ಹಟ್ಟಿಗಳು, ಆಡಿಗಳು, ಕಾಡುಗಳು, ಪೌಳಿಗಳು, ಬುಕಟ್ಟುಗಳು, ಪಣಕಟ್ಟುಗಳನ್ನು ದಶಕಗಳಿಂದಲೂ ಸಿ.ಎಸ್ ದ್ವಾರಕನಾಥ್ ಸುತ್ತುತ್ತಲೇ ಇದ್ದಾರೆ. ಇವುಗಳ ತೋಳು, ತುದಿ, ತಲೆಮಾರು, ನೆಲೆಗಳ ಜಾಡುಹಿಡಿದು. ಆಡಳಿತಾತ್ಮಕವಾದ ಅವಕಾಶಗಳ ವಂಚಿತರ ಏಳಿಗೆಗಳಿಗಾಗಿ. ಆದಿವಾಸಿಗಳು, ಅಲೆಮಾರಿಗಳು, ಬುಡಕಟ್ಟುಜನರು, ಅರೆ ಅಲೆಮಾರಿಗಳ ಹಾದಿಯಲ್ಲಿ ದಾವಿಸಿ ಅವರ ಕಷ್ಟಗಳಿಗೆ ನೆರವಾದವರು ಮತ್ತು ಕೊವಿಗೊಟ್ಟವರು ಸಿ.ಎಸ್. ದ್ವಾರಕನಾಥ್.
ಆಡಿನ ಗಡು, ಕುರಿರೊಪ್ಪ, ದನಿನ ಓಣಿ, ಕಾಲಾದಿ, ಹೊಲಾದಿಗಳ ಒಳ ಹೊಕ್ಕು ಸಿ.ಎಸ್ ದ್ವಾರಕನಾಥ್ ಶೋಷಿತರ ಮೂಲಭೂತ ಸಮಸ್ಯೆಗಳನ್ನು ಅರಿತವರಾಗಿ ಕಾನೂನು ನೆರವು ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಂದಿನಿಂದಲೂ ಕಾರ್ಯೋನ್ಮುಖವಾಗಿ ಶ್ರಮಪಡುತ್ತಲೇಯಿರುವ ಸಿ.ಎಸ್. ದ್ವಾರಕನಾಥ್ ಅವರು ಅಲೆಮಾರಿ ಆಯೋಗದ ಅಧ್ಯೆಕ್ಷ ಸ್ಥಾನಕ್ಕೆ ಸಮರ್ಥರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯೆಕ್ಷರಾಗಿಯೂ ಸೇವೆ ಸಲ್ಲಿಸಿರುವ ಮಹತ್ವದ ಅನುಬವಿಗಳು. ಕಾನೂನುತಜ್ಞರು ಮತ್ತು ರಾಜ್ಯದ ಹಿರಿಯ ನ್ಯಾಯವಾದಿಗಳು. ಸಂವಿಧಾನ ತಜ್ಞರು.
“ಆಪತ್ಕಾಲದಲ್ಲಿ ಆತುಕೊಂಡವನೇ ಬಾಂದವ” ಎನ್ನುವ ರೀತಿಯಲ್ಲಿ ದಿಕ್ಕಿಲ್ಲದ ಸಮುದಾಯಗಳಿಗೆ ಕಾನೂನಿನ ದಿಕ್ಕು ತೋರುಗಾಣಿಸಿದವರು ಸಿ.ಎಸ್. ದ್ವಾರಕಾನಾಥ್. ಸರ್ಕಾರ, ಸಮುದಾಯಗಳ ಜೊತೆಯಲ್ಲಿ ನಿಂತು ಅನೇಕ ವರ್ಷಗಳಿಂದಲೂ ಕೆಲಸ ಮಾಡುತ್ತಲೇ ಇದ್ದಾರೆ. ಶೋಷಿತ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಹಕ್ಕುಗಳಿಗಾಗಿ ಅವರ ಒಕ್ಕುಳ ಬಳ್ಳಿಯಾಗಿ ಹೋರಾಟಕ್ಕೆ ಅಂಟಿಕೊಂಡವರು.
ಮಾನವ ಮತ್ತು ವನ್ಯಜೀವಿ ಸಂಘರ್ಷಗಳು ಸಂಭವಿಸಿದಾಗ, ಆದಿವಾಸಿಗಳ ಪರವಾಗಿ ನಿಂತು ಅವರ ಹಕ್ಕು ಮತ್ತು ಪರಿಹಾರಗಳಿಗೆ ದಣಿದಿದ್ದಾರೆ ಮತ್ತು ದುಡಿದಿರುವದಕ್ಕೆ ತಕ್ಕ ದಾಖಲೆಗಳಿವೆ. ಮೃತರ ಕುಟುಂಬಗಳಿಗೆ ಪರಿಹಾರ ಮತ್ತು ಉಧ್ಯೋಗ ಒದಗಿಸಲು ಸರ್ಕಾರದ ಜೊತೆಯಲ್ಲಿ ಹತ್ತು ಹಲವು ಸಲ ಸಂವಾದಿಸಿರುತ್ತಾರೆ. ಆದಿವಾಸಿ, ಅಲೆಮಾರಿ, ಬುಡಕಟ್ಟು ನೆಲೆಗಳಿಗೆ ಖದ್ದು ಬೇಟಿ ನೀಡಿ ಆಡಳಿತದ ಗಮನ ಸೆಳೆಯುವ ಅವರ ಬದ್ದತೆಯನ್ನು ಅಲ್ಲಗೆಳೆಯಲಾಗದ್ದು ಮತ್ತು ಬಹಳ ಮಹತ್ವದ್ದು.
ಸಚಿವರು, ಸರ್ಕಾರ, ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳ ಎದುರು ಕಾಗದ ಪತ್ರಗಳನ್ನು ಹಿಡಿದು ಆದಿವಾಸಿಗಳು, ಬುಡಕಟ್ಟು ಜನರು, ಅಲೆಮಾರಿಗಳ ಕಷ್ಟಕಾರ್ಪಣ್ಯಗಳನ್ನು ಆಡಳಿತಕ್ಕೆ ಮನವರಿಕೆ ಮಾಡಿಕೊಡಲು ಅವರು ಇಂದಿಗೂ ಶ್ರಮಿಸುತ್ತಿರುವರು ದಣಿವರಿಯದೆ. ಇಡೀ ರಾಜ್ಯವನ್ನು ವಿಶ್ರಮಿಸದೆ ಸುತ್ತುತ್ತಿರುವರು ಈ ಹೊತ್ತಿಗೂ.
ನೊಂದ ಆದಿವಾಸಿ ಕುಟುಂಬಗಳಿಗೆ ಉಂಟಾದ ಅನ್ಯಾಯಗಳ ವಿರುದ್ದ ನಿಂತು ಪ್ರತಿಭಟಿಸಿರುವುದೂ ಉಂಟು. ಕಾಡುಗೊಲ್ಲರು ಹಾಗು ಇತರೆ ಹಿಂದುಳಿದ ಅಲೆಮಾರಿ ಬುಡಕಟ್ಟುಗಳಿಗೆ ಮೀಸಲಾತಿ ಅವಕಾಶ ದೊರಕಿಸಿಕೊಡಲು ದ್ವಾರಕಾನಾಥ್ ದಾಖಲೆ ಹೊಂದಿಸಿ ಹೋರಾಡಿದ್ದು ಚರಿತ್ರಾರ್ಹವಾದದ್ದು. ಸರ್ಕಾರದ ಗಮನ ಸೆಳೆದು ಅಲೆಮಾರಿ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಸರ್ಕಾರದ ಜೊತೆಯಲ್ಲಿ ಇಂದಿಗೂ ಕೆಲಸ ಮಾಡುವುವರಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಾರ್ಟಿಯ “ಸಾಮಾಜಿಕ ನ್ಯಾಯ ಸಮಿತಿ”ಯ ರಾಜ್ಯಾದ್ಯೆಕ್ಷರಾಗಿಯೂ ಜಿಲ್ಲೆಗಳು, ತಾಲ್ಲೂಕುಗಳನ್ನು ತಿರುಗಿ ಅಲೆಮಾರಿಗಳ ಸಂಘಟನೆ ಮಾಡಿದ್ದಾರೆ. ನೊಂದವರ ಪರವಾದ ಹಕ್ಕುಗಳಿಗಾಗಿ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯೆಕ್ಷರಾಗಿದ್ದ ಅವದಿಯಲ್ಲಿ ಅಲೆಮಾರಿ, ಅರೆ ಅಲೆಮಾರಿಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಸರ್ಕಾರಗಳಿಗೆ ಹಲವಾರು ವರದಿಗಳನ್ನು ನೀಡಿರುವರು. ಸರ್ಕಾರದ ಬೆನ್ನಿಗೆ ಬಿದ್ದು ಈ ಹೊತ್ತಿಗೂ ಅವಿರತವಾಗಿ ಕೆಲಸಮಾಡುತ್ತಿರುವ ಸಿ.ಎಸ್. ದ್ವಾರಕಾನಾಥ್ 2010 ರಲ್ಲೇ “ಅಲೆಮಾರಿ ಅಭಿವೃದ್ದಿ ಆಯೋಗ” ರಚನೆ ಮಾಡಲು ಸರ್ಕಾರಕ್ಕೆ ವರದಿ ನೀಡಿದವರಾಗಿರುತ್ತಾರೆ. “ಅಲೆಮಾರಿ ಅಭಿವೃದ್ದಿ ಕೋಶ”ವಾಗಲು ದುಡಿದವರು ಎಂಬುದನ್ನು ಸಮುದಾಯಗಳು ಎಂದಿಗೂ ಮರೆಯಲಾರವು. ಅಲೆಮಾರಿ ಅಭಿವೃದ್ದಿ ಕೋಶ ರಚನೆ ಆದದ್ದರಿಂದ ರಾಜ್ಯಾದ್ಯಂತ ಇರುವ ವಿವಿಧ ಸಮುದಾಯಗಳ ಅಲೆಮಾರಿ ಜಾಂಗಗಳಿಗೆ ಸೂರು, ನೀರು, ವಸತಿ, ನಿವೇಶನ, ಸಾಲ ಸೌಲಭ್ಯಗಳು ದೊರೆತವು ಎಂದು ಸಿ ಎಸ್ ದ್ವರಕಾನಾಥ್ ಅವರನ್ನು ಸಾವಿರಾರು ಕುಟುಂಬಗಳು ರಾಜ್ಯಾದ್ಯಂತ ನೆನೆಯುತ್ತಿವೆ. ದಿಕ್ಕಿಲ್ಲದ ಸಮುದಾಯಗಳ ಕುರಿತು ಸರ್ಕಾರಕ್ಕೆ ವರದಿಕೊಟ್ಟು ಅವರು ಸುಮ್ಮನೆ ಕೂತವರಲ್ಲ. ಅದ್ಯನಗಳನ್ನೂ ಮಾಡಿ, ಅನೇಕ ಲೇಖನಗಳನ್ನು ಬರೆಯುವ ಮೂಲಕ ಸರ್ಕಾರ, ಸಾರ್ವಜನಿಕರು, ಗಮನ ಸೆಳೆದು ಅನನ್ಯವಾದ ಕೆಲಸಗಳನ್ನು ಆದಿವಾಸಿಗಳು, ಬುಡಕಟ್ಟು ಮತ್ತು ಅಲೆಮಾರಿ, ಅರೆ ಅಲೆಮಾರಿಗಳ ಅಸ್ಮಿತೆಗಾಗಿ ಕೆಲಸ ಮಾಡುತ್ತಲೇಯಿದ್ದಾರೆ.
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಮೂಲಕ ಹಿಂದುಳಿದ, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಲೆಮಾರಿ, ಅರೆ ಅಲೆಮಾರಿಗಳನ್ನು ಇಡೀ ರಾಜ್ಯದಲ್ಲಿ ಗುರ್ತಿಸಿ ಕೆಲಸ ಮಾಡುತಿದ್ದಾರೆ “ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ”ದ ಮೂಲಕ. ರಾಜ್ಯದಲ್ಲಿ ಚದುರಿಹೋದ ಎಲ್ಲಾ ಶೋಷಿತ ಸಮುದಾಯಗಳನ್ನು ಸಂಘಟನೆಯ ಸೂರಿನಡಿ ತಂದು ಸರ್ಕಾರದ ಗಮನ ಸೆಳೆದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ “ಅಲೆಮಾರಿ ಆಯೋಗ” ರಚಿಸಲು ಘೋಷಿಸಿರುವುದು ಸ್ವಾಗತಾರ್ಹ. ಮತ್ತು ಅಭಿನಂದನಾರ್ಹ. ಮಾನ್ಯ ಮುಖ್ಯಮಂತ್ರಿಗಳ ಬದ್ದತೆ, ಕಾಳಜಿ, ಸಾಮಾಜಿಕ ನ್ಯಾಯಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಕೈಗೊಂಡ ನೀತಿ ನಿರೂಪಣಾ ಕಾರ್ಯಾಲೋಚನೆಗಳು ಪ್ರಭುದ್ದ ಕರ್ನಾಟಕಕ್ಕೆ ಮಾದರಿ ನಡೆಯಾಗಿವೆ.
ಶೋಷಿತ ಸಮುದಾಯಗಳಿಗೆ ಸಾಮಾಜಿಕ ಮತ್ತು ಕಾನೂನು ಬದ್ದವಾಗಿ ಆಶ್ರಯ, ಅವಕಾಶ, ಉಧ್ಯೋಗ, ವಸತಿ, ಭೂಮಿ, ಸುಸ್ಥಿರ ಬದುಕುಕಟ್ಟಿಕೊಳ್ಳಲು ನೆರವಾಗುತ್ತಿರುವ ಸಿ. ಎಸ್. ದ್ವಾರಕನಾಥ್ ಅವರನ್ನು ಅಲೆಮಾರಿ ಆಯೋಗದ ಅಧ್ಯೆಕ್ಷರನ್ನಾಗಿ ನಿಯೋಜಿಸುವುದು ಅಷ್ಟೇ ಸೂಕ್ತ ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತಿವೆ. ಸಮುದಾಯಗಳ ಸಂಪರ್ಕಕ್ಕೇ ಬರದವರಿಂದ ಅಲೆಮಾರಿಗಳ ಕಷ್ಟಗಳು ಬಗೆಹರಿಯಲಾರವು. ಅಧ್ಯಕ್ಷರಾಗಲು ಪ್ರಯತ್ನಸಿದರಷ್ಟೇ ಸಾಲದು. ಪ್ರಾಸಂಗಿಕವಾಗಿ ಅಧ್ಯೆಕ್ಷರಾಗಿ ಬಂದವರಿಂದ ಏನನ್ನೂ ನಿರೀಕ್ಷಿಸಲಾಗದು. ಅವಕಾಶವಾದಿಗಳ ಕೈ ಪಾಡಿಗೆ ಅಲೆಮಾರಿ ಆಯೋಗದ ಅದ್ಯೆಕ್ಷ ಸ್ಥಾನ ಒದಗಿ ಹೋದರೆ ಉದ್ದೇಶಗಳು ಹೀಡೇರಲಾರವು. ಆಯೋಗದ ಉದ್ದೇಶವೇ ಬುಡಮೇಲಾಗುವ ಅಪಾಯಗಳಿರುತ್ತವೆ. ಅವಕಾಶ ವಂಚಿತ ಸಮುದಾಯಗಳು ಮತ್ತೂ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತವೆ. ಅಯೋಗದ ಒತ್ತಾಸೆಗಳನ್ನೇ ಅಪಾಯಗಳ ಕೂಪಕ್ಕೆ ತಳ್ಳಿದಂತಾಗುತ್ತದೆಯಲ್ಲವೇ? ಅವಕಾಶವಾದಿಗಳ ಕೈಸೇರಿದರೆ ಅಲೆಮಾರಿ ಆಯೋಗದ ಅಧ್ಯೆಕ್ಷಸ್ಥಾನ. ರಾಜ್ಯಾದ್ಯಂತ, ದಶಕಗಳಿಂದಲೂ ಸುತ್ತಿ, ನೊಂದವರ ನೆಲೆಗಳನ್ನು ಎಡತಾಕಿ, ಬೇಟಿನೀಡಿ, ಸನಿವಾಸ ಮಾಡಿ, ಪ್ರಾಯೋಗಿಕವಾಗಿ ದುಡಿದವರ ಕೊಡುಗೆ ಬಹಳವಾಗಿರುತ್ತದೆ ಎಂಬುದನ್ನು ಮನಗಂಡು ಸರ್ಕಾರ ಸಿ.ಎಸ್. ದ್ವಾರಕನಾಥ್ ಅವರನ್ನೇ ಅಧ್ಯೆಕ್ಷರನ್ನಾಗಿ ನಿಯೋಜಿಸುವುದರಿಂದ ಆದಿವಾಸಿ, ಅಲೆಮಾರಿ, ಬುಡಕಟ್ಟು, ಅರೆ ಅಲೆಮಾರಿ ಸಮುದಾಯಗಳಿಗೆ ಅನುಕೂಲವಾಗುತ್ತದೆ.
ಲೇಖಕರು – ಉಜ್ಜಜ್ಜಿ ರಾಜಣ್ಣ
24/ 02/ 2024