Saturday, July 27, 2024
Google search engine
Homeಚಳುವಳಿಜನಸಂಖ್ಯಾವಾರು ಮೀಸಲಾತಿಗೆ ಒತ್ತಾಯಿಸಿ ದಂಡೋರದಿಂದ ಚಲೋ ಹೈದರಾಬಾದ್

ಜನಸಂಖ್ಯಾವಾರು ಮೀಸಲಾತಿಗೆ ಒತ್ತಾಯಿಸಿ ದಂಡೋರದಿಂದ ಚಲೋ ಹೈದರಾಬಾದ್

ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯಾವಾರು ಮೀಸಲಾತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಮೂರು ದಶಕಗಳ ಹೋರಾಟದ ಅಂತಿಮ ರೂಪವಾಗಿ ನವೆಂಬರ್ 11 ರಂದು ಹೈದ್ರಾಬಾದ್‌ನ ಸಿಕಂದ್ರಾಬಾದ್ ಪೆರೇಡ್ ಗ್ರೌಂಡ್‌ನಲ್ಲಿ ಹಲೋ ಮಾದಿಗ, ಚಲೋ ಹೈದ್ರಾಬಾದ್, ಮಾದಿಗರ ವಿಶ್ವರೂಪ ಮಹಾಸಭಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜು ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕಳೆದ ಮೂವತ್ತು ವರ್ಷಗಳಿಂದ ಒಳಮೀಸಲಾತಿಗಾಗಿ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು, ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಂದೆ ಮಾದಿಗರ ಶಕ್ತಿ ಪ್ರದರ್ಶನ ಇದಾಗಿದೆ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ಕರ್ನಾಟಕದಲ್ಲಿ ಹಾಗೆಯೇ ದೇಶದಲ್ಲಿ ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ. ಪರಿಶಿಷ್ಟಜಾತಿ ಪಟ್ಟಿಯಲ್ಲಿರುವ 101 ಪಂಗಡಗಳಲ್ಲಿಯೇ ಪ್ರಬಲ ಪಂಗಡಗಳು ಇತರೆ ಸಮುದಾಯುಗಳನ್ನು ನ್ಯಾಯಬದ್ದವಾಗಿ ದೊರೆಯಬೇಕಾದ ಮೀಸಲಾತಿಯನ್ನು ಕಬಳಿಸಿ,ಅಸ್ಪೃಷ್ಯರನ್ನು ಮತ್ತಷ್ಟು ತುಳಿತಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾದಿಗರ ಒಳಮೀಸಲಾತಿಗಾಗಿ ಕರ್ನಾಟಕದಲ್ಲಿ 1996ರಿಂದಲೂ ಹೋರಾಟ ನಡೆದಿದೆ. ಈ ಹಿಂದಿನ ಸರ್ಕಾರ ಒಳಮೀಸಲಾತಿ ವರ್ಗೀಕರಣದ ಭಾಗವಾಗಿರುವ ನ್ಯಾ.ಎ.ಜೆ.ಸದಾಶಿವ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಇದುವರೆಗೂ ಕೇಂದ್ರದಲ್ಲಿ ಈ ವಿಚಾರ ಪ್ರಾಸ್ತಾಪವಾಗಿಲ್ಲ. ನಮ್ಮಂತೆಯೇ ನೆರೆಯ ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ. ಹಾಗಾಗಿ ದಕ್ಷಿಣ ಭಾರತದ ಎಲ್ಲಾ ಮಾದಿಗರು ಸುಮಾರು 30 ಲಕ್ಷ ಜನ ನವೆಂಬರ್ 11 ರಂದು ಹೈದ್ರಾಬಾದ್ ನಲ್ಲಿ ಸೇರಿ ನಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದಾಗಿ ದೇವರಾಜು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular