Saturday, December 7, 2024
Google search engine
Homeಮುಖಪುಟಸಾಮರಸ್ಯ ಪರಂಪರೆ ಪರವಾಗಿ ನಿಲ್ಲಲು ಕರೆ

ಸಾಮರಸ್ಯ ಪರಂಪರೆ ಪರವಾಗಿ ನಿಲ್ಲಲು ಕರೆ

ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿರುವ 18ನೇ ಲೋಕಸಭಾ ಚುನಾವಣೆಯಲ್ಲಿ ಬಹುತ್ವವನ್ನು ಉಳಿಸಿ ಬೆಳೆಸುವ ಮತ್ತು ಸಂವಿಧಾನವನ್ನು ರಕ್ಷಿಸುವ ನೆಲೆಯಲ್ಲಿ ರಾಜ್ಯದ ಜನರು ಮತ ಚಲಾಯಿಸಬೇಕು. ಮತದಾರರು ಯಾವುದೇ ಅಮಿಷಗಳಿಗೆ ಒಳಗಾಗದಂತೆ ದೇಶದ ಸಾಮರಸ್ಯ ಪರಂಪರೆಯ ಪರವಾಗಿ ನಿಲ್ಲಬೇಕು ಎಂದು ಹೋರಾಟಗಾರ್ತಿ ಬಿ.ಟಿ ಲಲಿತಾನಾಯಕ್ ಮನವಿ ಮಾಡಿದರು.

ತುಮಕೂರಿನಲ್ಲಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ರಕ್ಷಿಸಿ- ಪ್ರಜಾಪ್ರಭುತ್ವ ಉಳಿಸಿ ಜಾಗೃತಿ ಆಂದೋಲನ ಕುರಿತು ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.

ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನವಾಣೆ ನಡೆಯಬೇಕು ಮತ್ತು ಸಂವಿಧಾನದ ಆಶಯಗಳಿಗೆ ಯಾವುದೇ ಧಕ್ಕೆ ಆಗಬಾರದು ಎಂದು ಏಪ್ರಿಲ್ 1 ರಿಂದ 8 ರವರೆಗೆ ರಾಜ್ಯವ್ಯಾಪಿ ಸಂಕಲ್ಪ ಯಾತ್ರೆಯನ್ನು ಬೆಂಗಳೂರಿನಿಂದ ಬೆಳಗಾವಿವರೆಗೆ ಹಮ್ಮಿಕೊಂಡು ಮತಜಾಗೃತಿ ಅಭಿಯಾನ ಪ್ರಾರಂಭಿಸಲಾಗಿದೆ. ಹೀಗಾಗಿ ತುಮಕೂರಿನ ಜೀವಪರ ಮತ್ತು ಸಂವಿಧಾನ ಪ್ರಿಯರು ಈ ಜಾಗೃತಿ ಅಭಿಯಾನಕ್ಕೆ ಕೈಜೊಡಿಸಬೇಕು ಎಂದು ಮನವಿ ಮಾಡಿದರು.

ಪ್ರಗತಿಪರ ಚಿಂತಕರಾದ ಸಿ.ಯತಿರಾಜ್ ಮತ್ತು ಕೆ. ದೊರೈರಾಜ್ ಮಾತನಾಡಿ ದೇಶಲ್ಲಿ ಜನಾಂಗೀಯ ದ್ವೇಷ ಸಾಧಿಸಿ ಪ್ರಜಾಪ್ರಭುತ್ವದಲ್ಲಿ ಆಳುವ ಯಾವುದೇ ಪಕ್ಷಗಳು ಉಳಿದಿಲ್ಲ, ದೇಶದಲ್ಲಿ ಶಾಂತಿ, ಸೌಹಾರ್ದತೆ ಬಯಸುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ಮನಸ್ಸುಗಳು ಸಂವಿಧಾನದ ಉಳಿವಿಗಾಗಿ, ರೈತರ ಉಳಿವಿಗಾಗಿ ಮತ್ತು ಭವಿಷ್ಯದಲ್ಲಿ ನೆಮ್ಮದಿಯ ಬದುಕಿಗಾಗಿ ಉತ್ತಮರನ್ನು ಆಯ್ಕೆ ಮಾಡಿ ಎಚ್ಚರವಹಿಸಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಂವಿಧಾನ ರಕ್ಷಿಸಿ- ಪ್ರಜಾಪ್ರಭುತ್ವ ಉಳಿಸಿ ಜಾಗೃತಿ ನಾಗರೀಕರು-ಕರ್ನಾಟಕ ಮುಖಂಡರುಗಳಾದ ಡಾ.ಕೆ.ಮರುಳಸಿದ್ದಪ್ಪ, ರೈತ ಮುಖಂಡರು, ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳಾದ ತಾಜುದ್ದೀನ್ ಷರೀಫ್, ಕೃಷ್ಣಮೂರ್ತಿ, ಅರುಣ್, ಸೇರಿದಂತೆ ವಿವಿಧ ಸಂಘನೆಗಳ ಮುಖಂಡರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular