Tuesday, December 3, 2024
Google search engine
Homeಜಿಲ್ಲೆಡಾ.ರವಿಕುಮಾರ್ ನೀಹಗೆ ವೀಚಿ ಸಾಹಿತ್ಯ ಪ್ರಶಸ್ತಿ

ಡಾ.ರವಿಕುಮಾರ್ ನೀಹಗೆ ವೀಚಿ ಸಾಹಿತ್ಯ ಪ್ರಶಸ್ತಿ

2023ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಗಳು ಪ್ರಕಟವಾಗಿದ್ದು, ತುಮಕೂರು ಜಿಲ್ಲೆಯ ವಿಮರ್ಶಕ ಹಾಗೂ ಲೇಖಕ ಡಾ.ರವಿಕುಮಾರ್ ನೀಹ ಅವರ ಅರಸು ಕುರನ್ಗರಾಯ (ಸಂಶೋಧನೆ) ಮತ್ತು ಡಾ.ಬಿ.ಜನಾರ್ದನ ಭಟ್ ಅವರ ವಿನೂತನ ಕಥನ ಕಾರಣ (ವಿಮರ್ಶೆ) ಕೃತಿಗಳು ವೀಚಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದು ವೀಚಿ ಸಾಹಿತ್ಯ ಪ್ರತಿಷ್ಠಾನ ತಿಳಿಸಿದೆ.

ಪ್ರಶಸ್ತಿಯು 25 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು ಒಂದು ಪ್ರಶಸ್ತಿಗೆ ಎರಡು ಕೃತಿಗಳು ಆಯ್ಕೆಯಾಗಿರುವುದರಿಂದ ಪ್ರಶಸ್ತಿ ಮೊತ್ತವನ್ನು ಇಬ್ಬರು ಲೇಖಕರಿಗೂ ಸಮನಾಗಿ ಹಂಚಲಾಗುವುದು ಎಂದು ಪ್ರತಿಷ್ಠಾನ ಹೇಳಿದೆ.

ವೀಚಿ ಯುವ ಪ್ರಶಸ್ತಿಗೆ ದಯಾನಂದ ಅವರ ಬುದ್ದನ ಕಿವಿ(ಕತೆಗಳು) ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಎಚ್.ದಂಡಪ್ಪ, ಎಸ್.ಗಂಗಾಧರಯ್ಯ ಮತ್ತು ಗೀತಾ ವಸಂತ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಹಿಂದಿನ ವರ್ಷದ ಸಾಹಿತ್ಯ ಕೃತಿಗಳನ್ನು ಅವಲೋಕನ ಮಾಡಿ ಈ ಆಯ್ಕೆ ಮಾಡಿದೆ ಎಂದು ವೀಚಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್.ನಾಗರಾಜ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular