Tuesday, December 3, 2024
Google search engine
Homeಮುಖಪುಟದಲಿತರಿಗೆ ಅವಮಾನ ಮಾಡಿದ ನಟ ಉಪೇಂದ್ರರನ್ನು ಬಂಧಿಸಲು ಆಗ್ರಹ

ದಲಿತರಿಗೆ ಅವಮಾನ ಮಾಡಿದ ನಟ ಉಪೇಂದ್ರರನ್ನು ಬಂಧಿಸಲು ಆಗ್ರಹ

ದಲಿತರನ್ನು ಕೀಳಾಗಿ ಕಂಡು ತುಚ್ಛವಾಗಿ ಮಾತನಾಡಿ ಇಡೀ ದೇಶದ ದಲಿತರ ಕೆಂಗಣ್ಣಿಗೆ ಗುರಿಯಾಗಿರುವ ನಟ ಉಪೇಂದ್ರ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.

ತುಮಕೂರಿನ ಟೌನ್ ಹಾಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ದಲಿತ ಸೇನೆ ಕಾರ್ಯಕರ್ತರು ನಟ ಉಪೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಂಬೇಡ್ಕರ್ ಸೇನೆ ಅಧ್ಯಕ್ಷ ಕೆಂಪರಾಜು ಮಾತನಾಡಿ, ನಟ ಉಪೇಂದ್ರ ಒಬ್ಬ ದಲಿತ ವಿರೋಧಿ. ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ದಲಿತರನ್ನು ಕೀಲಾಗಿ ಕಂಡಿದ್ದು ನಮಗೆ ಮಾತ್ರವಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಂಡಿದ್ದಾರೆ. ಹೀಗಾಗಿ ಆತನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಮೇಲುಕೀಳು ಮನೋಭಾವ ಬದಲಾಗಿಲ್ಲ. ಸಾಮಾಜಿಕ ಅರಿವಿಲ್ಲದೆ ವ್ಯಕ್ತಿತ್ವ ಬೆಳೆಯಲಿಲ್ಲ. ಜಾತಿ ನಿಂದನೆ ನಿಂತಿಲ್ಲ. ನಟ ಉಪೇಂದ್ರ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜ್ಯಭಾರ ಮಾಡಲು ಹೊರಟಿರುವ ಆತನ ನಡವಳಿಕೆ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್ ಸೇನೆ ಮಹಿಳಾ ಜಿಲ್ಲಾದ್ಯಕ್ಷೆ ಸುಮ ಮಾತನಾಡಿ, ಸಾಮಾನ್ಯ ಜನರ ಮೇಲೆ ತೋರುವ ಕಾನೂನಿನ ದರ್ಪ ಉಪೇಂದ್ರನ ಮೇಲೆ ಏಕೆ ಪಾಲಿಸುತ್ತಿಲ್ಲ ಎಂದು ಸಡಿಮಿಡಿ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆ ಅಧ್ಯಕ್ಷ ಕೆಂಪರಾಜು. ಲಕ್ಷಿದೇವಮ್ಮ ಹೆಚ್ ಕೆ. ಗಿರಿಜಮ್ಮ. ನೇತ್ರಾವತಿ, ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular