Saturday, July 27, 2024
Google search engine
Homeಜಿಲ್ಲೆಸಂವಿಧಾನಿಕ ಹಕ್ಕುಗಳನ್ನು ಹರಡಲು ಸೋಷಿಯಲ್ ಮೀಡಿಯಾ ಬಳಸಿ

ಸಂವಿಧಾನಿಕ ಹಕ್ಕುಗಳನ್ನು ಹರಡಲು ಸೋಷಿಯಲ್ ಮೀಡಿಯಾ ಬಳಸಿ

ಉತ್ತಮ ಸಂದೇಶ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಹರಡಲು ಯುವಜನರು ಸೋಷಿಯಲ್ ಮೀಡಿಯಾ ಬಳಸಿ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕರೆ ನೀಡಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಯುವಜನರು ಬಳಕೆ ಮಾಡುವ ವಿಧಾನ ಬದಲಾಗಬೇಕಿದೆ, ಯಾಕಂದ್ರೆ ಯುವಜನರು ಸಂಘಟಿತರಾಗಿ ಹೊರಬರದೇ ಮಾನಸೀಕ ಸೀಮಿತತೆಗೆ ಒಳಗಾಗುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಮತ್ತು ಸಂಘಟಿತ ಚಳುವಳಿಯ ಅಯಾಮಕ್ಕೆ ಪೂರಕವಾಗಿ ಯುವಜನರು ಬಳಕೆ ಮಾಡಬೇಕು ಎಂದು ಹೇಳಿದರು.

ವಿವಿಧ ಜಾತಿ, ಧರ್ಮಗಳ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಪರ್ಕ ಮತ್ತು ಸಂವಹನಕ್ಕೆ ವೇದಿಕೆಯಾಗಿ ಜನರ ಮಾಧ್ಯಮವಾಗಿ ಸಾಮಾಜಿಕ ಜಾಲತಾಣ ಅತೀ ಹೆಚ್ಚು ಪ್ರಚಲಿತದಲ್ಲಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜನಸಂಪರ್ಕ ಸಾಧನವಾಗಿ ಸೋಷಿಯಲ್ ಮೀಡಿಯಾ ಬಳಕೆಯಾಗಲಿ ಎಂದರು.

ಪತ್ರಕರ್ತ ಅನಿಲ್‌ಕುಮಾರ್ ಚಿಕ್ಕದಾಳವಟ್ಟ ಮಾತನಾಡಿ ದೇಶದ ಆಗುಹೋಗುಗಳ ಮತ್ತು ಅತೀ ವೇಗವಾಗಿ ಜನರನ್ನು ಸೆಳೆಯುವ ಮಾಧ್ಯಮ ಸಾಮಾಜಿಕ ಜಾಲತಾಣ, ದೇಶ ಡಿಜಿಟಲೀಕರಣವಾಗಬೇಕು ಮತ್ತು ತಾಂತ್ರಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದರು.

ದೇಶದ ಸಾಮಾನ್ಯ ಜನರ ಮಧ್ಯೆ ಕಾಣಿಸಿಕೊಳ್ಳಬೇಕು ಎಂಬ ಆಶಯ ಒಂದು ಕಡೆಯಾದರೆ ಆರ್ಥಿಕವಾಗಿ ಪ್ರಾರಂಭದಿಂದಲು ಕೆಲವೇ ಕೆಲವರ ಹಿಡಿತದಲ್ಲಿ ಸಾಮಾಜಿಕ ಜಾಲತಾಣವನ್ನು ಹಿಡಿದಿಟ್ಟು ಲಾಭದಾಯಕವಾಗಿ ಬಳಸಿಕೊಳ್ಳುತ್ತಿರುವ ಗುಂಪುಗಳು ಹೆಚ್ಚಿವೆ. ಇತ್ತೀನ ಸೈಬರ್‌ ಕ್ರೈಂ ಪ್ರಕರಣಗಳು ಅತೀವೇಗವಾಗಿ ಹರಡುತ್ತಿರುವುದರಿಂದ ಯಾವುದೇ ಅಕೌಂಟ್‌ ನಿಂದ ಅನಾಮಿಕ ಸಂದೇಶಗಳು ಹಣಕ್ಕೆ ಬೇಡಿಕೆಯಿಟ್ಟರೆ ಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿಯು ಜಾತಿ, ಧರ್ಮ, ಮೇಲು, ಕೀಳು ಎಂಬುದು ಜೀವಂತವಾಗಿದೆ. ಸಮಕಾಲೀನ ಸಂದರ್ಭದಲ್ಲಿ ತಾಂತ್ರಿಕವಾಗಿ ಎಷ್ಟೇ ಬೆಳೆದರು ಅಥವಾ ಸರಿ ತಪ್ಪುಗಳನ್ನು ಪ್ರಶ್ನಿಸಿದರು ಕೆಲವು ಮನಸ್ಥಿತಿಗಳು ಅಲ್ಲಿಯು ತಮ್ಮ ಅಟ್ಟಹಾಸ ಮೆರೆಯುತ್ತಾರೆ, ಇಂತಹ ಸೂಕ್ಷ್ಮತೆ ಬಗ್ಗೆ ಯುವಜನರಾದ ನಾವು ಜಾಗರೂಕತೆಯಿಂದ ಇರಬೇಕು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular