ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಮಾಧ್ಯಮ ಅಕಾಡೆಮಿಯ ಬೈಲಾದ ಕಂಡಿಕೆ 5(5.1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಮಾಧ್ಯಮ ಅಕಾಡೆಮಿಗೆ 11 ಮಂದಿ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಅದೇಶಿಸಿದೆ.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜನತಾ ವಾಣಿಯ ಹಿರಿಯಪತ್ರಕರ್ತ ಇ.ಎಂ.ಮಂಜುನಾಥ್, ವಿಜಯ ಕರ್ನಾಟಕದ ವರದಿಗಾರ ಸಂಗಮೇಶ್ ಚೂರಿ, ಸುವರ್ಣ ಟಿವಿ ಇನ್ ಪುಟ್ ಮುಖ್ಯಸ್ಥೆ ಎಂ.ಸಿ.ಶೋಭಾ, ಪತ್ರಕರ್ತ ಜೆ.ಅಬ್ಬಾಸ್ ಮುಲ್ಲಾ, ಟಿವಿ-9 ಪತ್ರಕರ್ತ ಹೆಚ್.ವಿ.ಕಿರಣ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಟೈಮ್ಸ್ ಆಫ್ ಇಂಡಿಯಾದ ಹಿರಿಯ ಪತ್ರಕರ್ತ ಅನಿಲ್ ವಿ.ಗೆಜ್ಜಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತ ಕೆಂಚೇಗೌಡ, ಕನ್ನಡ ಪ್ರಭ ಸಂಪಾದಕ ಯು.ಸುರೇಂದ್ರ ಶೆಣೈ, ಆಂದೋಲನ ಪತ್ರಿಕೆಯ ಸಂಪಾದಕ ರವಿ ಕೋಟಿ ಮತ್ತು ಎಸ್.ರಶ್ಮಿ ಅವರನ್ನು ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ.
ಅಲ್ಲದೆ ಪದನಿಮಿತ್ತ ಸದಸ್ಯರನ್ನಾಗಿ ಮುಖ್ಯಸ್ಥರು, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ಮೈಸೂರು ವಿಶ್ವವಿದ್ಯಾಲಯ ಮೈಸೂರು ಮತ್ತು ಮುಖ್ಯಸ್ಥರು, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಮಂಗಳೂರು ವಿಶ್ವವಿದ್ಯಾಲಯ ಮಂಗಳೂರು ಇವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


