ಸಮಾಜದಲ್ಲಿ ಯುವಜನರನ್ನು ಬಳಸಿಕೊಂಡು ಯುವಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ದುಷ್ಟಶಕ್ತಿಗಳು ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಮಾಡುತ್ತಿವೆ. ಯುವಜನರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಮರೆಮಾಚಿ, ಯುವಜನರದಲ್ಲದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ದಿಕ್ಕು ತಪ್ಪಿಸುವ ಕೆಲಸಗಳು ನಡೆಯುತ್ತಿವೆ ಎಂದು ಡಿ.ವೈ.ಎಫ್.ಐನ ರಾಜ್ಯಅಧ್ಯಕ್ಷ ವಿ.ಅಂಬರೀಶ್ ತಿಳಿಸಿದರು.
ತುಮಕೂರಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ನಡೆದ ಡಿವೈಎಫ್.ಐ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸಬೇಕೆಂದು ಹೇಳಿದರು. ರಾಜ್ಯದಲ್ಲಿ 2.5 ಲಕ್ಷ ಉದ್ಯೋಗ ಖಾಲಿ ಇದ್ದು ಅವುಗಳನ್ನು ತುಂಬಿಕೊಳ್ಳುವ ಕೆಲಸವನ್ನು ಮಾಡುತ್ತಿಲ್ಲ. ಶಿಕ್ಷಣ ಮುಗಿಸಿ ಉದ್ಯೊಗವಿಲ್ಲದೆ ನಿರುದ್ಯೋಗಿಗಳಾಗಿರುವ ಯುವಜನರನ್ನು ಅವರದಲ್ಲದ ಸಮಸ್ಯೆಗಳ ಬಗ್ಗೆ ಯುವಜನರನ್ನು ಸೆಳೆಯುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಯುವಜನರ ದಿಕ್ಕುತಪ್ಪಿಸುತ್ತಿದ್ದು ಯುವಜನರು ಜಾಗೃತರಾಗಬೇಕು ಎಂದರು.
ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ ಮಾತನಾಡಿ, ಗ್ರಾಮಿಣ ಕೃಪಾಂಕ ಶಿಕ್ಷಕರನ್ನು ಕೆಲಸದಿಂದ ತೆಗೆದಾಗ ಹೋರಾಟ ನಡೆಸಿ ಕೆಲಸದಿಂದ ವಜಾಗೊಂಡಿದ್ದ ಪೊಲೀಸರು, ಟೀಚರ್‌ಗಳು ಸೇರಿದಂತೆ ಸಾವಿರಾರು ಜನರ ಜೀವನಕ್ಕೆ ಡಿ.ವೈ.ಎಫ್‌ಐ ಸಂಘಟನೆ ನಡೆಸಿದ ಹೋರಾಟ ಮತ್ತೆ ಕೆಲಸಕ್ಕೆ ತೆರಳಲು ಸಹಕಾರಿಯಾಗಿದೆ ಎಂದರು.
ಕಳೆದ 25 ವರ್ಷಗಳ ಹಿಂದೆ ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ನೀಡಿ ಎಂದು ನಡೆಸುತ್ತಿದ್ದ ಹೋರಾಟಕ್ಕೆ ಇಂದು ರಾಜ್ಯ ಸರ್ಕಾರ ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯನ್ನು ಘೋಷಿಸಿದೆ ಎಂದು ಹೇಳಿದರು.
ಕೊರಟಗೆರೆ ತಾಲ್ಲೂಕಿನ ತೋಗರಿಘಟ್ಟಕ್ಕೆ ಬೆಂಗಳೂರಿನ ಕಸವಿಲೇವಾರಿ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದ್ದನ್ನು ಖಂಡಿಸಿ ಒಂದು ತಿಂಗಳು 10 ದಿನ ಸಹಿ ಸಂಗ್ರಹ ಚಳುವಳಿಯನ್ನು ಮಾಡಿ ಪಾದಯಾತ್ರೆ ನಡೆಸಿ ರೈತರ ಸುಮಾರು 650 ಎಕರೆ ಜಮೀನನ್ನು ಉಳಿಸಿದ್ದು ಡಿ.ವೈ.ಎಫ್.ಐ ಸಂಘಟನೆ, ತುಮಕೂರು ಜಿಲ್ಲೆಯ ಅಸ್ಮಿತೆಯಾದ ಪ್ರಜಾಸತ್ತಾತ್ಮಕವಾಗಿ ರೂಪುಗೊಂಡಿದ್ದ ತುಮಕೂರು ವಿಶ್ವವಿದ್ಯಾನಿಲಯದ ಲಾಂಛನ ಉಳಿವಿಗಾಗಿ ಹೋರಾಟ ನಡೆಸಿ ಮೂಲ ಲಾಂಛನ ಸ್ಥಾಪನೆಗೆ ಕಾರಣವಾಗಿದೆ ಎಂದರು.
ಆಂಗ್ಲ ಉಪನ್ಯಾಸಕ ಡಾ.ಪವನ್‌ಗಂಗಾಧರ್ ಮಾತನಾಡಿ ಯುವಜನರು ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಸಮಾಜದ ನಿಜವಾದ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಡಿ.ವೈ.ಎಫ್.ಐ ಸಂಘಟನೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಇ.ಶಿವಣ್ಣ, ಎಂ.ಆರ್‌ನಾಗರಾಜು ಮಾತನಾಡಿದರು,