Thursday, November 21, 2024
Google search engine
Homeಮುಖಪುಟಚಂದ್ರಯಾನ-3-ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ದೃವ ಪ್ರದೇಶದ ಮೇಲೆ ಇಳಿಸಿದ ಇಸ್ರೋ ವಿಜ್ಞಾನಿಗಳು

ಚಂದ್ರಯಾನ-3-ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ದೃವ ಪ್ರದೇಶದ ಮೇಲೆ ಇಳಿಸಿದ ಇಸ್ರೋ ವಿಜ್ಞಾನಿಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಜುಲೈ 14ರಂದು ಉಡಾವಣೆ ಮಾಡಿದ್ದ ಚಂದ್ರಯಾನ-3 ನೌಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ದೃವ ಪ್ರದೇಶಕ್ಕೆ ಯಶಸ್ವಿಯಾಗಿ ಇಳಿಸಲಾಗಿದೆ.

ಆಗಸ್ಟ್ 23 ರಂದು 5 ಗಂಟೆ 44 ನಿಮಿಷದಿಂದ ವಿಕ್ರಮ್ ಲ್ಯಾಂಡರ್ ವೇಗವನ್ನು ಕಡಿಮೆ ಮಾಡಿ ಸಂಜೆ 6 ಗಂಟೆ 3 ನಿಮಿಷಕ್ಕೆ ಯಶಸ್ವಿಯಾಗಿ ಇಳಿಸಲಾಯಿತು. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ವಿಕ್ರಮ್ ಲ್ಯಾಂಡರ್ ನಿಗದಿತ ಸಮಯಕ್ಕೆ ಇಳಿಯುತ್ತಿದ್ದಂತೆಯೇ ಇಸ್ರೋ ವಿಜ್ಞಾನಿಗಳು ಸಂಭ್ರಮ ವ್ಯಕ್ತಪಡಿಸಿದರು.

ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಂಟ್ರೋಲ್ ಕೇಂದ್ರದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ಚಂದ್ರಯಾನ-3 ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಚಂದಿರನಲ್ಲಿ ಈಗ ಭಾರತವಿದೆ ಎಂದು ಪ್ರಕಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular