Thursday, October 10, 2024
Google search engine
Homeಜಿಲ್ಲೆಬೈಕಿನಲ್ಲೇ ತಂದೆಯ ಶವ ಸಾಗಣೆ

ಬೈಕಿನಲ್ಲೇ ತಂದೆಯ ಶವ ಸಾಗಣೆ

ಶವ ಸಾಗಿಸಲು ವಾಹನ ಸಿಗದೇ, ಬಾಡಿಗೆ ವಾಹನ ಮಾಡಿಕೊಳ್ಳಲು ಹಣವಿಲ್ಲದೇ ದ್ವಿಚಕ್ರ ವಾಹನದಲ್ಲಿ ತಂದೆಯ ಶವವನ್ನು ಮಕ್ಕಳು ಊರಿಗೆ ತೆಗೆದುಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

ಪಾವಗಡ ತಾಲೂಕು ದಳವಾಯಿಹಳ್ಳಿ ಗ್ರಾಮದ 80 ವರ್ಷದ ಗುಡಿಪಲ್ಲಿ ಹೊನ್ನೂರಪ್ಪ (80) ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದು ಅವರನ್ನು ವೈ.ಎನ್. ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಮುದಾಯ ಕೇಂದ್ರದಲ್ಲೇ ಮೃತಪಟ್ಟರು ಎಂದು ಹೇಳಲಾಗಿದೆ.

ಮೃತ ಹೊನ್ನೂರಪ್ಪ ಅವರ ಶವವನ್ನು ಸಾಗಿಸಲು ಆಸ್ಪತ್ರೆಯವರು ಯಾವುದೇ ವಾಹನ ಅಥವಾ ಆಂಬುಲೆನ್ಸ್ ಮಾಡಿಕೊಡಲಿಲ್ಲ. ಬಾಡಿಗೆ ವಾಹನ ಮಾಡಿಕೊಳ್ಳಲು ಹೊನ್ನೂರಪ್ಪ ಮಕ್ಕಳ ಬಳಿ ಹಣ ಇರಲಿಲ್ಲವೆಂದು ಹೇಳಲಾಗಿದೆ. ಹೀಗಾಗಿ ತಾವು ತಂದಿದ್ದ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಶವವನ್ನು ಅವರ ಮಕ್ಕಳಾದ ಚಂದ್ರಣ್ಣ ಮತ್ತು ಗೋಪಾಲಪ್ಪ ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆ ಅಧಿಕಾರಿಗಳ ಅಮಾನವೀಯ ವರ್ತನೆ ಸಾರ್ವಜನಿಕ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಹಾಲಿ ಶಾಸಕ ಎಚ್.ವಿ.ವೆಂಕಟೇಶ್ ಅವರ ತಂದೆ ಮಾಜಿ ಸಚಿವ ವೆಂಕಟವರಣಪ್ಪನವರು ಕ್ಷೇತ್ರದಲ್ಲಿ ನಾಲ್ಕು ಅವಧಿಗೆ ಶಾಸಕರಾಗಿ ಹಾಗು ಸಚಿವರಾಗಿದ್ದರೂ ತಾಲೂಕಿನಲ್ಲೇ ಸದಾ ವಾಸವಿರುತ್ತಿದ್ದುದರಿಂದ ಅಧಿಕಾರಿಗಳು ಶಾಸಕರ ನಿಯಂತ್ರಣದಲ್ಲಿ ಇರುತ್ತಿದ್ದರು. ಆದರೆ ಶಾಸಕ ವೆಂಕಟೇಶ್ ಅವರು ತಾಲೂಕಿನಲ್ಲಿ ವಾಸವಿಲ್ಲದೇ ಸದಾ ಜಿಲ್ಲಾ ಕೇಂದ್ರದಲ್ಲೇ ಇರುವುದು ಅಧಿಕಾರಿಗಳು ತಮಗಿಷ್ಟ ಬಂದಂತೆ ವರ್ತಿಸಲು ಕಾರಣವಾಗಿದೆ ಎಂದು ಜನರು ದೂರುತ್ತಾರೆ.

ಚುನಾವಣೆಗೆ ಮೊದಲು ತಾಲೂಕಿನಲ್ಲಿ ಯಾವುದೇ ಸಾವು ಹಾಗೂ ಅಹಿತಕರ ಘಟನೆ ಸಂಭವಿಸಿದಾಗ ತಕ್ಷಣ ದಾವಿಸಿ ಧನ ಸಹಾಯ ಮಾಡುತ್ತಿದ್ದ ಶಾಸಕರು ಈಗೆಲ್ಲಿ ಎಂದು ಇದೇ ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular