Thursday, November 21, 2024
Google search engine
Homeಚಳುವಳಿಅತಿಥಿ ಉಪನ್ಯಾಸಕರ ಧರಣಿಗೆ ಕಾಂಗ್ರೆಸ್ ಮುಖಂಡ ರವಿಕುಮಾರ್, ದಲಿತ ಮುಖಂಡ ಕೊಟ್ಟಶಂಕರ್ ಬೆಂಬಲ

ಅತಿಥಿ ಉಪನ್ಯಾಸಕರ ಧರಣಿಗೆ ಕಾಂಗ್ರೆಸ್ ಮುಖಂಡ ರವಿಕುಮಾರ್, ದಲಿತ ಮುಖಂಡ ಕೊಟ್ಟಶಂಕರ್ ಬೆಂಬಲ

ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಮುಂದುವರೆದಿದ್ದು ಇಂದು ಕಾಂಗ್ರೇಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ದಲಿತ ಮುಖಂಡ ಕೊಟ್ಟಶಂಕರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣ ಆಕಾಂಕ್ಷಿ ಲೋಕೇಶ್ ತಾಳಿಕೊಟ್ಟಿ ಅತಿಥಿ ಉಪನ್ಯಾಸಕರ ಧರಣಿಗೆ ಬೆಂಬಲ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೇಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿರುವ ಬರವಸೆಗಳನ್ನು ಹಂತ-ಹಂತವಾಗಿ ಬಗೆಹರಿಸಲ್ಲಿದೆ. ತಂತ್ರಿಕ, ಕಾನೂನು, ಹಣಕಾಸು ಇಲಾಖೆಯ ಸಲಹೆಗಳನ್ನು ಪಡೆದುಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಅತಿಥಿ ಉಪನ್ಯಾಸಕರು ಧೃತಿಗೆಡದೆ ಹೊರಾಟ ಮುಂದುವರೆಸಿ. ಜಿಲ್ಲಾಧಿಕಾರಿಗಳ ಕಣ್ಣಾಳತೆಯ ದೂರದಲ್ಲಿ 9 ದಿನಾಗಳಿಂದ ಪ್ರತಭಟನೆ ಮಾಡುತ್ತಿದ್ದರೂ ಜಿಲ್ಲಾಧಿಕಾರಿಗಳು ಸೌಜನ್ಯಕ್ಕು ಬಂದು ಅತಿಥಿ ಉಪನ್ಯಾಸಕರ ಮನವಿಯನ್ನು ಸ್ವಿಕರಿಸದೆ ಇರುವುದು ದುರದೃಷ್ಟಕರ. ಶ್ರೀಘವಾಗಿ ಬಂದು ಮನವಿಯನ್ನು ಸ್ವಿಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಕೊಟ್ಟಶಂಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪರ ಇರುವ ಮುಖ್ಯಮಂತ್ರಿ. ನುಡಿದಂತೆ ನಡೆಯುತ್ತಾರೆ. ಅವರು ನೀಡಿರುವ ಭರವಸೆಯನ್ನು ಈಡೇರಿಸಲ್ಲಿದ್ದಾರೆ, ಅತಿಥಿ ಉಪನ್ಯಾಸಕರ ಹೋರಾಟ ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಕರ ಕ್ಷೇತ್ರದ ಚುನಾವಣಾ ಆಕಾಂಕ್ಷಿ ಲೋಕೇಶ್ ತಾಳಿಕೊಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಇಲ್ಲದವರು ಅಧಿಕಾರದಲ್ಲಿ ಇದ್ದರೆ ಉಪನ್ಯಾಸಕರು ಬೀದಿಗೆ ಬಿಳುತ್ತಾರೆ. ಅದೇ ರೀತಿ ಇಂದು ರಾಜ್ಯದಲ್ಲಿ ಆಗುತ್ತಿದೆ, ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೆರುವವರೆಗೂ ನಿಮ್ಮ ಹೊರಾಟದಿಂದ ಹಿಂದೆ ಸರಿಯಬೇಡಿ, ನಿಮ್ಮ ಹೋರಾಟದ ಜತೆ ಸದಾ ನಾವು ಇರುತ್ತೆವೆ ಎಂದು ಭರವಸೆ ನೀಡಿದರು.

ಉನ್ನತ ಶಿಕ್ಷಣ ಸಚಿವರೊಂದಿಗೆ ಅತಿಥಿ ಉಪನ್ಯಾಸಕರು ನಡೆಸಿದ ಸಭೆ ವಿಫಲವಾಗಿದೆ, ಅತಿಥಿ ಉಪನ್ಯಾಸಕರ ಧರಣಿ ಮುಂದುವರೆದಿದೆ, ಅತಿಥಿ ಉಪನ್ಯಾಸಕರು ಯಾವುದೇ ಊಹೆಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಜಿಲ್ಲಾಧ್ಯಕ್ಷ ಡಾ.ಧರ್ಮವಿರ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಮನು, ಶಿವಲಿಂಗಯ್ಯ, ಕುಮಾರ್, ಶಂಕರಪ್ಪ ಎಚ್.ಎನ್. ಹಾರೋಗೆರೆ, ಶಿವಣ್ಣ ತಿಮ್ಲಾಪುರ, ನಾಗೇಂದ್ರಕುಮಾರ್, ಉಮಾದೇವಿ, ಡಾ.ಯಲ್ಲಣ್ಣ, ಮಹದೇವ್, ಶಶಿಧರ್, ಹೇಮಾವತಿ, ಸುನಿಲ್, ಡಾ.ಶಿವಯ್ಯ, ಮಹೇಶ್, ಹನುಮಂತರಾಜು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular