ದಲಿತ ಚಳವಳಿಯ ಪ್ರಮುಖ ಸಂಘಟಕರಾಗಿದ್ದ ರಂಗಸ್ವಾಮಿ ಬೆಲ್ಲದಮಡು ಅವರ ಕುರಿತು ಎಚ್.ವಿ.ವೆಂಕಟಾಚಲ ಸಂಪಾದಿಸಿರುವ ‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’ ಕೃತಿಯನ್ನು ಡಿಸೆಂಬರ್ 6ರಂದು ಬೆಳಿಗ್ಗೆ 10ಗಂಟೆಗೆ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿರುವ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಗುವುದು.
ಪುಸ್ತಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ನೆರವೇರಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪರ ಚಿಂತಕ ಕೆ.ದೊರೈರಾಜ್ ವಹಿಸಿಲಿದ್ದು, ದಲಿತ ಚಳವಳಿ ಕುರಿತು ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮತ್ತು ದಲಿತ ಹೋರಾಟಗಾರ ಎನ್.ವೆಂಕಟೇಶ್ ಕೋಲಾರ ಮಾತನಾಡುವರು.
ರಂಗಸ್ವಾಮಿ ಅವರನ್ನು ಕುರಿತು ಕೃಷ್ಣಪ್ಪ ಬೆಲ್ಲದಮಡು, ಗಂಗಮ್ಮ ಕೆಂಪಯ್ಯ ಮಾತನಾಡುವರು. ಪಾವನ ಆಸ್ಪತ್ರೆಯ ಡಾ. ಮುರಳೀಧರ್ ಪ್ರಸ್ತಾವಿಕ ಮಾತನಾಡುವರು. ಪುಸ್ತಕದ ಸಂಪಾದಕ ವೆಂಕಟಾಚಲ, ಉಪನ್ಯಾಸಕ ಡಾ.ಶಿವಣ್ಣ ತಿಮ್ಲಾಪುರ ಭಾಗವಹಿಸುವರು.


