Saturday, October 19, 2024
Google search engine
Homeಜಿಲ್ಲೆಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ - ಲೇಖಕ ಉಜ್ಜಜ್ಜಿ ರಾಜಣ್ಣ ಆತಂಕ

ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ – ಲೇಖಕ ಉಜ್ಜಜ್ಜಿ ರಾಜಣ್ಣ ಆತಂಕ

ಅಲೆಮಾರಿ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಶಾಲೆಯಿಂದ ಹೊರಗುಳಿಯುವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಜಿಲ್ಲಾ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ತಿಳಿಸಿದ್ದಾರೆ.

ದಿನಗೂಲಿಗಾಗಿ ತೆರಳಿದ ಪೋಷಕರು ಮನೆಯಿಂದ ಕೂಲಿಯರಸಿ ದೂರದ ಪ್ರದೇಶಗಳಿಗೆ ತೆರಳುತ್ತಾರೆ. ಶಾಲೆಯಲ್ಲಿ ಇರಬೇಕಾದ ಮಕ್ಕಳು ಮನೆಯಲ್ಲಿ ಬೀದಿಗಳಲ್ಲಿ ಉಳಿಯುತಿದ್ದಾರೆ. ಅವರ ಮಕ್ಕಳು ಶಾಲೆಯಲ್ಲಿ ನೊಂದಾಯಿತರಾಗಿ ವಿವಿಧ ತರಗತಿಗಳಲ್ಲಿ ಕಲಿಯುತಿದ್ದರೂ ಬೀದಿಯಲ್ಲೇ ಉಳಿದಿದ್ದಾರೆ ಎಂದರೆ ಸಂಬಂದಪಟ್ಟವರ ನಿಗಾ ಇರದಿರುವುದೇ ಮಖ್ಯ ಕಾರಣವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.

ಅಲೆಮಾರಿ ಬುಡಕಟ್ಟು ಸಮುದಾಯಗಳ ಮಕ್ಕಳ ಶಾಲಾ ನೊಂದಾವಣೆಯೂ ಕ್ರಮವಾಗಿ ಆಗಿಲ್ಲದೆ ಇರುವುದರಿಂದ ಶಾಲಾ ಅವದಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯ ಹೆಚ್ಚಾಗತೊಡಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭವಿಷ್ಯದಲ್ಲಿ ಕೂಲಿ ಕಾರ್ಮಿಕರು ಮತ್ತು ಅಲೆಮಾರಿಗಳು ಕೊರತೆಯಾಗಬಹುದೆಂದು ಅಲೆಮಾರಿಗಳು ಮತ್ತು ಕೂಲಿ ಕಾರ್ಮಿಕರ ಮಕ್ಕಳನ್ನು ಶಾಲೆಯಿಂದ ಹೊರಗುಳಿಸಿ ಅವರನ್ನು ಶಿಕ್ಷಣದಿಂದ ವಂಚಿಸಲಾಗುತ್ತಿದೆಯೆ ಎಂದು ಉಜ್ಜಜ್ಜಿ ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಡಿ.ಡಿ.ಪಿ.ಐ ಅವರು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular