Thursday, September 19, 2024
Google search engine
Homeಮುಖಪುಟಬಿಜೆಪಿ ಜೊತೆ ಮೈತ್ರಿ - ಪಕ್ಷ ತೊರೆಯುವ ನಿರ್ಧಾರಕ್ಕೆ ಮುಂದಾದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

ಬಿಜೆಪಿ ಜೊತೆ ಮೈತ್ರಿ – ಪಕ್ಷ ತೊರೆಯುವ ನಿರ್ಧಾರಕ್ಕೆ ಮುಂದಾದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

2024ರಲ್ಲಿ ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗುವಾಗ ನನ್ನನ್ನು ಬಿಟ್ಟು ಹೋಗಿದ್ದಾರೆ. ಇದು ನನಗೆ ನೋವಾಗಿದೆ. ಇವರು ಬಿಜೆಪಿ ಬಳಿ ಹೋಗಿದ್ದು ತಪ್ಪು. ಅವರೇ ಎಚ್.ಡಿ. ದೇವೇಗೌಡರ ಮನೆ ಬಳಿಗೆ ಬರಬೇಕಾಗಿತ್ತು. ಪಕ್ಷದ ಕಾರ್ಯಕರ್ತರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂತು ಎಂದು ಹೇಳಿದ್ದಾರೆ.

ನಾನೊಂದು ಪಕ್ಷದ ಅಧ್ಯಕ್ಷ. ನೀವು ದೆಹಲಿಗೆ ಹೋದಿರಿ. ನನಗೆ ಒಂದು ಮಾತು ಹೇಳಲಿಲ್ಲ. ಏನು ಚರ್ಚೆ ಮಾಡಿದ್ದೀರಿ. ಈವರೆಗೆ ಮಾಹಿತಿ ಬಂದಿಲ್ಲ. ಮೈತ್ರಿ ಎಲ್ಲಿ ಆಗಿದೆ. ನಾನು ಪಕ್ಷದ ಅಧ್ಯಕ್ಷ. ಪಕ್ಷದಲ್ಲಿ ಎಲ್ಲಿ ಚರ್ಚೆ ಆಗಿದೆ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು ಎಂದು ವಾರ್ತಾ ಭಾರತಿ ವರದಿ ಮಾಡಿದೆ.

ಜನತಾ ದಳದ ಮೂಲ ಮತಗಳು ಈ ಬಾರಿ ಕಾಂಗ್ರೆಸ್ ಗೆ ಹೋಗಿವೆ. ಅದನ್ನು ಒಪ್ಪಲು ತಯಾರಿಲ್ಲ. ಅದನ್ನು ಒಪ್ಪಿಕೊಳ್ಳಿ. ಪಕ್ಷದಲ್ಲಿ ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಪ್ರವಾಸ ಶುರು ಮಾಡಿಲ್. ಆಗಲೇ ಹೋಗಿ ಭೇಟಿ ಮಾಡಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್ 16ರಂದು ಆಪ್ತರ ಸಭೆ ಕರೆದಿದ್ದು ಆ ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ತೀರ್ಮಾನಿಸಲಾಗುವುದು. ಸಭೆಯ ಬಳಿಕ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ. ಶರದ್ ಪವಾರ್ ಸೇರಿದಂತೆ ಹಲವರು ಮತ್ತು ದೆಹಲಿಯಿಂದ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ. ಸಿದ್ದರಾಮಯ್ಯ ಜೊತೆ ಏನೂ ಮಾತುಕತೆ ಮಾಡಿಲ್ಲ ಎಂದು ಹೇಳಿದ್ದಾರೆ.

ನನಗೆ ಸ್ಥಾನ ಮುಖ್ಯ ಅಲ್ಲ. ಮಾನ ಮುಖ್ಯ. 60 ವರ್ಷದ ರಾಜಕೀಯ ಜೀವನದಲ್ಲಿ ಕಳಂಕ ನನ್ನ ಮೇಲೆ ಇಲ್ಲ. ಮೈತ್ರಿ ಬೇಕಾಗಿಲ್ಲ ಎಂದು ಅವತ್ತು ದೇವೇಗೌಡರು ಹೇಳಿದ್ದರು. ದೇವೇಗೌಡರು ಹೋಗಿ ಮೈತ್ರಿ ಬಗ್ಗೆ ಮಾತನಾಡಿಲ್ಲ ಎಂದು ಇಬ್ರಾಹಿಂ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular