Friday, November 22, 2024
Google search engine
Homeಮುಖಪುಟಅವ್ಯವಹಾರ ಖಂಡಿಸಿ ಜುಲೈ 25ರಿಂದ ಪ್ರತಿಭಟನೆ

ಅವ್ಯವಹಾರ ಖಂಡಿಸಿ ಜುಲೈ 25ರಿಂದ ಪ್ರತಿಭಟನೆ

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ 187 ಕೋಟಿ ಅವ್ಯವಹಾರವನ್ನು ಖಂಡಿಸಿ, ತಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜು.25 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದ ವತಿಯಿಂದ ಬೃಹತ್ಚ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಚಳವಳಿ ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವುದು ಭ್ರಷ್ಟಾಚಾರವಲ್ಲ ಹಗಲು ದರೋಡೆ. ಮಂತ್ರಿಗಳು, ಅಧಿಕಾರಿಗಳು, ಸರ್ಕಾರ ಸೇರಿ, ಬುಡಕಟ್ಟು ಜನರಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ತಿಂದು ತೇಗಿದ್ದಾರೆ. ಇದರಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಪಾತ್ರವಿದ್ದು, ಸೂಕ್ತ ತನಿಖೆ ಮೂಲಕ ರಾಜ್ಯದ ಜನರ ಮುಂದೆ ಸತ್ಯ ಹೊಂದಿದೆ ಬರಬೇಕೇಂದು ಆಗ್ರಹಿಸಿದರು.

ಹಣಕಾಸು ಇಲಾಖೆ ಇರುವುದು ಮುಖ್ಯಮಂತ್ರಿಗಳ ಕೈಯಲ್ಲಿ. ಇಷ್ಟೊಂದು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿರುವಾಗ ಗಮನ ಹರಿಸಬೇಕಾಗಿತ್ತು. ಅದನ್ನು ಬಿಟ್ಟು ನನ್ನ ಗಮನಕ್ಕೆ ಬಂದಿಲ್ಲ ಎಂದು ನುಣುಚಿಕೊಳ್ಳುವುದು ತರವಲ್ಲ. ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ವರ್ಗಕ್ಕೆ ಸಿಗಬೇಕಾದ ಸವಲತ್ತುಗಳ ಕುರಿತು ಕ್ರಿಯಾಯೋಜನೆಯೇ ಸಿದ್ದಗೊಂಡಿಲ್ಲ ಎಂದರೆ, ಸರ್ಕಾರ ಎನು ಕಣ್ಣುಮುಚ್ಚಿ ಕುಳಿತಿದೆಯೇ ಎಂದು ಚಳವಳಿ ರಾಜಣ್ಣ ಪ್ರಶ್ನಿಸಿದರು.

ರಾಜ್ಯ ಸರ್ಕಾರ 2013 ರಿಂದ ಇದುವರೆಗೆ ಸುಮಾರು 3 ಲಕ್ಷ ಕೋಟಿ ರೂಗಳನ್ನು ಎಸ್ಸಿಪಿ, ಟಿಎಸ್ಪಿ ಕಾಯ್ದೆಯಡಿ ಕಾಯ್ದರಿಸಿದೆ. ಇಷ್ಟು ಹಣವನ್ನು ಸಮರ್ಪಕವಾಗಿ ಸಮುದಾಯಗಳ ಅಭಿವೃದ್ದಿಗೆ ಬಳಕೆ ಮಾಡಿದ್ದರೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಎಸ್ಸಿ, ಎಸ್ಟಿ ವರ್ಗದ ಜನರನ್ನು ಬಡತನದಿಂದ ಮೇಲೆತ್ತಬಹುದಾಗಿತ್ತು. ಆದರೆ ಬಡವರ ಅಭಿವೃದ್ಧಿಗೆ ಇಟ್ಟ ಹಣವನ್ನ ಇದುವರೆಗೂ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ತಿಂದು ತೇಗಿವೆ. ಅಭಿವೃದ್ಧಿ ಎಂಬುದು ಕಡತದಲ್ಲಿ ಮಾತ್ರವಿದೆ. ವಾಸ್ತವದಲ್ಲಿ ಶೂನ್ಯ. ಹಾಗಾಗಿ ಸುಮಾರು 2000 ಜನರು ಜುಲೈ 25 ರಂದು ಸೂಕ್ತ ತನಿಖೆ, ತಪ್ಪಿತಸ್ಥರ ವಿರುದ್ದ ಕ್ರಮವಹಿಸುವಹಿಸುವುದು ಹಾಗು ಅವ್ಯವಹಾರವಾಗಿರುವ ಹಣಕ್ಕೆ ಪರ್ಯಾಯ ಅನುದಾನ ನೀಡಿ ನಿಗಮದ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯಹಾರದಲ್ಲಿ ಭಾಗಿಯಾಗಿರುವ 18 ಜನರ ವಿರುದ್ದ ಎಸ್ಸಿಪಿ,ಟಿಎಸ್ಪಿ ಪ್ರತ್ಯೇಕ ಕಾಯ್ದೆ ಇದ್ದರು, ಭ್ರಷ್ಟಾಚಾರ ಕಾಯ್ದೆಯಡಿ ಕೇಸು ದಾಖಲಿಸಿರುವುದು ತರವಲ್ಲ. ಅಲ್ಲದೆ, ಎಸ್ಸಿಪಿ, ಟಿಎಸ್ಪಿ ಕಾಯ್ದೆಯ ಅನ್ವಯ ಈ ರೀತಿಯ ಅವ್ಯವಹಾರಗಳು ನಡೆದ ಸಂದರ್ಭದಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶವಿಲ್ಲ. ಸರ್ಕಾರವೇ ದೂರು ಸಲ್ಲಿಸಬೇಕಿದೆ. ಇದು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ತಳಸಮುದಾಯದ ಹೆಸರಿನಲ್ಲಿ ತಿಂದು ತೇಗಲು ರಹದಾರಿ ಕಲ್ಪಿಸಿದಂತಾಗಿದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ.

ಸಮಾಜವಾದಿ, ಅಹಿಂದ ಎಂಬ ಸೈದ್ದಾಂತಿಕ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ವಾಲ್ಮೀಕಿ ಸೇರಿದಂತೆ ಹಿಂದುಳಿದ ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದು ನಿಜ. ಇದು ಸರ್ಕಾರದ ನೀಚ ಆಡಳಿತದ ಪರಮಾವಧಿಯಾಗಿದೆ. ಸಿದ್ದರಾಮಯ್ಯ ಅಹಿಂದ ಹೋರಾಟ ಬೆತ್ತಲಾಗಿದೆ. ತಳಸಮುದಾಯಕ್ಕೆ ಕೊಟ್ಟಂತೆ ಮಾಡಿ ಅಧಿಕಾರಿಗಳು, ರಾಜಕಾರಣಿಗಳು ಲೂಟಿ ಹೊಡೆಯುತಿದ್ದಾರೆ. ರಾಜ್ಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಶಾಸಕರಿದ್ದರಿದ್ದರು ಅವ್ಯವಹಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular