Tuesday, December 3, 2024
Google search engine
Homeಜಿಲ್ಲೆಮುರಳೀಧರ ಹಾಲಪ್ಪಗೆ ಒಳ್ಳೆಯ ಹುದ್ದೆ ನೀಡಲು ಕುಂಚಿಟಿಗರ ಆಗ್ರಹ

ಮುರಳೀಧರ ಹಾಲಪ್ಪಗೆ ಒಳ್ಳೆಯ ಹುದ್ದೆ ನೀಡಲು ಕುಂಚಿಟಿಗರ ಆಗ್ರಹ

ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮುರುಳೀಧರ ಹಾಲಪ್ಪ ಅವರಿಗೆ ಲೋಕಸಭಾ ಟಿಕೆಟ್‌ ಕೈತಪ್ಪಿದ ಹಿನ್ನಲೆಯಲ್ಲಿ ಚುನಾವಣೆಯ ನಂತರ ಕಾಂಗ್ರೆಸ್ ಹೈಕಮಾಂಡ್ ಒಳ್ಳೆಯ ಸ್ಥಾನಮಾನ ಕೊಡಬೇಕು ಎಂದು ಕುಂಚಿಟಿಗ ಸಂಘದ ಕಾರ್ಯದರ್ಶಿ ಪುಟ್ಟಲಿಂಗಪ್ಪ ಒತ್ತಾಯಿಸಿದ್ದಾರೆ,

ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಕಾಂಗ್ರೆಸ್ ಪಕ್ಷದಲ್ಲಿ ಹಗಲಿರಳು ದುಡಿದು ಪಕ್ಷ ಸಂಘಟನೆಗೆ ಶ್ರಮಿಸಿದ ಮುರಳೀಧರ ಹಾಲಪ್ಪನವರಿಗೆ ತುಮಕೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ತಪ್ಪಿಸಿರುವುದು ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಗುಬ್ಬಿ ತಾಲೂಕಿನಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ಕುಂಚಿಟಿಗ ಮತದಾರರಿದ್ದು ಯಾವುದೇ ಕ್ಷೇತ್ರದಲ್ಲಿ ಅವಕಾಶ ಸಿಗದೇ ವಂಚಿತರಾಗಿದ್ದೇವೆ ನಮ್ಮಿಂದ ಪಕ್ಷಕ್ಕಾಗಿ ದುಡಿಸಿಕೊಂಡು ನಮ್ಮನ್ನು ಮೂಲೆ ಗುಂಪು ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಮುರಳೀಧರ ಹಾಲಪ್ಪ ಒಬ್ಬ ಸಮಾಜ ಸೇವಕ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಮಾಜ ಸೇವೆ ಸಲ್ಲಿಸಿದ್ದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಒಬ್ಬ ಪ್ರಜ್ಞಾವಂತ ಅನುಭವಿ ರಾಜಕಾರಣಿಗೆ ಕೆಲವರ ಕುತಂತ್ರದಿಂದ ಟಿಕೆಟ್‌ ಕೈತಪ್ಪಿ ಹೋಗಿರುವುದು ನಮ್ಮ ಸಮುದಾಯಕ್ಕೆಅವಮಾನವಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ತಿಪಟೂರು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ ಹಾಲಪ್ಪನವರಂತಹ ನಿಷ್ಠಾವಂತ ಕಾಂಗ್ರೆಸ್‌ ಅಭ್ಯರ್ಥಿಗೆ ಟಿಕೆಟ್‌ ಕೈತಪ್ಪಬಾರದಿತ್ತು ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್, ಹೆಂಜಾರಪ್ಪ, ಕೃಷ್ಣಪ್ಪ, ಜಯಣ್ಣ, ಹೇಮಂತ್, ಕುಂಟ ರಾಮನಹಳ್ಳಿ ಶಿವಣ್ಣ, ತಮ್ಮೇಗೌಡ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular