Thursday, September 19, 2024
Google search engine
Homeಮುಖಪುಟಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ - ದಲಿತ ಮುಖಂಡರ ಕರೆ

ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ – ದಲಿತ ಮುಖಂಡರ ಕರೆ

ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಜಿಲ್ಲೆಯ ದಲಿತಪರ ಒಕ್ಕೂಟದ ಮುಖಂಡರು ಮತದಾರರಲ್ಲಿ ಮನವಿ ಮಾಡಿಕೊಂಡರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಡಾ.ಪಿ.ಚಂದ್ರಪ್ಪ, ಕೆ.ದೊರೈರಾಜ್ ಮುಂತಾದವರು ಪ್ರಸಕ್ತ ನಡೆಯುತ್ತಿರುವ ೧೮ನೇ ಲೋಕಸಭಾ ಚುನಾವಣೆಯಲ್ಲಿ ಸಂವಿ ಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಸೋಲಿಸುವಂತೆ ಕೋರಿದರು.

ಸನಾತನವಾಗಿ ಕುತಂತ್ರವಾಗಿ ಸಾವಿರಾರು ವರ್ಷಗಳಿಂದ ದಲಿತ ಸಮುದಾಯಗಳು ಬಲಿಯಾಗುತ್ತಿದ್ದು, ಕ್ರೂರ ಅಸ್ಪೃಶ್ಯತೆ, ಅವಮಾನ, ದೌರ್ಜನ್ಯ, ಅವಕಾಶಗಳ ವಂಚನೆ ಮತ್ತು ನಮ್ಮ ಜಾತಿಯ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ಕಳೆದ ೧೦ ವರ್ಷಗಳಿಂದ ದೇಶದಲ್ಲಿ ಹೆಚ್ಚಾಗಿದೆ. ಇದಕ್ಕೆ ಬಿಜೆಪಿ ಆಡಳಿತವೇ ಕಾರಣವಾಗಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರ್ಕಾರದ ಮೀಸಲಾತಿ ವಿರೋಧಿ ನಡೆಯಿಂದ ಇಡಬ್ಲ್ಯೂಎಸ್ ಮೀಸಲಾತಿಯನ್ನು ಒಂದೆ ದಿನದಲ್ಲಿ ಜಾರಿಗೆ ತಂದು ಇದರ ಪರಿಭಾಷೆಯನ್ನು ಬದಲಾಯಿಸಿ ಸಂವಿಧಾನ ವಿರೋಧಿ ನಡೆಯನ್ನು ತೆಗೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ನಾಶ ಮಾಡಿ ಧರ್ಮ ಮತ್ತು ಜಾತಿ ಹೆಸರಿನಲ್ಲಿ ದ್ವೇಶವನ್ನು ಬಿತ್ತಿ, ಅಸ್ಪೃಶ್ಯರನ್ನು ವಿಭಜನೆ ಮಾಡಿ ಮತ್ತೆ ಗುಲಾಮಗಿರಿಗೆ ತಳ್ಳಲಾಗುತ್ತಿದೆ ಎಂದು ಟೀಕಿಸಿದರು.

ಸಂವಿಧಾನಬದ್ಧವಾದ ಒಳ ಮೀಸಲಾತಿಯನ್ನು ಜಾರಿಗೆ ತರದೆ ಸುಪ್ರೀಮ್ ಕೋರ್ಟ್ನಲ್ಲಿ ವಿಚಾರಣೆ ನೆಪದಲ್ಲಿ ನೆನೆಗುದಿಗೆ ಬೀಳುವಂತೆ ಮಾಡಿರುವುದು ೧೦೧ ಜಾತಿಯ ಪರಿಶಿಷ್ಟರಿಗೆ ಬಗೆದ ದ್ರೋಹವಾಗಿದ್ದು, ಬೇರೆ ವಿಷಯಗಳಲ್ಲಿ ಕೋರ್ಟ್ ಕಲಾಪ ಮೀರಿಯೂ ಸುಗ್ರಿವಾಜ್ಞೆ ಮೂಲಕ ಕಾನೂನುಗಳನ್ನು ಜಾರಿಗೆ ತರುವ ಬಿಜೆಪಿ ಒಳ ಮೀಸಲಾತಿ ವಿಚಾರದಲ್ಲಿ ನಿಧಾನ ಧೋರಣೆ ತಾಳುತ್ತಿದೆ ಎಂದು ದೂರಿದರು.

ಯುಪಿಎ ಅವಧಿಯಲ್ಲಿ ನೇಮಿಸಿದ್ದ ಜೆಸ್ಟಿಸ್ ಉಷಾ ಮೆಹರಾ ಸಮಿತಿಯ ಮೀಸಲಾತಿ ವರ್ಗೀಕರಣಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯವನ್ನು ಮುಚ್ಚಿಟ್ಟು ರಾಷ್ಟಿçÃಯ ಒಳಮೀಸಲಾತಿ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಕ್ಕು ತಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಕಾಪಾಡಿಕೊಳ್ಳಲು ದಲಿತ ಸಮುದಾಯದ ಎಲ್ಲಾ ೧೦೧ ಜಾತಿಗಳು ಒಂದಾಗಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

ದಲಿತ ಮುಖಂಡರಾದ ಹೆಚ್.ಕೆಂಚಮಾರಯ್ಯ, ವಾಲೆ ಚಂದ್ರಯ್ಯ, ನರಸೀಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಜಯಮೂರ್ತಿ, ನರಸಿಂಹಯ್ಯ, ನರಸಿಂಹಮೂರ್ತಿ, ಶಿವಾಜಿ, ಡಾ. ಮುರುಳೀಧರ್, ಶ್ರೀನಿವಾಸ್ ಮುಂತಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular