ಜುಂಜಪ್ಪ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ ವಿಶ್ವವಿದ್ಯಾನಿಲಯ ಕಲಾ ಕಾಲೇಜು ವತಿಯಿಂದ ಜನಪದ ಮಹಾಕಾವ್ಯಗಳಲ್ಲಿ ಶೈವ ಪರಂಪರೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನ.28ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ವಿಚಾರ ಸಂಕಿರಣವನ್ನು ವಿವಿ ಕುಲಪತಿ ಪ್ರೊ.ವೆಂಕಟೇಶ್ವರಲು ಉದ್ಘಾಟಿಸುವರು. ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಕೆ.ತಿಮ್ಮಯ್ಯ ದಿಕ್ಸೂಚಿ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಜುಂಜಪ್ಪ ಅಧ್ಯಯನ ಪೀಠದ ಸಲಹೆಗಾರ ಡಾ.ಬಿ.ಚಿಕ್ಕಪ್ಪಯ್ಯ ಭಾಗವಹಿಸಲಿದ್ದು, ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಅಧ್ಯಕ್ಷತೆ ವಹಿಸುವರು ಎಂದು ಅಧ್ಯಯನ ಪೀಠದ ಸಂಯೋಜಕ ಎಸ್. ಶಿವಣ್ಣ ಬೆಳವಾಡಿ ತಿಳಿಸಿದ್ದಾರೆ.
ನ.28ರಂದು ಮಧ್ಯಾಹ್ನ 12.30ಗಂಟೆಗೆ ಜನಪದ ಮಹಾಕಾವ್ಯಗಳಲ್ಲಿ ಶೈವ ಪರಂಪರೆ ವಿಷಯ ಕುರಿತು ವಿಮರ್ಶಕ ಡಾ.ಸುರೇಶ್ ನಾಗಲಮಡಿಕೆ ಮತ್ತು ಜಾನಪದ ವಿದ್ವಾಂಸ ಡಾ.ಜಿ.ವಿ.ಆನಂದಮೂರ್ತಿ ವಿಷಯ ಮಂಡಿಸುವರು.
ಮಧ್ಯಾಹ್ನ 2.30ರಿಂದ ಎರಡನೇ ಗೋಷ್ಠಿ ನಡೆಯಲಿದ್ದು, ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ಇದೆ. ಇದರ ಆದ್ಯಕ್ಷತೆಯನ್ನು ಡಾ.ಎಚ್.ಆರ್.ರೇಣುಕ ವಹಿಸಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಾಂಶುಪಾಲ ಬಿ.ಕರಿಯಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಎಸ್.ಶಿವಣ್ಣ ಬೆಳವಾಡಿ ಭಾಗವಹಿಸುವರು.


