ನಾಟಕ, ಕಾದಂಬರಿ ಹಾಗೂ ಮಕ್ಕಳ ಕುರಿತು ಪುಸ್ತಕ ರಚನೆಯಲ್ಲಿ ತೊಡಗಿರುವ ಸಾಹಿತಿ ಜಾನ್ ಫಾಸ್ಸೆ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನೊಬೆಲ್ ಸಾಹಿತ್ಯ ಸಮಿತಿ ಅಧ್ಯಕ್ಷ ಅಂಡರ್ಸ್ ಒಲ್ಸನ್, ಪಾಸ್ಡೆ ಅವರ ಕೆಲಸವು ಅವರ ನರ್ವೇಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲಿ ಬೇರೂರಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಫಾಸ್ಸೆ, ಅವರು ಕರೆ ಮಾಡಿದಾಗ ನನಗೆ ಆಶ್ಚರ್ಯವಾಯಿತು. ಕಳೆದ 10 ವರ್ಷಗಳಲ್ಲಿ ಇದು ಸಂಭವಿಸುವ ಸಾಧ್ಯತೆಗಾಗಿ ನಾನು ಎಚ್ಚರಿಕೆಯಿಂದ ನನ್ನನ್ನು ಸಿದ್ದಪಡಿಸಿಕೊಂಡಿದ್ದೇನೆ ಎಂದು 64 ವರ್ಷದ ಫಾಸ್ಸೆ ನಾರ್ವೇಯನ್ ಸಾರ್ವಜನಿಕ ಪ್ರಸಾರಕ ಎನ್ಆರ್.ಕೆ ಹೇಳಿದ್ದಾರೆ.
ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಗುರುವಾರ ಸ್ಟಾಕೋಮ್ ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋಸರ್ ನಗದು ಬಹುಮಾನವನ್ನು ಒಳಗೊಂಡಿದೆ.
64 ವರ್ಷದ ಫಾಸ್ಸೆ ಎರಡು ಡಜನ್ ಗಿಂತಲೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ನಾಲ್ಕು ದಶಕಗಳ ಕಾಲ ಕಾದಂಬರಿಗಳು, ಪ್ರಬಂಧಗಳು, ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಲೇಖನ ಬರಹಗಳು 40 ಬಾಷೆಗಳಲ್ಲಿ ಭಾಷಾಂತರ ಮಾಡಲಾಗಿದೆ.