ಸರ್ಕಾರಿ ಪದವಿ ಪೂರ್ವ ಕಾಲೇಜು ಕೊರಟಗೆರೆಯಲ್ಲಿ NCC ಘಟಕದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಪ್ರಾಚಾರ್ಯ N,R. ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಸೇನೆಗೆ ಸೇರಿ ದೇಶ ಸೇವೆ ಮಾಡಿ ಎಂದು ಕರೆ ನೀಡಿದರು.
ಈ ನೆಲದಲ್ಲಿ ಬದುಕುವವರಿಗೆ ದೇಶ ಮೊದಲು. ಪ್ರತಿ ಮನೆಯಿಂದಲೂ ದೇಶ ರಕ್ಷಿಸುವ ಧೀರ ಯೋಧರು ರೂಪುಗೊಳ್ಳುವುದು ಇಂದಿನ ಅಗತ್ಯ. ಪ್ರತಿ ವಿದ್ಯಾರ್ಥಿಗಳು ದೇಶದ ಕರೆ ಬಂದಾಗ ಸದಾ ಸಿದ್ಧರಿರಬೇಕು. ನುಸುಳಿಕೋರರನ್ನು ಸದೆಬಡೆದ ನಮ್ಮ ವೀರ ಯೋಧರು ಸದಾ ಸ್ಮರಣೀಯ. ಕಾರ್ಗಿಲ್ ನೆನೆಸಿಕೊಂಡಾಗ ಮೈಮನಗಳಲ್ಲಿ ರೋಮಾಂಚನ. ಅದರೂ ಅನೇಕ ಸೈನಿಕರು ಜೀವ ತೆತ್ತಿದ್ದಾರೆ ಅವರ ವೀರಮರಣವನ್ನು ಗೌರವಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯಶಂಕರ್ ಮಾತನಾಡಿ, ದೇಶವೆಂದರೆ ಬರೀ ಗಡಿಯಲ್ಲ. ಗಡಿಯನ್ನು ಒಳಗೊಂಡಂತೆ ದೇಶದೊಳಗಿರುವ ಎಲ್ಲಾ ಜೀವಕೋಟಿಗಳು. ಅವುಗಳೆಲ್ಲವನ್ನು ಕಾಪಾಡುವ ಜವಾಬ್ದಾರಿಯನ್ನು ನಮ್ಮ ಸೈನ್ಯ ಹೊತ್ತುಕೊಂಡಿದೆ. ಅಂಥ ಸೈನಿಕರು ಸಾಧಿಸಿದ ವಿಜಯ ನಮ್ಮ ವಿಜಯ. ದೇಶದ ವಿಜಯ. ಅದನ್ನು ಸ್ಮರಿಸುತ್ತಲೇ ನಮ್ಮನ್ನು ದೇಶಕ್ಕೆ ಮುಡಿಪಾಗಿಡಬೇಕು ಎಂದು ಹೇಳಿದರು.
ಕೊರಟಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ಘಟಕ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ ಮತ್ತು ಎಲ್ಲಾ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್ ಸಿ ಸಿ ಕೆಡೆಟ್ ಗಳಿಗೆ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.