Saturday, November 23, 2024
Google search engine
Homeಮುಖಪುಟಸುನಂದ ಸಾವು ಪ್ರಕರಣ - ತರೂರ್ ಖುಲಾಸೆ

ಸುನಂದ ಸಾವು ಪ್ರಕರಣ – ತರೂರ್ ಖುಲಾಸೆ

ಪತ್ನಿ ಸುನಂದ ಪುಷ್ಕರ್ ಸಾವು ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ಸದಸ್ಯ ಶಶಿ ತರೂರ್ ಅವರನ್ನು ದೆಹಲಿ ಹೈಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದೆ. ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ವಿಚಾರಣೆ ನಡೆಸಿ ಆಗಸ್ಟ್ 18ರಂದು ಆರೋಪಿ ಶಶಿ ತರೂರ್ ಖುಲಾಸೆಗೊಂಡಿದ್ದಾರೆಂಬ ಆದೇಶವನ್ನು ಪ್ರಕಟಿಸಿದರು.

ಮಹಿಳೆಗೆ ಹಿಂಸೆ ನೀಡಿ ಆತ್ಮಹತ್ಯೆಗೆ ಕಾರಣವಾಗಿದ್ದರು ಎಂಬ ಆರೋಪ ಶಶಿ ತರೂರ್ ಮೇಲಿತ್ತು. ನಿರಂತರ ಎಳುವರೆ ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಇಂದು ಶಶಿ ತರೂರ್ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದರು.

ವಿಚಾರಣೆ ಸಂದರ್ಭದಲ್ಲಿ ಇಬ್ಬರು ಪಕ್ಷಗಾರರ ವಕೀಲರ ವಾದ-ವಿವಾದವನ್ನು ಆಲಿಸಿ “ಈ ಪ್ರಕರಣದಲ್ಲಿ ಸಾಕಷ್ಟು ಕಲಿತಿದ್ದೇನೆ” ಎಂದು ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಆರೋಪಿ ಹಾಗೂ ಕಾಂಗ್ರೆಸ್ ನಾಯಕ ಶಶಿತರೂರ್ ‘ ಏಳುವರೆ ವರ್ಷಗಳು ಸಾಕಷ್ಟು ಹಿಂಸೆ ಅನುಭವಿಸಿದ್ದೇನೆ” ಎಂದು ತಿಳಿಸಿದರು.

ಸುನಂದ ಪುಷ್ಕರ್ ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂಬಂಧ ಜನವರಿ 17, 2014ರಂದು ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಜನವರಿ 1, 2015ರಂದು ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.

ಬಳಿಕ ಸುನಂದ ಪುಷ್ಕರ್ ಪತಿ ಶಶಿ ತರೂರ್ ಎಂಬ ಮಾಹಿತಿ ಗೊತ್ತಾದ ಮೇಲೆ ತರೂರ್ ವಿರುದ್ಧ ಐಪಿಸಿ ಕಲಂ 498 ಮತ್ತು ಕಲಂ 306 (ಹಿಂಸಿಸಿ ಕೊಲೆ) ಪ್ರಕರಣವನ್ನು ದೆಹಲಿ ಪೊಲೀಸರು ಆಗಸ್ಟ್ 31, 2019ರಲ್ಲಿ ದಾಖಲಿಸಿದ್ದರು. ಪರ್ಯಾಯವಾಗಿ ಕೊಲೆ ಆರೋಪವನ್ನು ಶಶಿ ತರೂರ್ ಮೇಲೆ ಹೊರಿಸಲಾಗಿತ್ತು.

ಸರ್ಕಾರಿ ಸಹಾಯಕ ಅಭಿಯೋಜಕ ಅತುಲ್ ಅವರು ಸುನಂದ ಪುಷ್ಕರ್ ಮರಣೋತ್ತರ ಪರೀಕ್ಷೆಯ ವರದಿ ಆಧಾರ ಮೇಲೆ ಆಕೆ ವಿಷ ಸೇವಿ ಸಾವನ್ನಪ್ಪಿದ್ದಾರೆ. ಗಾಯಗಳಾಗಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಆದರೆ ಶಶಿ ತರೂರು ವಕೀಲ ವಿಕಾಸ್ ಪಹ್ವಾ “ಪೊಲೀಸರು ಸಾಹಸ ಮಾರ್ಗದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯೇ ಅಥವಾ ನರಹತ್ಯೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಸಂತ್ರಸ್ತೆಯ ಮಾನಸಿಕ ಆರೋಗ್ಯದ ಕುರಿತು ಯಾವುದೇ ವರದಿ ಇಲ್ಲ. ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ವಾದಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular