೆ..

ತಮ್ಮ ಕಣ್ಣ ಮುಂದೆ ನಡೆಯುತ್ತಿರುವ ಈ ಕನ್ನಡ ಘಾತುಕ ವಿದ್ಯಮಾನವನ್ನು  ಪ್ರಶ್ನಿಸದೆ  ಗುಮ್ಮನಗುಸುಗನ ಆಟ ಕಟ್ಟಿರುವ ಕನ್ನಡಿಗರು ಈ ಪಾಪ ಕಾರ್ಯದಲ್ಲಿ  ಭಾಗಿಯಾಗಿದ್ದಾರೆ.. 

ಕುವೆಂಪು ಅವರಿಗೆ ಅಗೌರವ ತೋರಿದ್ದೇವೆ 

ತ್ರಿಬಾಷಾ ಸೂತ್ರ ತ್ರಿಶೂಲದ ಹಾಗೆ .. ಅದು  ಅದು ತನ್ನ ಹಿಂದಿ ಸಂಸ್ಕೃತ ಇಂಗ್ಲಿಷ್ ಗಳ ತ್ರಿವಳಿ ಶೂಲಗಳಲ್ಲಿ ಕನ್ನಡ ಕನ್ನಡಿಗ  ಕರ್ನಾಟಕ ಎಲ್ಲವನ್ನೂ  ಇರಿದು ಕೊಲ್ಲುತ್ತದೆ.. ಕನ್ಬಡಿಗರು ಎಚ್ಚರ ವಹಿಸದಿದ್ದರೆ  ಹಿಂದಿಯನ್ನು ಹಿಂಬಾಗಿಲಿನಿಂದ  ಒಳನುಗ್ಗಿಸಲಾಗುತ್ತದೆ  .. ಹಿಂದಿ ,ಇಂಗ್ಲಿಷ್ ಗಿಂತಲೂ  ಅಪಾಯಕಾರಿ .. ಕನ್ನಡಿಗರು  ತ್ರಿಬಾಷಾ ನೀತಿಯನ್ನು ಒಪ್ಪದೆ ತಿರಸ್ಕರಿಸಿ ಎಂದು ಅರವತ್ತು ವರ್ಷಗಳ ಹಿಂದೆಯೇ ಕರೆಕೊಟ್ಟರು , ಆಗ್ರಹಿಸಿದರು , ಮನವಿ‌ಮಾಡಿದರು , ಮಕ್ಕಳಿಗೆ ಹೇಳುವಂತೆ  ಅನುನಯದಿಂದ. ಹೇಳಿ ನೋಡಿದರು .. 

ಉಹುಂ , ಕನ್ನಡಿಗರು ಕುವೆಂಪು ಅವರ. ಸವಿನಯ ಮನವಿಯನ್ಜು ತಿರಸ್ಕರಿಸಿದೆವು …ತಿರಸ್ಕರಿಸುವ ಮೂಲಕ ಧೂರ್ತರಂತೆ ನಡೆದುಕೊಂಡೆವು …

ತ್ರಿಬಾಷಾ ನೀತಿಯನ್ನು ಒಪ್ಪಿಕೊಂಡಿರುವ ಕರ್ನಾಟಕ ರಾಜ್ಯದ ರಾಜ್ಯ ಸರ್ಕಾರಗಳು   ಮತ್ತು ನಾಡಿನ ಕನ್ನಡಿಗರು ಕುವೆಂಪು  ವಿರೋಧಿಗಳಾಗಿದ್ದೇವೆ ..  ನಮ್ಮ ಗೌರವವೆಲ್ಲ ಅಪ್ರಾಮಾಣಿಕವಾದದ್ದಾಗಿದೆ …ತೋರಿಕೆಯದ್ದಾಗಿದೆ ..

 ಕನ್ನಡದಲ್ಲಿಯೇ  ಲೋಕ ಜ್ನಾನವನ್ನು ಕಟ್ಟದೆ ಕರ್ತವ್ಯಚ್ಯುತರಾಗಿರುವ ಕನ್ನಡಿಗರಾದ ನಾವು  ಮತ್ತು   ನಮ್ಮ ಸರ್ಕಾರಗಳು  ಕನ್ನಡ ದ ಬೆಳವಣಿಗೆಯನ್ನು ಕುಂಟಿತಗೊಳಿಸಿ  ಕುವೆಂಪು ಅವರಿಗೆ  ಅಪಮಾನ ಮಾಡುತ್ತಿದ್ದೇವೆ 

ಇಡೀ ಕರ್ನಾಟಕ ಇವತ್ತು ಮತೀಯವಾದದ  ವಿರುದ್ದ ದೃಡವಾಗಿ ನಿಲ್ಲದೆಹೋಗಿರುವುದರಲ್ಲಿಯೂ  ಕುವೆಂಪು ಅವರ ವಿಶ್ವ ಮಾನವ ತತ್ವದಿಂದ ಬಲುದೂರ ಸರಿದಿದೆ…. 

ಎಲ್ಲ ಬಗೆಯಲ್ಲೂ ಕನ್ನಡದ ಜೊತೆ ನಿಲ್ಲದೆ , ಮತೀಯ ವಾದವನ್ನು ತಿರಸ್ಕರಿಸದೆ , ತ್ರಿಬಾಷಾ ನೀತಿಯನ್ನು  ಕಿತ್ತೆಸೆಯದೆ , ಸಮಾನ ಪಾತಳಿಯ ಕನ್ನಡ ಮಾದ್ಯಮದ  ಸರ್ಕಾರಿ ಶಾಲಾ ವ್ಯವಸ್ತೆಯನ್ನು  ಕಟ್ಟಿಕೊಳ್ಳದೆ ,  ಸ್ವತಂತ್ರವಾಗಿ ಆಲೋಚಿಸುವ ಮತಿಗೌರವವನ್ನು ಪಡೆಯದೆ  , ಮನುಷ್ಯಭೇದವನ್ನೂ   ಒಳಗೊಂಡು ಚರಾಚರ ಭೇದ ದೃಷ್ಟಿಯನ್ನು  ಕಳಚಿಕೊಳ್ಳದೆ ಇರುವ ತನಕ ನಾವು ಕುವೆಂಪು ಅವರಿಗೆ ಗೌರವ ಕೊಡುವ ಅರ್ಹತೆಯನ್ನು  ಪಡೆಯುವುದಿಲ್ಲ‌…

ಬರೆಹ-ಕೆ.ಪಿ.ನಟರಾಜ್, ಲೇಖಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular