ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಕರ್ನಾಟಕದಿಂದ ಆಯ್ಕೆಯಾದ 25 ಜನ ಸಂದಸದರು ಜನರ ನಂಬಿಕೆ ಕಳೆದುಕೊಂಡಿದ್ದಾರೆ ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಇದೆ. ರಾಜ್ಯ ಸರ್ಕಾರ ಕೂಡ ಆನೇಕ ಬರ ಪರಿಹಾರ ಕೆಲಸಗಳನ್ನ ಮಾಡುತ್ತಿದೆ. ಕೇಂದ್ರಕ್ಕೆ ಮುಖ್ಯಮಂತ್ರಿ ಸೇರಿದಂತೆ ಅನೇಕೆ ಸಚಿವರು ಬರ ಅಧ್ಯಯನ ತಂಡ ಬೇಕು ಎಂದು ಮನವಿ ನಂತರ ಕೇಂದ್ರ ತಂಡ ಭೇಟಿ ನೀಡಿದೆ. ಸರ್ಕಾರದ ಬೇಡಿಕೆಗೆ ತಕ್ಕಂತೆ ಯಾವ ಅನುದಾನವು ನೀಡಿಲ್ಲ ಎಂದು ಆರೋಪಿಸಿದರು.
28 ಜನ ಸಂಸದರು 12 ಜನ ರಾಜ್ಯಸಭ ಸದಸ್ಯರಿಗೆ ಪ್ರದೇಶ ಆಭಿವೃದಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ವಾರ್ಷಿಕ 5 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ನಮ್ಮ ರಾಜ್ಯದ ಸಂಸದರಿಗೆ ಪ್ರಸಕ್ತ ಸಾಲಿನಲ್ಲಿ 145 ಕೋಟಿ ಬಿಡುಗಡೆ ಆಗಬೇಕಿತ್ತು. 60 ಕೋಟಿ ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಆಗಬೇಕಿತ್ತು. ಆದರೆ ಕೇಂದ್ರ ಸರ್ಕಾರದಿಂದ 1 ರೂಪಾಯಿ ಹಣ ಕೂಡ ಬಿಡುಗಡೆ ಆಗಿಲ್ಲ ಎಂದು ದೂರಿದರು.
ಈ ಬಗ್ಗೆ ಯಾವ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತುತ್ತಿಲ್ಲ. ಕೇಂದ್ರ ಸರ್ಕಾರದ ಅಂಕಿ ಅಂಶದ ಪ್ರಕಾರ 56 ಕಂತುಗಳಲ್ಲಿ 145 ಕೋಟಿ ಬಿಡುಗಡೆ ಆಗಬೇಕಿತ್ತು. ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು.
12 ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಆಗಬೇಕಿದ್ದ ಹಣ 60 ಕೋಟಿ ಕೂಡ ಬಿಡುಗಡೆ ಮಾಡಿಲ್ಲ. ಪ್ರತಾಪ್ ಸಿಂಹ ಕಮಿಷನ್ ಪಡೆಯಲು ಆರ್ಜಿ ಹಾಕಿ ಬಿಡುಗಡೆಗೆ ತಡೆ ಕೋರಿರಬಹುದು. ಈ ಬಗ್ಗೆ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲಾ ಸಂಸದರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
2.12.2023 ರಂದು ಯಾವ ಸಂಸದರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ದಾಖಲೆ ನೀಡಿದ್ದು, ಇದರ ಪೈಕಿ ಕರ್ನಾಟಕದ ಸಂಸದರಿಗೆ ಬಿಡುಗಡೆ ಆಗಬೇಕಿದ್ದ ಹಣ 488.5 ಕೋಟಿ. ಇಲ್ಲಿಯವರೆ ಕೇಂದ್ರದಿಂದ ಬಿಡುಗಡೆಯಾಗಿರುವ ಹಣ 225 ಕೋಟಿ ಮಾತ್ರ. ಇನ್ನು 263.5 ಕೋಟಿ ಅನುದಾನ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
ವಿಪಕ್ಷ ನಾಯಕ ಆಶೋಕ ಅವರು ಸಿದ್ದರಾಮಯ್ಯ ಸರ್ಕಾರ ಶಾಸಕರಿಗೆ ಅನುದಾನ ನೀಡಿಲ್ಲ ಅಂತಾರೆ. ಕೇಂದ್ರದಿಂದ ಬಾರದಿರುವ ಅನುದಾನ ಕೇಳುವ ಪೌರು಼ಷ ಅವರಿಗೆ ಇಲ್ಲವೇ? ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡೋ ನೀವು ಇದಕ್ಕೆ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.