ತುಮಕೂರು ನಗರದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ರಮೇಶ್ ಮಣ್ಣೆ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಮಣ್ಣೆ ಕನ್ನಡ ಭಾಷೆ ವೈಶಾಲ್ಯತೆಯನ್ನು ಹೊಂದಿದ್ದು ಅನ್ಯ ಭಾಷೆಯರೂ ಕನ್ನಡವನ್ನು ಕಲಿತು ಕನ್ನಡದ ವ್ಯಾಕರಣ ಗ್ರಂಥಗಳು ಹಾಗೂ ಕನ್ನಡ ನಿಘಂಟುಗಳನ್ನು ರಚಿಸಿರುವುದು ವಿಶೇಷವೆಂದರು.
ಅಲಿಖಿತವಾದ ಜಾನಪದ ಸಂಸ್ಕೃತಿಯು ಸಹ ಕನ್ನಡ ಭಾಷೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದರು. ಅಸೋಸಿಯೇಟ್ ಎಂಸಿಸಿ ಆಫೀಸರ್ ಲೆಫ್ಟಿನೆಂಟ್ ಶ್ರೀನಿವಾಸಮೂರ್ತಿ ಎಲ್ ಹಾಜರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರೊ. ವಿನಯ್ ಕುಮಾರ್, ಪ್ರೊ. ಸೈಯದ್ ಬಾಬು, ಪ್ರೊ. ರಂಗಸ್ವಾಮಿ, ನಿವೃತ್ತ ಅಧ್ಯಾಪಕ ಹನುಮಂತರಾಯಪ್ಪ ಮುಂತಾದವರು ಇದ್ದರು. ಎನ್‌ಸಿಸಿ ವಿದ್ಯಾರ್ಥಿಗಳಿಂದ ವಿಶೇಷ ಪಥಸಂಚಲನ ನಡೆಸಲಾಯಿತು.