Thursday, November 21, 2024
Google search engine
Homeಮುಖಪುಟತುಮಕೂರು - ಫೆ.25ರಂದು ವಾಯುಗುಣ ವೈಪರಿತ್ಯ ಮಾಲಿಕೆಯ 4ನೇ ಕಾರ್ಯಗಾರ

ತುಮಕೂರು – ಫೆ.25ರಂದು ವಾಯುಗುಣ ವೈಪರಿತ್ಯ ಮಾಲಿಕೆಯ 4ನೇ ಕಾರ್ಯಗಾರ

ಗಾಂಧಿ ಸಹಜ ಬೇಸಾಯ ಶಾಲೆ, ಭಾರತೀಯ ವೈದ್ಯಕೀಯ ಸಂಘ ಮತ್ತು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ತುಮಕೂರು ಇವರ ಸಂಯುಕ್ತ ಆಶಯದಲ್ಲಿ ಫೆಬ್ರವರಿ 25ರಂದು ತುಮಕೂರಿನ ಐಎಂಎ ಹಾಲ್ ನಲ್ಲಿ ವಾಯುಗುಣ ವೈಪರೀತ್ಯ ಮಾಲಿಕೆಯ 4ನೇ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ಡಾ.ವಾಸು, ಸಿ.ಯತಿರಾಜು ಕ್ರಾಪ್-28 ಘೋಷಣೆಯ ಮೇಲೆ ವಿಷಯ ಮಂಡಿಸಲಿದ್ದಾರೆ.

11:30ಕ್ಕೆ ಪಣದಾರ ಸಮುದಾಯಗಳೊಂದಿಗೆ ತೆರೆದ ಸಮಾಲೋಚನಾ ಚರ್ಚೆ, ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಘೋಷಣೆಯ ಮೇಲೆ ತುಮಕೂರು ಜಿಲ್ಲಾ ಕಾರ್ಯ ಯೋಜನೆ, ಡಾ ಹೆಚ್ ಮಂಜುನಾಥ್ ವಿಷಯ ಕುರಿತು ಚರ್ಚೆ ನಡೆಸಲಿದ್ದಾರೆ.

21ನೇ ಶತಮಾನದಲ್ಲಿ ವಾಯುಗುಣ ವೈಪರಿತ್ಯ , ಜಾಗತಿಕ ಆರೋಗ್ಯಕ್ಕೆ ಮತ್ತು ಆರೋಗ್ಯ ಸುಭದ್ರತೆಗೆ ದೊಡ್ಡ ಸವಾಲಾಗಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇತ್ತೀಚಿಗಷ್ಟೇ ಸಮಾಪ್ತಿಗೊಂಡ Cop -28 (conference of parties) ರಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಸಾವಿರದ ಒಂಬೈನೂರಕ್ಕೂ (1900) ಅಧಿಕ ಆರೋಗ್ಯ ವೃತ್ತಿಪರರು ಚರ್ಚಿಸಿ ವಾಯುಗುಣ ಮತ್ತು ಆರೋಗ್ಯ Cop- 28 ರಲ್ಲಿ ಗೆ ಘೊಶಣೆಯೊಂದನ್ನು ಹೊರಡಿಸಿದೆ. 143ಕ್ಕೂ ಅಧಿಕ ದೇಶಗಳು ಈ ಘೋಷಣೆಗೆ ತಮ್ಮ ಬೆಂಬಲ ಘೋಷಿಸಿವೆ. ಸಿ ಓ ಪಿ ಯಲ್ಲಿ ಮೊದಲ ಬಾರಿಗೆ 50ಕ್ಕೂ ಹೆಚ್ಚು ಆರೋಗ್ಯ ಮಂತ್ರಿಗಳು ಭಾಗವಹಿಸಿದ ಆರೋಗ್ಯ ಮಂತ್ರಿಗಳ ಸಭೆ ಇದಾಗಿದೆ. ವಾಯುಗುಣ ವಿಷಯಗಳನ್ನು ತೀರ್ಮಾನಿಸುವಾಗ ಆರೋಗ್ಯದ ವಿಷಯಗಳನ್ನು ಪ್ರಧಾನವಾಗಿ ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ

ತಾಪಮಾನ ಏರಿಕೆ ಉಂಟುಮಾಡುವ ಶಾಖದ ಒತ್ತಡ ಬಿಸಿ ಗಾಳಿ ಅಧಿಕ ಮಳೆ ಯಿಂದ ಉಂಟಾಗುವ ಪ್ರವಾಹಗಳು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳು ಉಲ್ಲ್ಬಣಿಸಿ ಜೀವ ಹಾನಿ ಮಾಡುವುದು ಅಲ್ಲದೆ ಮಲೇರಿಯಾ ಕಾಲರ ವಾಂತಿಬೇದಿ ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳನ್ನು ವ್ಯಾಪಕವಾಗಿ ಹರಡಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಲಿವೆ, ಇವುಗಳ ಬಗ್ಗೆ ಸಿಒಪಿ 28 ಆರೋಗ್ಯ ಘೋಷಣೆ , ಮೊದಲ ಬಾರಿಗೆ ಜಾಗತಿಕ ಚರ್ಚೆಯನ್ನಾಗಿಸಿದೆ. ವಾಯುಗುಣ ವೈಪರಿತ್ಯದಿಂದ ಅಪಾರವಾಗಿ ಬಾಧಿಸಲ್ಪಡುವವರು ರೈತರು ಕಾರ್ಮಿಕರು ಕೊಳಗೇರಿಗಳಲ್ಲಿ ವಾಸಿಸುವ ಬಡವರು, ಮತ್ತು ನಿರ್ವಸಿತ ಮೂಲ ನಿವಾಸಿಗಳು, ಅಂಚಿಗೆ ದೂಡಲ್ಪಟ್ಟ ಸಮುದಾಯಗಳು ಇತ್ಯಾದಿ,

ಆಸಕ್ತರು ಈ ಸಭೆಗೆ ಹಾಜರಾಗಿ ಸಲಹೆಗಳನ್ನ ನೀಡಬೇಕೆಂದು ಮನವಿ ಮಾಡಲಾಗಿದೆ
ಡಾ, ರಂಗಸ್ವಾಮಿ ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ 7760629531
ಸಿ ಯತಿರಾಜು ಸಹಜ ಬೇಸಾಯ ಶಾಲೆ 9481677607
ಎನ್ ಎಸ್ ಪಂಡಿತ್ ಜವಹರ್, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ 9880397074 ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular