ಮಾರ್ಚ್ ತಿಂಗಳಲ್ಲಿ ನಡೆದಿದ್ದ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ರಾಜ್ಯದಲ್ಲಿ ಶೇಕಡ 84.59 ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ. 97.39 ಫಲಿತಾಂಶ ಬಂದು ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಶೆ.96.80ರಷ್ಟು ಫಲಿತಾಂಶ ದಾಖಲಿಸಿ 2ನೇ ಸ್ಥಾನದಲ್ಲಿದೆ. ವಿಜಯಪುರ ಶೇ.94.89ರಷ್ಟು ಉತ್ತೀರ್ಣರಾಗಿದ್ದು ಮೂರನೇ ಸ್ಥಾನ ಪಡೆದಿದೆ. ಗದಗ ಜಿಲ್ಲೆ ಶೇ. 72.86ರಷ್ಟು ಪಡೆದು ಕೊನೆಯ ಸ್ಥಾನದಲ್ಲಿದೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾಲಕ್ಷ್ಮಿ 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಕಲಾವಿಭಾಗದಲ್ಲಿ ಬೆಂಗಳೂರಿನ ವಿಜಯನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನ ಡಿ.ಮೇಧಾ, ವಿಜಯಪುರದ ಎಸ್.ಎಸ್.ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ್ ಮತ್ತು ಬಳ್ಳಾರಿಯ ಕೊತ್ತೂರು ಕಾಲೇಜಿನ ಬಿ.ವಿ.ಕವಿತಾ ಟಾಪರ್ ಆಗಿದ್ದಾರೆ.
ಉತ್ತರ ಕನ್ನಡ ಶೇ. 92.51(4ನೇ ಸ್ಥಾನ), ಕೊಡಗು-ಶೇ.92.13 (5ನೇ ಸ್ಥಾನ), ಬೆಂಗಳೂರು ದಕ್ಷಿಣ ಶೇ. 89.57 (6ನೇ ಸ್ಥಾನ), ಬೆಂಗಳೂರು ಉತ್ತರ-88.67 (7ನೇ ಸ್ಥಾನ), ಶಿವಮೊಗ್ಗ 88.58 (8ನೇ ಸ್ಥಾನ), ಚಿಕ್ಕಮಗಳೂರು 88.20 (9ನೇ ಸ್ಥಾನ), ಬೆಂಗಳೂರು ಗ್ರಾಮಾಂತರ 87.55 (10ನೇ ಸ್ಥಾನ) ಪಡೆದಿದೆ.
ಬಾಗಲಕೋಟೆ 87.54 (11ನೇ ಸ್ಥಾನ), ಕೋಲಾರ 86.12 (12ನೇ ಸ್ಥಾನ), ಹಾಸನ 85.83 (13ನೇ ಸ್ಥಾನ), ಚಾಮರಾಜನಗರ 84.99 (14ನೇ ಸ್ಥಾನ), ಚಿಕ್ಕೋಡಿ 84.10 (15ನೇ ಸ್ಥಾನ), ರಾಮನಗರ 83.58 (16ನೇ ಸ್ಥಾನ), ಮೈಸೂರು 83.13 (17ನೇ ಸ್ಥಾನ), ಚಿಕ್ಕಬಳ್ಳಾಪುರ 82.84 (18ನೇ ಸ್ಥಾನ), ಬೀದರ್ 81.69 (19ನೇ ಸ್ಥಾನ), ತುಮಕೂರು 81.03 (20ನೇ ಸ್ಥಾನ) ಪಡೆದಿವೆ.
ದಾವಣಗೆರೆ 80.96 (21ನೇ ಸ್ಥಾನ), ಕೊಪ್ಪಳ-80.83 (22ನೇ ಸ್ಥಾನ), ಧಾರವಾಡ – 80.70(23ನೇ ಸ್ಥಾನ), ಮಂಡ್ಯ 80.56 (24ನೇ ಸ್ಥಾನ), ಹಾವೇರಿ 78.36 (25ನೇ ಸ್ಥಾನ), ಯಾದಗಿರಿ 77.29 (26ನೇ ಸ್ಥಾನ), ಬೆಳಗಾವಿ 77.20 (27ನೇ ಸ್ಥಾನ), ಕಲಬುರಗಿ 75.48 (28ನೇ ಸ್ಥಾನ), ಬಳ್ಳಾರಿ 74.70 (29ನೇ ಸ್ಥಾನ), ರಾಯಚೂರು 73.11 (30ನೇ ಸ್ಥಾನ), ಚಿತ್ರದುರ್ಗ 72.92 (31ನೇ ಸ್ಥಾನ), ಗದಗ 72.86 32ನೇ ಸ್ಥಾನ ಪಡೆದುಕೊಂಡಿವೆ.
ಕಳೆದ ಬಾರಿಗಿಂತ ಈ ಬಾರಿ ಶೇಕಡವಾರು ಫಲಿತಾಂಶದಲ್ಲಿ ಹೆಚ್ಚಳವಾಗಿದೆ.