Tuesday, December 3, 2024
Google search engine
Homeಮುಖಪುಟಆಫ್ಘಾನಿಸ್ತಾನ: ತಾಲಿಬಾನ್ ಉಗ್ರರಿಂದ 4 ಪ್ರಾಂತ್ಯ ವಶ

ಆಫ್ಘಾನಿಸ್ತಾನ: ತಾಲಿಬಾನ್ ಉಗ್ರರಿಂದ 4 ಪ್ರಾಂತ್ಯ ವಶ

ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ನಾಲ್ಕು ಪ್ರಮುಖ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದು ಆಘ್ಫಾನ್ ಸರ್ಕಾರಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಧಾನಿಯ ಸುಮಾರು 34ಕ್ಕೂ ಹೆಚ್ಚು ಪ್ರಾಂತ್ಯಗಳನ್ನುತಾಲಿಬಾನ್ ವಶಪಡಿಸಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ದಾಳಿ ಮಾಡಿದ ತಾಲಿಬಾನ್ ಉಗ್ರರು ಪ್ರಮುಖ ನಗರ ಲಷ್ಕರ್ ಗಾ, ಹೆಲ್ಮಂಡ್ ವಿಲಿ ಸೇರಿದಂತೆ ನಾಲ್ಕುಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಸೋಷಿಯೇಟೆಡ್ ಪ್ರೆಸ್ ವರದಿ ಮಾಡಿದೆ. ನುಸುಳುಕೋರರು ರಾಜಧಾನಿ ಸುತ್ತಮುತ್ತಲಿನ ಜನನಿಬಿಡ 34 ಪ್ರಾಂತ್ಯಗಳನ್ನು ವಶಪಡಿಸಿಕೊಂಡಿರುವುದರಿಂದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಎರಡನೇ ಮತ್ತು ಮೂರನೇ ದೊಡ್ಡ ಪ್ರದೇಶಗಳಾದ ಹೆರಾತ್ ಮತ್ತು ಕಂದಾಹಾರ್ ನಗರವನ್ನು ಕೂಡ ತಾಲಿಬಾನ್ ವಶಪಡಿಸಿಕೊಂಡಿದೆ. ಇದು ಆಫ್ಘಾನಿಸ್ತಾನ ಸರ್ಕಾರಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಫ್ಘಾನ್ ಉಪಾಧ್ಯಕ್ಷ ಅಮ್ರುಲ್ಲಾ ಸಾಲೆಹ್ ಮಾತನಾಡಿ ಸೇನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಾವು ತಾಲಿಬಾನ್ ವಿರುದ್ದ ನಿಲುವು ತೆಗೆದುಕೊಂಡಿದ್ದೇವೆ. ಪ್ರತಿಯೊಬ್ಬ ನಾಗರಿಕರು ಕೂಡ ದೇಶವನ್ನು ಬಲಪಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

ದಕ್ಷಿಣ ಉರುಜ್ಗಾನ್ ಪ್ರಾಂತ್ಯದ ರಾಜಧಾನಿ ತಿರಿನ್ ಕೋಟ್ ನಲ್ಲಿ ತಾಲಿಬಾನ್ ಹೋರಾಟಗಾರರು ಆಫ್ಘಾನ್ ಪಡೆಗಳಿಂದ ವಶಪಡಿಸಿಕೊಂಡ ಹಮ್ವೀ ಮತ್ತು ಪಿಕಪ್ ಅನ್ನು ಉದ್ಘಾಟಿಸಿ ಮುಖ್ಯ ಚೌಕದ ಮೂಲಕ ಮೆರವಣಿಗೆ ನಡೆಸಿದರು. ತಾಲಿಬಾನ್ ದಕ್ಷಿಣದಲ್ಲಿ ಜಬುಲ್ ಪ್ರಾಂತ್ಯದ ರಾಜಧಾನಿಗಳನ್ನು ಮತ್ತು ಪಶ್ಚಿಮದಲ್ಲಿ ಘೋರ್ ಅನ್ನು ವಶಪಡಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆಂದು ಅಸೋಷಿಯೇಟ್ ಪ್ರೆಸ್ ವರದಿಯಲ್ಲಿ ತಿಳಿಸಿದೆ.

ಅಮೆರಿಕಾ ತನ್ನ ಪಡೆಗಳನ್ನು ಆಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದ ಬಳಿಕ ತಾಲಿಬಾನ್ ಉಗ್ರರ ದಾಳಿ ಮತ್ತು ಪ್ರಾಂತ್ಯಗಳ ವಶಪಡಿಸಿಕೊಳ್ಳುವ ಪ್ರಕ್ರಿಯೆ ಚುರುಕಾಗಿದೆ. ಇನ್ನೊಂದು ಕಡೆ ಚೀನಾ ತಾಲಿಬಾನ್ ಉಗ್ರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂಬ ಆರೋಪಗಳು ಇವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular