Thursday, October 10, 2024
Google search engine
Homeಜಿಲ್ಲೆಭೀಕರ ರಸ್ತೆ ಅಪಘಾತ-ಐದು ಮಂದಿ ದಾರುಣ ಸಾವು

ಭೀಕರ ರಸ್ತೆ ಅಪಘಾತ-ಐದು ಮಂದಿ ದಾರುಣ ಸಾವು

ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಸೆ.8ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ಸಂಭವಿಸಿದೆ.

ಕೊರಟಗೆರೆ-ಮಧುಗಿರಿ ಗಡಿಭಾಗದ ಕೆ-ಶಿಪ್ ರಸ್ತೆಯ ಕಾಟನಾಗಹಟ್ಟಿ ಗೇಟ್ ಬಳಿ ಅಪಘಾತ ಸಂಭವಿಸಿದೆ. ಪಾವಗಡ ತಾಲ್ಲೂಕಿನ ಎತ್ತಿನಹಳ್ಳಿ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು ಮತ್ತು ತುಮಕೂರಿನಿಂದ ಮಧುಗಿರಿ ಕಡೆಗೆ ಹೋಗುತ್ತಿದ್ದ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದೆ.

ರಸ್ತೆ ದುರಂತದಲ್ಲಿ ಐವರು ಮೃತಪಟ್ಟಿದ್ದು, ಮೃತರನ್ನು ಪಾವಗಡ ತಾಲ್ಲೂಕು ಎತ್ತಿನಹಳ್ಳಿಯ ಜನಾರ್ಧನರೆಡ್ಡಿ, ಇವರ ಪುತ್ರಿ 40 ವರ್ಷದ ಸಿಂಧೂ, ಪುತ್ರ ಟ್ರಯಾಕ್ ದೇವಾ, ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿಯ ಚಾಲಕ ಸಿದ್ದಗಂಗಪ್ಪ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ.

8 ವರ್ಷದ ಟ್ರಯಾಕ್ ದೇವಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular