Wednesday, December 4, 2024
Google search engine
Homeಮುಖಪುಟಟೀಕೆಗಳು ರಚನಾತ್ಮಕವಾಗಿರಲಿ-ಮುಖ್ಯಮಂತ್ರಿ ಸಿದ್ದರಾಮಯ್ಯ

ಟೀಕೆಗಳು ರಚನಾತ್ಮಕವಾಗಿರಲಿ-ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಟೀಕೆಯನ್ನು ಮಾಡಬೇಕು. ನಾನು ಟೀಕೆಗಳನ್ನು ಮಾಡಬಾರದು ಎಂದು ಹೇಳುವುದಿಲ್ಲ. ಟೀಕೆಗಳಿಗೆ ಸ್ವಾಗತ. ಆದರೆ ಟೀಕೆಗಳು ರಚನಾತ್ಮಕವಾಗಿರಬೇಕು. ಆಗ ಮಾತ್ರ ಅಂಥವುಗಳನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸವಲತ್ರುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಬಜೆಟ್ 3,71,000 ಕೋಟಿ ರೂಪಾಯಿ, ಅದರಲ್ಲಿ ಒಟ್ಟು ಅಭಿವೃದ್ಧಿಗೆ ಇಟ್ಟಿರುವ ಹಣ 1 ಲಕ್ಷದ 20 ಸಾವಿರ ಕೋಟಿ. ಇದರಲ್ಲಿ 52 ಸಾವಿರ ಕೋಟಿಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಸುಮಾರು 68 ಸಾವಿರ ಕೋಟಿ ರೂಗಳನ್ನು ಅಭಿವೃದ್ಧಿ ಕೆಲಸಗಳಿಗೆ ಇಟ್ಟಿದ್ದೇವೆ ಎಂದರು.

ರಾಜ್ಯದ ಬೆಳವಣಿಯ ವೇಗ ಜಾಸ್ತಿಯಾಗಿದೆ. ಇಡೀ ದೇಶದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ರಾಜ್ಯ ಒಂದನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳ ಜಿಡಿಪಿ ಸರಾಸರಿ ಬೆಳವಣಿಗೆ 8.2ರಷ್ಟಿದ್ದರೆ, ಕರ್ನಾಟಕದ ಜಿಡಿಪಿ 10.7ರಷ್ಟಿದೆ. ಎಫ್.ಡಿ.ಐ ನಲ್ಲಿ ಮಹಾರಾಷ್ಟ್ರ ಬಿಟ್ಟರೆ ನಂತರದ ಸ್ಥಾನದಲ್ಲಿ ನಾವೇ ಇದ್ದೇವೆ. ಅಂದರೆ 2ನೇ ಸ್ಥಾನದಲ್ಲಿದ್ದೇವೆ. ತೆರಿಗೆ ನೀಡುವುದರಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇದನ್ನ ಜನರ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇದನ್ನು ಯಾರು ಬೇಕಾದರೂ ಪರಿಶೀಲನೆ ಮಾಡಬಹುದು ಎಂದರು.

ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಶಕ್ತಿ ಯೋಜನೆಯಲ್ಲಿ ಇದುವರೆಗೆ 330 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. 1ಕೋಟಿ 21 ಲಕ್ಷ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ.ಗಳನ್ನು ಕೊಡುತ್ತಿದ್ದೇವೆ. ಒಂದು ವರ್ಷಕ್ಕೆ 30 ಸಾವಿರ ಕೋಟಿ ಹಣವನ್ನು ಗೃಹಲಕ್ಷ್ಮಿ ಯೋಜನೆಗೆ ಖರ್ಚು ಮಾಡುತ್ತಿದ್ದೇವೆ. ಒಂದು ವರ್ಷಕ್ಕೆ 56 ಸಾವಿರ ಕೋಟಿ ರೂಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆಯಡಿ 1ಕೋಟಿ 42 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿದರು.

ನಮ್ಮ ಸರ್ಕಾರ ಬಡವರ ಪರವಾಗಿದೆ. ಬಡಜನರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಮ್ಮದು ಬಡವರ ಪರ ಇರುವ ಸರ್ಕಾರ, ಹಿಂದುಳಿದವರ, ಅಲ್ಪಸಂಖ್ಯಾತರ, ದಲಿತರು, ರೈತರು, ಮಹಿಳೆಯರ ಪರವಾಗಿರುವ ಸರ್ಕಾರ. ಇದನ್ನು ಅರ್ಥ ಮಾಡಿಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ ಪ್ರತಿಪಕ್ಷಗಳಿಗೆ ಕುಟುಕಿದರು.

ತುಮಕೂರು ಜಿಲ್ಲೆಯಲ್ಲಿ ಪರಮೇಶ್ವರ್ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಇತರೆ ಜಿಲ್ಲೆಗಳಿಗೂ ಮಾದರಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular