Wednesday, December 11, 2024
Google search engine
Homeಮುಖಪುಟಜನ ಬೆಂಬಲವೇ ಕಲೆಗಳ ಅಂತಃಶಕ್ತಿ: ಪ್ರೊ.ಡಿ.ವಿ. ಪರಮಶಿವಮೂರ್ತಿ

ಜನ ಬೆಂಬಲವೇ ಕಲೆಗಳ ಅಂತಃಶಕ್ತಿ: ಪ್ರೊ.ಡಿ.ವಿ. ಪರಮಶಿವಮೂರ್ತಿ

ಸರ್ಕಾರ ಎಷ್ಟೇ ಅನುದಾನ, ಪ್ರೋತ್ಸಾಹ ನೀಡಿದರೂ ಜನ ಬೆಂಬಲ ಇಲ್ಲದೆ ಯಾವ ಕಲೆಯೂ ಬೆಳೆಯುವುದಿಲ್ಲ. ಜನರೇ ಅವುಗಳ ಶಕ್ತಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಹಮ್ಮಿಕೊಂಡಿದ್ದ ಯಕ್ಷದೀವಿಗೆ ಸಂಸ್ಥೆಯ ದಶಮಾನೋತ್ಸವ ವರ್ಷದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಯಕ್ಷಗಾನ ಕಲೆಗೆ ಕಲಾವಿದರ ಹಿನ್ನೆಲೆ ಇದೆ. ಅದರ ಪ್ರೇಕ್ಷಕರಲ್ಲೂ ಕಲೆಯ ಕುರಿತು ಅಪಾರ ಶ್ರದ್ಧೆ ಹಾಗೂ ಗೌರವ ಇರುತ್ತದೆ. ಅವರು ಕಾಟಾಚಾರಕ್ಕೋ ಕಾಲಹರಣಕ್ಕೋ ಬರುವವರಲ್ಲ. ಯಕ್ಷಗಾನ ಇಷ್ಟು ಜನಪ್ರಿಯವಾಗಿರುವುದಕ್ಕೆ ಕಲಾವಿದರು ಹಾಗೂ ಪ್ರೇಕ್ಷಕರ ಕೊಡುಗೆ ಹೆಚ್ಚಿನದ್ದಾಗಿದೆ ಎಂದರು.

ಕಳೆದ ಏಳೆಂಟು ಶತಮಾನಗಳಿಂದ ಯಕ್ಷಗಾನ ಕಲೆ ನಿರಂತರವಾಗಿ ಬೆಳೆದು ಬಂದಿದೆ. ವಿದೇಶೀಯರಿಂದಲೂ ಮೆಚ್ಚುಗೆ ಪಡೆದಿದೆ. ಕಲೆಯೊಳಗಿನ ಅಂತಃಶಕ್ತಿ ಅದನ್ನು ಇಷ್ಟು ಎತ್ತರಕ್ಕೆ ಏರುವಂತೆ ಮಾಡಿದೆ ಎಂದರು.

ಯಕ್ಷದೀವಿಗೆಯ ವಾರ್ಷಿಕ ಗೌರವವನ್ನು ಸ್ವೀಕರಿಸಿ ಮಾತನಾಡಿದ ಶ್ರೀಕೃಷ್ಣ ಭಟ್ ದೇವಕಾನ, ನೇಪಥ್ಯ ಕಲಾವಿದರು ಯಕ್ಷಗಾನದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಕಾಲವಿತ್ತು. ಆದರೆ ಇತ್ತೀಚೆಗೆ ಅವರಿಗೂ ಗೌರವ ಪುರಸ್ಕಾರಗಳು ದೊರೆಯುತ್ತಿವೆ. ಕಲಾವಿದರು ರಂಗದ ಮೇಲೆ ತಮ್ಮ ಪ್ರೌಢಿಮೆಯನ್ನು ಮೆರೆಯುವ ಹಿಂದೆ ನೇಪಥ್ಯ ಕಲಾವಿದರ ಕೊಡುಗೆ ಹೆಚ್ಚಿನದ್ದಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತುವ ಪ್ರಯತ್ನವನ್ನು ಯಕ್ಷಗಾನದ ಮೂಲಕ ಮಾಡುವ ಯೋಜನೆಯಿದೆ ಎಂದರು.

ಶ್ರೀಕೃಷ್ಣ ಮಂದಿರ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ಮಾರುತಿ ವಿದ್ಯಾಕೇಂದ್ರದ ನಿರ್ದೇಶಕಿ ಉಮಾಪ್ರಸಾದ್ ಇದ್ದರು. ‘ಕರ್ಣಭೇದನ’ ಯಕ್ಷಗಾನ ತಾಳಮದ್ದಳೆ ಹಾಗೂ ‘ಮಹಿಷಮರ್ದಿನಿ’ ಬಯಲಾಟ ಪ್ರದರ್ಶನ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular