ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಚಿದಂಬರ ರಾವ್ ಜಂಬೆ, ದಿನೇಶ್ ಅಮೀನ್ ಮಟ್ಟು, ಸುಬ್ಬು ಹೊಲೆಯಾರ್, ಲಕ್ಷ್ಮೀಪತಿ ಕೋಲಾರ, ಕೆ.ಷರೀಫಾ, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ನಾಳೆ ಅಂದರೆ ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಾಹಿತ್ಯ ಕ್ಷೇತ್ರ
ಚಾಮರಾಜನಗರದ ಪ್ರೊ.ಸಿ.ನಾಗಣ್ಣ, ಹಾಸನದ ಸುಬ್ಬು ಹೊಲೆಯಾರ್, ಹಾವೇರಿಯ ಸತೀಶ್ ಕುಲಕರ್ಣಿ, ಕೋಲಾರದ ಲಕ್ಷ್ಮೀಪತಿ ಕೋಲಾರ್, ಬೆಂಗಳೂರಿನ ಡಾ. ಕೆ.ಷರೀಫಾ
ಸಂಗೀತ/ನೃತ್ಯ ಕ್ಷೇತ್ರ
ಬೆಂಗಳೂರಿನ ಡಾ.ಎಸ್.ನಯನ ಮೋರೆ, ದಾರವಾಡದ ನೀಲಾ ಎಂ.ಕೊಡ್ಲಿ, ಬೆಂಗಳೂರಿನ ಶಬ್ಬೀರ್ ಅಹಮದ್, ಧಾರವಾಡದ ಡಾ.ಎಸ್. ಬಾಳೇಶ್ ಭಜಂತ್ರಿ
ಚಲನಚಿತ್ರ ಕ್ಷೇತ್ರ
ಬೆಂಗಳೂರಿನ ನಟ ಡಿಂಗ್ರಿ ನಾಗರಾಜ್, ಪೋಷಕ ನಟ ಬ್ಯಾಂಕ್ ಜನಾರ್ಧನ್
ರಂಗಭೂಮಿ ಕ್ಷೇತ್ರ
ಶಿವಮೊಗ್ಗದ ಎ.ಜಿ.ಚಿದಂಬರಾವ್ ಜಂಬೆ, ಮೈಸೂರಿನ ಪಿ.ಗಂಗಾಧರ ಸ್ವಾಮಿ, ಧಾರವಾಡದ ಎಚ್.ಬಿ.ಸರೋಜಮ್ಮ, ಬಾಗಲಕೋಟೆಯ ತಯ್ಯಬಖಾನ್ ಎಂ ಇನಾಮದಾರ, ಡಾ.ವಿಶ್ವನಾಥ್ ವಂಶಾಕೃತ ಮಠ, ಚಿತ್ರದುರ್ಗದ ಪಿ.ತಿಪ್ಪೇಸ್ವಾಮಿ
ಶಿಲ್ಪಕಲೆ/ಚಿತ್ರಕಲೆ/ಕರಕುಶಲ ಕ್ಷೇತ್ರ
ದಾವಣಗೆರೆಯ ಟಿ.ಶಿವಶಂಕರ್, ರಾಯಚೂರಿನ ಕಾಳಪ್ಪ ವಿಶ್ವಕರ್ಮ, ಬೆಂಗಳೂರಿನ ಮಾರ್ಥಾ ಜಾಕಿಮೋವಿಚ್, ಮೈಸೂರಿನ ಪಿ.ಗೌರಯ್ಯ,
ಯಕ್ಷಗಾನ/ಬಯಲಾಟ ಕ್ಷೇತ್ರ
ಉಡುಪಿಯ ಆರ್ಗೋಡು ಮೋಹನದಾಸ್ ಶೆಣೈ, ದಕ್ಷಿಣ ಕನ್ನಡದ ಕೆ.ಲೀಲಾವತಿ ಬೈಪಾಡಿತ್ತಾಯ, ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ, ವಿಜಯನಗರ ಜಿಲ್ಲೆಯ ದಳವಾಯಿ ಸಿದ್ದಪ್ಪ
ಜಾನಪದ
ಉತ್ತರ ಕನ್ನಡ ಜಿಲ್ಲೆಯ ಹುಸೇನಾಬಿ ಬುಡನ್ ಸಾಬ್ ಸಿದ್ದಿ, ದಾವಣಗೆರೆಯ ಶವಂಗಿ ಶಣ್ಮರಿ, ಮೈಸೂರಿನ ಮಹದೇವು, ಬೀದರ್ ಜಿಲ್ಲೆಯ ನರಸಪ್ಪ, ಕಲಬುರಗಿಯ ಶಕುಂತಲಾ ದೇವಲಾನಾಯಕರ್, ಬಳ್ಳಾರಿಯ ಎಚ್.ಕೆ.ಕಾರಮಂಚಪ್ಪ, ಗದಗದ ಡಾ.ಶಂಭು ಬಳಿಗಾರ, ಚಿಕ್ಕಮಗಳೂರಿನ ಚೌಡಮ್ಮ,
ಸಮಾಜ ಸೇವೆ
ಕೊಪ್ಪಳದ ಹುಚ್ಚಮ್ಮ ಬಸಪ್ ಚೌದರಿ, ದಕ್ಷಿಣ ಕನ್ನಡದ ಚಾರ್ಮಾ ಡಿ ಹಸನಬ್ಬ, ದಾವಣಗೆರೆಯ ಕೆ.ರೂಪ್ಲಾ ನಾಯಕ್, ಬೆಳಗಾವಿಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ, ಬೆಂಗಳೂರಿನ ನಾಗರಾಜ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆಡಳಿತ ಕ್ಷೇತ್ರದಲ್ಲಿ ತುಮಕೂರಿನ ಜಿ.ವಿ.ಬಲರಾಮ್, ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರಿನ ಡಾ.ಸಿ.ರಾಮಚಂದ್ರ, ದಕ್ಷಿಣ ಕನ್ನಡದ ಡಾ.ಪ್ರಶಾಂತ್ ಶೆಟ್ಟಿ.
ಶಿಕ್ಷಣ ಕ್ಷೇತ್ರ:
ರಾಯಚೂರಿನ ರಾಮಪ್ಪ ಹವಳೆ, ಕೋಲಾರದ ಕೆ.ಚಂದ್ರಶೇಖರ್, ಮಂಡ್ಯದ ಕೆ.ಟಿ.ಚಂದು
ಕ್ರೀಡಾ ಕ್ಷೇತ್ರ:
ಕೋಲಾರದ ದಿವ್ಯ ಟಿ.ಎಸ್., ಬೆಂಗಳೂರಿನ ಆದಿತಿ ಅಶೋಕ್, ಧಾರವಾಡದ ಅಶೋಕ್ ಗದ್ದಿಗೆಪ್ಪ ಏಣಗಿ,-
ನ್ಯಾಯಾಂಗ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದ ಜ|| ವಿ.ಗೋಪಾಲಗೌಡ
ಕೃಷಿ-ಪರಿಸರ
ಕಲಬುರಗಿಯ ಸೋಮನಾಥ ರೆಡ್ಡಿ ಪೂರ್ಮಾ, ಧಾರವಾಡದ ದ್ಯಾವನಗೌಡ ಟಿ. ಪಾಟೀಲ, ಬಾಗಲಕೋಟೆಯ ಶಿವರೆಡ್ಡಿ ಹನುಮರೆಡ್ಡಿ ವಾಸನ
ಸಂಕೀರ್ಣ ಕ್ಷೇತ್ರ
ವಿಜಯಪುರ ಎ.ಎಂ.ಮದರಿ, ಉಡುಪಿಯ ಹಾಜಿ ಅಬ್ದುಲ್ಲಾ ಪರ್ಕಳ, ಮೈಸೂರಿನ ಮಿಮಿಕ್ರಿ ದಯಾನಂದ್, ಡಾ.ಕಬ್ಬಿನಾಲೆ ವಸಂತ, ಕೊಡಗಿನ ಲೆ.ಜ|| ಭಾರದ್ವಾಜ್, ಕೊಡನ ಪೂವಯ್ಯ ಕಾರ್ಯಪ್ಪ,
ಮಾಧ್ಯಮ ಕ್ಷೇತ್ರ:
ದಕ್ಷಿಣ ಕನ್ನಡದ ದಿನೇಶ್ ಅಮೀನ್ ಮಟ್ಟು, ಮೈಸೂರಿನ ಜವರಪ್ಪ, ಬೆಂಗಳೂರಿನ ಮಾಯಾ ಶರ್ಮಾ, ವಿಜಯಪುರದ ರಫಿ ಬಂಢಾರಿ
ವಿಜ್ಞಾನ/ತಂತ್ರಜ್ಞಾನ :
ಬೆಂಗಳೂರಿನ ಎಸ್.ಸೋಮನಾಥನ್ ಶಿವನ್ ಪನಿಕರ್, ಚಾಮರಾಜನಗರದ ಪ್ರೊ.ಗೋಪಾಲನ್ ಜಗದೀಶ್,
ಹೊರನಾಡು/ಹೊರದೇಶ
ಸೀತಾರಾಮ್ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ
ರಾಮನಗರದ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿ ಗೌಡ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.