Friday, October 18, 2024
Google search engine
Homeಮುಖಪುಟಸೋಮಣ್ಣಗೆ ತರಾಟೆ ತೆಗೆದುಕೊಂಡ ಮಾಜಿ ಸಚಿವ ರೇಣುಕಾಚಾರ್ಯ

ಸೋಮಣ್ಣಗೆ ತರಾಟೆ ತೆಗೆದುಕೊಂಡ ಮಾಜಿ ಸಚಿವ ರೇಣುಕಾಚಾರ್ಯ

ಬಿಜೆಪಿಯಲ್ಲಿ ನನ್ನನ್ನೂ ಸೇರಿದಂತೆ ಪಕ್ಷ ಕಟ್ಟಿದ ಎಲ್ಲಾ ಹಿರಿಯ ಶಾಸಕರಿಗೂ ಅನ್ಯಾಯವಾಗಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರೆ ಮಂತ್ರಿಯಾಗಿರುತ್ತಿದ್ದೆ ಎಂದು ಕೆಲವರ ಬಳಿ ಸೋಮಣ್ಣ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಇವರಿಗೆ ಏನು ಸ್ಥಾನಮಾನ ಕೊಟ್ಟಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮಣ್ಣ ಹಿಂದೆ ಬಂದಿಖಾನೆ ಸಚಿವರಾಗಿದ್ದರು. ಯಡಿಯೂರಪ್ಪ ಎಲ್ಲಾ ಸ್ಥಾನಮಾನ ನೀಡಿ ಗೌರವ ನೀಡಿದ್ದಾರೆ. ಎರಡು ಕಡೆ ಸ್ಪರ್ಧಿಸಿ ಎಂದು ಯಡಿಯೂರಪ್ಪ ಹೇಳಿಲ್ಲ. ಪಕ್ಷದ ಹೈಕಮಾಂಡ್ ನಾಯಕರು ಹೇಳಿದ್ದು ಎಂದು ಸೋಮಣ್ಣನವರಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ವಿರುದ್ದ ನಿಂತು ಗೆದ್ದರೆ ಮುಖ್ಯಮಂತ್ರಿ ಆಗ್ತಿನಿ ಎಂಬ ಭ್ರಮೆಯಲ್ಲಿ ಸ್ಪರ್ಧೆಗೆ ಒಪ್ಪಿಕೊಂಡಿದ್ದರು. ಅವತ್ತೇ ಈ ಮಾತು ಹೇಳಬೇಕಾಗಿತ್ತು. ನಾವು ಸೋತ್ತಿದ್ದೇವೆ. ಸೋತ ತಕ್ಷಣ ಯಡಿಯೂರಪ್ಪ ವಿರುದ್ದ ಮಾತನಾಡುವುದು ಸರಿಯಲ್ಲ. ನೀವು ಸೋತು ಎಲ್ಲೋ ಇದ್ದಾಗ, ನಿಮ್ಮ ಕಣ್ಣೀರು ಒರೆಸಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ, ಕೇಳಿದ ಖಾತೆ ಕೊಟ್ಟಿದ್ದು ಅಪರಾಧವೇ? ಯಾವ ನೈತಿಕತೆ ಇಟ್ಟುಕೊಂಡು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಿರೀ ಎಂದು ಕಿಡಿಕಾರಿದ್ದಾರೆ.

ಸೋಮಣ್ಣ ದೆಹಲಿಗೆ ಹೋಗಿ ಚರ್ಚೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಅವರ ಬಗ್ಗೆ ಗೌರವವಿದೆ. ಆದರೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಯಡಿಯೂರಪ್ಪ ಏನು ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಬಂದವರೇ? ಎಂದು ಪ್ರಶ್ನಿಸಿದರು. ಮಠದಲ್ಲಿ ಕಟ್ಟಡ ಕಟ್ಟಿದರೆ ಅದರ ಉದ್ಘಾಟನೆ ಮಾಡಲಿ, ಅದನ್ನು ಬಿಟ್ಟು ರಾಜಕೀಯ ಮಾಡುವುದನ್ನು ಬಿಡಲಿ ಎಂದು ಸೋಮಣ್ಣ ಅವರಿಗೆ ಸಲಹೆ ನೀಡಿದರು.

ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಆಯ್ಕೆಯನ್ನು ಕೆಲವರು ಅಡ್ಜಸ್ಮೆಂಟ್ ರಾಜಕಾರಣ ಎಂದು ಹೇಳುತಿದ್ದಾರೆ. ಇದು ಸರಿಯಲ್ಲ. ವಿಜಯೇಂದ್ರನ ಆಯ್ಕೆ ಮಾಡಿದ್ದು ಪಕ್ಷದ ಹೈಕಮಾಂಡ್, ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದ್ದು ಶಾಸಕಾಂಗ ಸಭೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಮತ್ತು ಶಾಸಕಾಂಗ ನಾಯಕರನ್ನು ಸಮರ್ಥಿಸಿಕೊಂಡರು.

ನಾನು ಸಹ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಹಲವರನ್ನು ಭೇಟಿಯಾಗಿದ್ದು ನಿಜ. ಯಾರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ನಮ್ಮ ಕ್ಷೇತ್ರದ ಅನುದಾನ ಕಡಿತ ಮಾಡಿದ್ದಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬೇಗ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದೇನೇ ಹೊರತು ಬಿಜೆಪಿ ಬಿಡುವ ಮಾತುಗಳನ್ನು ಆಡಿರಲಿಲ್ಲ. ಮೋದಿ, ಅಮಿತ್ ಷಾ ವಿರುದ್ದ ಒಂದು ಮಾತು ಆಡಿರಲಿಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular