ಶ್ರೀಲಂಕ ಮತ್ತು ಭಾರತದ ನಡುವೆ ಇಂದು ನಡೆದ ಏಷ್ಯಾಕಪ್ ಕ್ರಿಕೆಟ್ ಏಕದಿನ ಪಂದ್ಯಾವಳಿಯಲ್ಲಿ ಭಾರತ್ ರೋಚಕ ಗೆಲುವು ಸಾಧಿಸಿದೆ. ಶ್ರೀಲಂಕಾ ತಂಡವನ್ನು ಕೇವಲ 50 ರನ್ ಗಳಿಗೆ ಕಟ್ಟಿ ಹಾಕಿದ ಭಾರತದ ಬೌಲರ್ ಗಳು ಶ್ರೀಲಂಕಾದ ವೇಗಕ್ಕೆ ತಡೆ ಹಾಕಿದರು.
ಕೊಲಂಬೋದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಂಟಿಂಗ್ ಮಾಡಿದ ಶ್ರೀಲಂಕಾ ತಂಡವನ್ನು ಭಾರತದ ಬೌಲರುಗಳು ಅಕ್ಷರಶಃ ರನ್ ಗಳ ವೇಗಕ್ಕೆ ತಡೆಹಾಕಿದರು.
ಶ್ರೀಲಂಕಾ ತಂಡ 50 ರನ್ ಗಳಿಗಳಿಗೆ ಸರ್ವಪತನ ಆಗಿದ್ದು ಭಾರತಕ್ಕೆ 51ರನ್ ಗಳ ಗುರಿ ನೀಡಿತು. ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಭಾರತ ಬ್ಯಾಟ್ಸ್ ಮನ್ ಗಳು ಕೇವಲ 6.1 ಓವರ್ ಗಳಿಗೆ ವಿಕೆಟ್ ನಷ್ಟವಿಲ್ಲದೆ 51 ರನ್ ಬಾರಿಸುವ ಮೂಲಕ ಸುಲಭವಾಗಿ ಜಯ ಗಳಿಸಿದರು.
ಭಾರತದ ಪರವಾಗಿ ಇಶಾನ್ ಕಿಶನ್ 23 ರನ್ ಹಾಗೂ ಶುಭ್ಮನ್ ಗಿಲ್ ಅಜೇಯ 27 ರನ್ ಗಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಮೊದಲ ಓವರ್ ನ ಮೂರನೇ ಎಸೆತದಲ್ಲಿ ಕುಸಲ್ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಜಿಸ್ಟ್ರೀಟ್ ಬೂಮ್ರಾ ಕಟ್ಟಿಹಾಕಿದರು. ಅದರ ನಂತರ ಒಂದರ ಹಿಂದೆ ಒಂದರಂತೆ ಶ್ರೀಲಂಕಾ ತಂಡ ಬ್ಯಾಟ್ಸ್ ಮನ್ ಗಳು ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಸೇರಿದರು.
ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ 21 ರನ್ ಗಳನ್ನು ನೀಡಿ 6 ವಿಕೆಟ್ ಪಡೆದರು. ಸ್ಪಿನ್ ಬೌಲಿಂಗ್ ಮಾಂತ್ರಿಕ ಸಿರಾಜ್ ಮೊಹಮ್ಮದ್ 6 ವಿಕೆಟ್ ಗಳನ್ನು ಗಳಿಸುವ ಮೂಲಕ ಭಾರತ ಗೆಲುವಿಗೆ ಕೊಡುಗೆ ನೀಡಿದರು. ಭಾರತ ತಂಡ ಶ್ರೀಲಂಕಾವನ್ನು 10 ವಿಕೆಟ್ ಗಳಿಂದ ಸೋಲಿಸಿ ಐದು ವರ್ಷಗಳ ನಂತರ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.