Thursday, November 21, 2024
Google search engine
Homeಮುಖಪುಟವಿಶೇಷಚೇತನರ ಪೋಷಣೆ ಎಲ್ಲರ ಜವಾಬ್ದಾರಿ-ನಿವೃತ್ತ ಡಿಸಿ

ವಿಶೇಷಚೇತನರ ಪೋಷಣೆ ಎಲ್ಲರ ಜವಾಬ್ದಾರಿ-ನಿವೃತ್ತ ಡಿಸಿ

ವಿಕಲಚೇತನ ಮಕ್ಕಳ ಪಾಲನೆ ಪೋಷಣೆ ಅವರ ತಂದೆ, ತಾಯಿಗಳ ಜವಾಬ್ದಾರಿ ಮಾತ್ರವಲ್ಲ. ಜನಪ್ರತಿನಿಧಿಗಳು, ಪ್ರತಿ ನಾಗರಿಕರ ಜವಾಬ್ದಾರಿಯೂ ಹೌದು ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ತುಮಕೂರಿನ ಗಾಂಧಿನಗರದಲ್ಲಿನ ಮಾನಸ ಬುದ್ದಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಸಂಪ್ರದಾಯದಂತೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ವೇಳೆ ಮಕ್ಕಳು ಹಾಗೂ ಅವರ ಪೋಷಕರನ್ನು ಕುರಿತು ಮಾತನಾಡಿದ ಅವರು, ಇತರೆ ಮಕ್ಕಳಂತೆ ಅವರಿಗೆ ಅವಕಾಶಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಎಂದರು.

ಮಾನಸಿಕ ವಿಕಲಚೇತನ ಮಕ್ಕಳಿಗೆ ಕಲಿಸುವ ಶಿಕ್ಷಕರು, ಅವರನ್ನು ಪೋಷಿಸುವ ತಾಯಿಂದಿರುವ ನಿಜವಾದ ಸಾಧಕಿಯರು.ಈ ಮಕ್ಕಳನ್ನು ನೋಡಿಕೊಳ್ಳಲು ಅತ್ಯಂತ ತಾಳ್ಮೆ ಬೇಕಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಮಾನಸಿಕವಾಗಿ ಬೇಸರಗೊಂಡರು, ತೋರ್ಪಡಿಸಿಕೊಳ್ಳದೆ ಮಕ್ಕಳನ್ನು ಪಾಲನೆ, ಪೋಷಣೆ ಮಾಡುತ್ತಾರೆ. ಹಾಗಾಗಿ ಅವರನ್ನು ಸಾಧಕಿಯರು ಎಂದು ನಾನು ಕರೆಯಲು ಇಚ್ಚೆ ಪಡುತ್ತೇನೆ ಎಂದರು.

ನಾನು ಜಿಲ್ಲಾಧಿಕಾರಿಯಾದ ದಿನದಿಂದಲೂ ಮಾನಸ ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಪ್ರತಿವರ್ಷ ಭೇಟಿ ನೀಡಿ ಅವರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮೂಲಕ ಅವರಲ್ಲಿ ಒಬ್ಬನಾಗಿ ಬೇರೆತು ಹೋಗುತ್ತಿದ್ದೇನೆ. ಈ ಮಕ್ಕಳಿಗೆ ಒಂದು ಶಾಶ್ವತ ಕಟ್ಟಡ ಕಟ್ಟಲು ಶಾಲೆ ಮುಂದಾದರೆ ನನ್ನ ಕೈಲಾದ ನೆರವು ನೀಡಲು ಸಿದ್ದ ಎಂದು ಭರವಸೆ ನೀಡಿದರು.

ಮಾನಸ ಬುದ್ದಿಮಾಂಧ್ಯ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರಾದ ಸಾಗರನಹಳ್ಳಿ ಪ್ರಭು ಮಾತನಾಡಿ, ಹಿರಿಯರ ಸಹಕಾರ ಹಾಗೂ ನಮ್ಮಗಳ ನಿರಂತರ ಹೋರಾಟದ ಫಲವಾಗಿ ಇಂದು ಶಾಲೆಗೆ ಸರ್ಕಾರದ ಅನುದಾನ ದೊರೆಯುತ್ತಿದೆ. ಈ ಶಾಲೆಗೆ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂಬುದ ಕಾರ್ಯದರ್ಶಿ ಅವರ ಕನಸು ನನಸಾಗುವಂತಾಗಲಿದೆ ಎಂದರು.

ಡಾ.ಸಿ.ಸೋಮಶೇಖರ್ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಬೆಳಗುಂಬದಲ್ಲಿರುವ ರೆಡ್‌ಕ್ರಾಸ ಸಂಸ್ಥೆಯ ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು. ಮಕ್ಕಳಿಗೆ ಸಿಹಿ ಹಂಚಿ, ಮಧ್ಯಾಹ್ನ ಬೋಜನದ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಸರ್ವಮಂಗಳ ಡಾ.ಸಿ.ಸೋಮಶೇಖರ್, ಮಾನಸ ಬುದ್ದಿ ಮಾಂಧ್ಯ ಮಕ್ಕಳ ಶಾಲೆಯ ಕಾರ್ಯದರ್ಶಿ ಡಿ.ಆರ್.ಶಿವಕುಮಾರ್, ಎಂ.ವಿ.ಬಸವರಾಜು, ಮೈತ್ರಿ ಬಳಗದ ನಳಿನಿ ಶಿವಾನಂದ್, ರೋಟಿರಿ ಅಧ್ಯಕ್ಷ ರಾಜಶೇಖರಿ ರುದ್ರಪ್ಪ, ಎಂ.ಜಿ.ಸಿದ್ದರಾಮಯ್ಯ, ಡಾ.ನೀಲಕಂಠಪ್ಪ, ಪ್ರೊ.ಲೀಲಾ ಲೇಪಾಕ್ಷ, ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಸಿದ್ದಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಪ್ರಸನ್ನಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಕೃಷ್ಣಪ್ಪ, ಉಮಾಮಹೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular