Wednesday, November 6, 2024
Google search engine
Homeಮುಖಪುಟತುಮಕೂರು - ವಿದ್ಯಾನಿಧಿ ಪ.ಪೂ.ಕಾಲೇಜು ವಿದ್ಯಾರ್ಥಿನಿ ಜ್ಞಾನವಿ ರಾಜ್ಯಕ್ಕೆ ಪ್ರಥಮ

ತುಮಕೂರು – ವಿದ್ಯಾನಿಧಿ ಪ.ಪೂ.ಕಾಲೇಜು ವಿದ್ಯಾರ್ಥಿನಿ ಜ್ಞಾನವಿ ರಾಜ್ಯಕ್ಕೆ ಪ್ರಥಮ

ಪ್ರಸಕ್ತ ವರ್ಷದ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತುಮಕೂರಿನ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ. ಜ್ಞಾನವಿ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿ ಜ್ಞಾನವಿ ಅವರ ತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ದಂಪತಿ ಎಡೆಯೂರು ಸಮೀಪದ ಹಾಗೂ ಮಂಡ್ಯ ಜಿಲ್ಲೆಯ ಬೀಚನಹಳ್ಳಿ ಗ್ರಾಮದವರಾಗಿದ್ದು, ಹೋಟೆಲ್ ನಡೆಸಿಕೊಂಡು ಮಗಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ವ್ಯಾಸಂಗ ಮಾಡಿಸುತ್ತಿದ್ದರು.

ಜ್ಞಾನವಿ ಮಾತನಾಡಿ, ಓದುವಾಗ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಮೊಬೈಲ್‌ನಿಂದ ದೂರವಿದ್ದು ಓದುತ್ತಿದ್ದೆ. ಹಾಗೆಯೇ ನಮ್ಮ ಹಾಸ್ಟೆಲ್‌ನಲ್ಲೂ ಸಹ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ. ಇದು ಸಹ ಈ ಮಟ್ಟದ ಸಾಧನೆಗೆ ಕಾರಣವಾಯಿತು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಿಎ ಆಗುವ ಇಂಗಿತ ಹೊಂದಿರುವ ನಾನು ಈಗಾಗಲೇ ವಿದ್ಯಾವಾಹಿನಿ ಕಾಲೇಜಿನಲ್ಲಿ ಸಿಎ ಮತ್ತು ಬಿ.ಕಾಂ. ಓದಲು ದಾಖಲಾಗಿದ್ದೇನೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular