Saturday, July 20, 2024
Google search engine
Homeಜಿಲ್ಲೆತುಮಕೂರು ರೈಲ್ವೆ ನಿಲ್ದಾಣದಲ್ಲಿ ಹಸುಗೂಸು ಶವ ಪತ್ತೆ

ತುಮಕೂರು ರೈಲ್ವೆ ನಿಲ್ದಾಣದಲ್ಲಿ ಹಸುಗೂಸು ಶವ ಪತ್ತೆ

ತುಮಕೂರು ನಗರದ‌ ರೈಲು ನಿಲ್ದಾಣದಲ್ಲಿ ಹಸುಗೂಸಿನ ಶವ ಬುಧವಾರ ರಾತ್ರಿ 9.30 ರ ಸಮಯದಲ್ಲಿ ಪತ್ತೆಯಾಗಿದೆ. ಮಕ್ಕಳ ಮಾರಾಟ ಜಾಲ ಪತ್ತೆಯಾದ ಒಂದು ದಿನದಲ್ಲೇ ಹಸುಗೂಸಿನ ಶವ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.

ಎರಡ್ಮೂರು ದಿನದ‌ ಹಸುಗೂಸು ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಈ‌ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಮೃತ ಮಗುವನ್ನು ಜಿಲ್ಲಾಸ್ಪತ್ರೆ ಶವಗಾರಕ್ಕೆ ಕಳುಹಿಸಿದ್ದಾರೆ.

ನಿನ್ನೆಯಷ್ಠೇ ಮಕ್ಕಳ ಮಾರಾಟ ಜಾಲವನ್ನ ‌‌ ತುಮಕೂರು ಪೊಲೀಸರು ಭೇದಿಸಿದ್ದರು, ಒಂದೇ ಗ್ಯಾಂಗ್ ನ 7 ಜನರನ್ನ ಬಂಧಿಸಿದ ಬೆನ್ನಲ್ಲೆ ರೈಲ್ವೆ ನಿಲ್ದಾಣದಲ್ಲಿ ಹಸುಗೂಸು ಪತ್ತೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಸದ್ಯ ತಿಲಕ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular