Thursday, May 30, 2024
Google search engine
Homeಮುಖಪುಟಮೋದಿ ಹುಸಿ ಭರವಸೆಗಳ ಸರದಾರ - ಪ್ರೊ.ರವಿವರ್ಮಕುಮಾರ್

ಮೋದಿ ಹುಸಿ ಭರವಸೆಗಳ ಸರದಾರ – ಪ್ರೊ.ರವಿವರ್ಮಕುಮಾರ್

ಬಿಜೆಪಿ ಸರ್ಕಾರದ ಮೊದಲ ಶತ್ರು ಅಭಿವ್ಯಕ್ತಿ ಸ್ವಾತಂತ್ರ್ಯ, ಮೋದಿ ಹತ್ತು ವರ್ಷ ಆಡಳಿತ ನಡೆಸಿದರು ಒಂದೇ ಒಂದು ದಿನವೂ ಪ್ರತಿಕಾ ಸಂವಾದವನ್ನು ನಡೆಸಿಲ್ಲ, ಜನರಿಗೆ ಬರಿ ಭರವಸೆಗಳ ಮಹಾಪುರ ಹರಿಸಿ ಅಧಿಕಾರಕ್ಕೆ ಬಂದಿದ್ದಾರೆ ಅಷ್ಷೇ ಭರವಸೆಗಳು ಭರವಸೆಗಳಾಗೆ ಉಳಿದಿವೆ ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್‌ ಆರೋಪಿಸಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ, ಕಪ್ಪು ಹಣ ತರುತ್ತೇನೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ದೇಶದ ಜನತೆಗೆ ನೀಡಿದ ಭರವಸೆಗಳು ಹುಸಿಯಾಗಿವೆ,
ಪ್ರಧಾನ ಮಂತ್ರಿ ಹೆಸರಲ್ಲಿ ನಿಧಿಸಂಗ್ರಹ ಮಾಡಿದರು. ಈ ಹಣ ಏನಕ್ಕೆ ವಿಯೋಗಿಸಲಾಗಿದೆ ಎನ್ನುವ ಮಾಹಿತಿ ಇಲ್ಲ. ಭ್ರಷ್ಟಾಚಾರ ನಿಗ್ರಹಕ್ಕೆ ಸರಿಯಾದ ನಿಯಮಗಳನ್ನು ‌ರೂಪಿಸಿಲ್ಲ,‌ ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿ‌ ನಡೆಸಿರುವ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪು ಶ್ಲಾಘನೀಯ ಎಂದರು.

ನೋಟಿನ ಅಮಾನ್ಯಕರಣದಿಂದ ದೇಶದ ಜನಕ್ಕೆ ಅನಾನುಕೂಲವಾಗಿದೆ. ಇಡಿ, ಸಿಬಿಐ, ಐಟಿ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಂಡು ಬಿಜೆಪಿ ವಿರುದ್ಧ ಮಾತನಾಡುವವರನ್ವು ದ್ವೇಷದ ರಾಜಕಾರಣಕ್ಕೆ ಗುರಿ ಮಾಡುತ್ತಾ , ವಿರೋಧ ಪಕ್ಷಗಳ ಮುಖಂಡರನ್ನು ಬ್ಲಾಕ್ ಮೇಲ್ ಮಾಡುವುದು, ಜೈಲಿಗೆ ಹಾಕುವುದು ಎಷ್ಟು ‌ಸರಿ ಎಂದು ಪ್ರಶ್ನಿಸಿದರು.

ಅತ್ಯಂತ ಭ್ರಷ್ಟ ರಾಜಕೀಯ ಪಕ್ಷ ಬಿಜೆಪಿ ಎಂದು ಪರಕಾಲ ಪ್ರಭಾಕರ್ ಹೇಳಿರುವುದು ಸತ್ಯವೆನ್ನಿಸುತ್ತದೆ. ಭಾರತದಲ್ಲಿ ಈಗ
ಅಘೋಷಿತ ನಿರಂಕುಶ ಪ್ರಭುತ್ವವಿದೆ. ಬಿಜೆಪಿ ಇನ್ನೂರು ಸೀಟು ದಾಟುವುದಿಲ್ಲ. ಪ್ರತಿ ಹಳ್ಳಿಯಲ್ಲೂ ಜನ ಬಿಜೆಪಿಗರನ್ನು ಪ್ರಶ್ನಿಸುತ್ತಿದ್ದಾರೆ. ಬಿಜೆಪಿಯವರು ಮಾತ್ರ ನಾವು 400 ಸೀಟು ಗೆಲ್ಲುತ್ತೆವೆ ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿಗಳು ಜನರಿಗೆ ನೆಮ್ಮದಿ ನೀಡಿವೆ.
ಮತದಾರರು ಎಚ್ಚೆತ್ತುಕೊಂಡು ಮತದಾನ ಮಾಡಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ ರೈತ, ಮಹಿಳೆ ,ಯುವಜನ ಮತದಾರರು ಚುನಾವಣೆಯಲ್ಲಿ ಮತದಾನ ಮಾಡಿ ಯೋಗ್ಯರನ್ನು ಆಯ್ಕೆ ಮಾಡಲು ಜಾಗೃತಿ ಮೂಡಿಸಲಾಗುವುದು, ನಮ್ಮ ದೇಶದ ಹಣಕಾಸಿನ ‌ಸಚಿವರೆ ಚುನಾವಣೆಗೆ‌ ನಿಲ್ಲಲು ಹಣವಿಲ್ಲ ಎನ್ವುವ ಪರಿಸ್ಥಿತಿ ಬಂದಿದೆ, ಬಿಜೆಪಿ ಹೆದರಿಕೆ ಮತ್ತು ಬೆದರಿಕೆಗಳನ್ನು ಒಡುವಂತಹ ಘಟನೆಗಳು ಪ್ರಜಾಪ್ರಭುತ್ವದಲ್ಲಿ ನಡೆಸುತ್ತಿದೆ ಇದು ಕೊನೆಯಾಗಬೇಕು. ಧರ್ಮ ನಿರಪೇಕ್ಷತ್ತೆ ಎನ್ನುವುದು ಬಿಜೆಪಿ ಆಡಳಿತದಲ್ಲಿ ಮರಿಚಿಕೆಯಾಗಿದೆ ಎಂದು ಆರೋಪಿಸಿದರು.

ದಲಿತ ಚಿಂತಕ ದೊರೈರಾಜು ಮಾತನಾಡಿ, ಜನಪರ ಕಾಳಜಿ ಇರುವ ವ್ಯಕ್ತಿ, ಸಂಸತ್ತಿನಲ್ಲಿರಬೇಕು ಬಡವರು, ಕಾರ್ಮಿಕರು, ರೈತರ ಪರವಾಗಿ ಧ್ವನಿ ಎತ್ತಿ ಕಾನೂನು ರೂಪಿಸುವಂತಹ ಬೌದ್ಧಿಕ ಶಕ್ತಿ ಮುದ್ದಹನುಮೇಗೌಡರಿಗೆ ಇದೆ. ಮುದ್ದಹನುಮೇಗೌಡರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನರಸಿಂಹಮೂರ್ತಿ, ಡಾ. ಬಸವರಾಜು, ನಟರಾಜಪ್ಪ, ಹೈಕೋರ್ಟ್ ವಕೀಲ ಮಂಜುನಾಥ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments