ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು ಶೃಂಗಸಭೆಯಲ್ಲಿ ಭಾಗಿಯಾಗಿರುವ ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆ ಮಾಡುವ ಅಗತ್ಯವಿಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಎರಡು ದಿನಗಳ ಶೃಂಗಸಭೆಯ ಮೊದಲು ಕೆಲವು ಕೊಳೆಗೇರಿ ಪ್ರದೇಶಗಳನ್ನು ಹಸಿರುವ ಹಾಳೆಗಳಿಂದ ಮುಚ್ಚಿರುವುದನ್ನು ತೋರಿಸುವ ವಿಡಿಯೋವನ್ನು ಕಾಂಗ್ರೆಸ್ ಎಕ್ಸ್ ನಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಭಾರತ ಸರ್ಕಾರವು ನಮ್ಮ ಬಡಜನರು ಮತ್ತು ಪ್ರಾಣಿಗಳನ್ನು ಮರೆಮಾಚುತ್ತಿದೆ. ನಮ್ಮ ಅಥಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಡುವ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿ.20 ಜಾಘತಿಕ ಸಮಸ್ಯೆಗಳನ್ನು ಸಹಕಾರಿ ವಿಧಾನದಲ್ಲಿ ಎದುರಿಸುವ ಗುರಿಯನ್ನು ಹೊಂದಿರುವ ಪ್ರಮುಖ ವಿಶ್ವ ಆರ್ಥಿಕತೆಗಳ ಉತ್ಪಾದಕ ಸಭೆಯಾಗಿದೆ ಎಂದು ಹೇಳಿದ್ದಾರೆ.
ಸ್ಲಂಗಳನ್ನು ಮುಚ್ಚಿಡುವ ವಿಡಿಯೋದ ಜೊತೆಗೆ ವಿರೋಧ ಪಕ್ಷವು ಜಿ-20 ಶೃಂಗಸಭೇಯ ಮೊದಲು ಬೀದಿ ನಾಯಿಗಳು ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯದ ವಿಡಿಯೋಗಳನ್ನು ಕಾಂಗ್ತೆಸ್ ಹಂಚಿಕೊಂಡಿದೆ.
ಸರ್ಕಾರವು ನಮ್ಮನ್ನು ಕೀಟಗಳಂತೆ ಪರಿಗಣಿಸುತ್ತದೆ. ನಾವು ಮನುಷ್ಯರಲ್ಲವೇ ಎಂದು ಕೊಳೆಗೇರಿ ನಿವಾಸಿಯೊಬ್ಬರು ಹೇಳುವ ವಿಡಿಯೋವನ್ನು ಕಾಂಗ್ರೆಸ್ ಎಕ್ಸ್ ನಲ್ಲಿ ಹಂಚಿಕೊಂಡಿದೆ.