Friday, November 22, 2024
Google search engine
Homeಮುಖಪುಟತುಮಕೂರು - ಗಾಂಧೀಜಿ ವಿರುದ್ಧ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ - ಡಾ.ರವಿಕುಮಾರ್ ನೀಹ ಆತಂಕ

ತುಮಕೂರು – ಗಾಂಧೀಜಿ ವಿರುದ್ಧ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ – ಡಾ.ರವಿಕುಮಾರ್ ನೀಹ ಆತಂಕ

ಮಹಾತ್ಮ ಗಾಂಧಿಯವರನ್ನು ವಿರೋಧಿಸುವ ಶಕ್ತಿಗಳು ವಿಜೃಂಭಿಸುತ್ತಿವೆ. ಯುವಕರಲ್ಲಿ ಗಾಂಧೀಜಿ ಬಗ್ಗೆ ಸುಳ್ಳುಗಳನ್ನು ಪ್ರಚುರ ಪಡಿಸಲಾಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗಾಂಧೀಜಿಯನ್ನು ಯುವಜನತೆಗೆ ತಲುಪಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿಮರ್ಶಕ ಡಾ.ರವಿಕುಮಾರ್ ನೀಹ ತಿಳಿಸಿದ್ದಾರೆ.

ತುಮಕೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಸಹಯೋಗದಲ್ಲಿ ನಡೆದ ಯುವಜನತೆಗೆ ಬೇಕಾದ ಗಾಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಗಾಂಧಿಯ ಯುದ್ದ ವಿರೋಧಿ ನೀತಿ, ಅಪರಿಗ್ರಹ, ಅಹಿಂಸೆಗಳು, ಜೀವ ಪರವಾದ ಸಮಾನತೆಯ ಆಶಯವುಳ್ಳ ಮಾನವೀಯ ಮೌಲ್ಯಗಳನ್ನೇ ಉಸಿರಾಡುತ್ತಿವೆ. ಇವುಗಳನ್ನು ಕುರಿತು ಯುವಜನತೆಗೆ ಅರಿವು ಮೂಡಿಸಬೇಕಿದೆ. ಗಾಂಧಿ ನಮಗೆ ಹಲವು ವಿಚಾರಗಳಲ್ಲಿ ಮುಖ್ಯವಾಗುತ್ತಾರೆ ಎಂದರು.

ಇಂದು ಇಡೀ ಜಗತ್ತು ಭಾರತವನ್ನು ನೋಡುತ್ತಿರುವುದು, ಬುದ್ಧ, ಗಾಂಧಿ ಮತ್ತು ಅಂಬೇಡ್ಕರರ ಕಾರಣಕ್ಕಾಗಿ, ಗಾಂಧಿ ಒಂದು ವ್ಯಕ್ತಿಯಲ್ಲ. ಆಗುತ್ತಿರುವ ಕ್ರಿಯೆ. ಗಾಂಧೀಜಿಯ ಅಹಿಂಸೆ, ಅಪರಿಗ್ರಹ, ಸರಳ ಜೀವನ, ಸ್ವಚ್ಛತೆಯಂತಹ ವಿಚಾರಗಳು ಇಂದಿಗೆ ಹೆಚ್ಚು ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜ್ ಮಾತನಾಡಿ, ಇತ್ತೀಚೆಗೆ ಯುವಜನತೆ ಗಾಂಧಿಯಿಂದ ದೂರವಾಗುತ್ತಿದ್ದಾರೆ. ಇಡೀ ಮನುಕುಲಕ್ಕೆ ಸರ್ವಕಾಲಕ್ಕೂ ಪ್ರಸ್ತುತವಾಗುವ ಚಿಂತನೆಗಳನ್ನು ಸತ್ಯ, ಅಹಿಂಸೆ, ಪ್ರೀತಿಯಂತಹ ಸಶಕ್ತ ಮಾರ್ಗಳನ್ನು ಗಾಂಧೀಜಿ ನಮಗೆ ನೀಡಿದ್ದಾರೆ. ಗಾಂಧಿ ಬದುಕು ಪ್ರಕೃತಿ ಸಹಜವಾದದ್ದು. ಎಲ್ಲವನ್ನ್ಉ ಸಮತೆಯಿಂದ ಸಮಚಿತ್ತದಿಂದ ನೋಡುವುದನ್ನು ಗಾಂಧೀ ನಮಗೆ ಕಲಿಸಿದ್ದಾರೆ. ನಮಗೆ ಅವಕಾಶ ಸಿಕ್ಕಾಗಲೆಲ್ಲಾ ಮುಂದಿನ ತಲೆಮಾರಿಗೆ ಗಾಂಧಿಯವರನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಣ್ಣ ಮಡಿವಾಳ, ಡಾ.ಪ್ರಿಯಾಂಕ, ಮರಿಯಂಬಿ, ಗಾಯಕಿ ಪಾರ್ವತಮ್ಮ ರಾಜ್ ಕುಮಾರ, ಡಾ.ರಜನಿ, ಡಾ.ಮೂರ್ತಿ, ವಿಚಾರ ಮಂಟಪ ಬಳಗದ ವರುಣ್ ರಾಜ್, ನವೀನ್ ಕುಮಾರ್, ಮುತ್ತುರಾಜು, ಸುರೇಶ್ ಇತದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular